ಚಿಕ್ಕನಾಯಕನಹಳ್ಳಿ : ಶೆಟ್ಟಿಕೆರೆ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ಉದ್ಘಾಟಿಸಲಾಯಿತು.
ಮುಖ್ಯ ಶಿಕ್ಷಕ ಲೋಕೇಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಇಕೋ ಕ್ಲಬ್ ಪ್ರಾರಂಭಿಸಲಾಗುತ್ತಿದೆ. ಶಾಲೆ ಪರಿಸರ ಅಂದವಾಗಿಸಲು ಇದು ಸಹಕಾರಿಯಾಗಲಿದ್ದು ಯಾವುದೇ ಜೀವಿಗೆ ತೊಂದರೆ ಉಂಟುಮಾಡದಿರುವುದೇ ನಿಜವಾದ ಪರಿಸರ ಸಂರಕ್ಷಣೆ ಎಂದು ಪ್ರತಿಪಾದಿಸಿದರು.
ವಿಜ್ಞಾನ ಶಿಕ್ಷಕ ಸಚಿನ್ ರೆಡ್ಡಿ ಮಾತನಾಡಿ ಗಿಡ ನೆಟ್ಟು ಪೋಷಿಸಿದಾಗ ಸುಂದರ ಪರಿಸರ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗುವುದರಿAದ ನಿಜಕ್ಕೂ ಫಲ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಎಸ್ಡಿಎಂಸಿ ಅಧ್ಯಕ್ಷೆ ಸರಿತಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.