Wednesday, 14th May 2025

Chikkaballapur News: ಪತ್ರಿಕಾ ವಿತರಕರಿಗೆ ಟ್ರಾಕ್ ಶೂಟ್ ವಿತರಿಸಿದ ಬ್ಯಾಚ್ ಆಫ್ ಸೋಶಿಯಲ್ ಸರ್ವಿಸ್

ಚಿಕ್ಕಬಳ್ಳಾಪುರ: ಬ್ಯಾಚ್ ಆಫ್ ಸೋಶಿಯಲ್ ಸರ್ವಿಸ್ ಬ್ಯಾಚಿನವರು ಇಂದು ಪಂಚಗಿರಿ ಬೋಧನಾ ಪ್ರೌಢಶಾಲೆ ಯಲ್ಲಿ ಟ್ರಾಕ್ ಡ್ರೆಸ್ ಮತ್ತು ಟಿ ಶರ್ಟ್ ಅನ್ನು ಬಾಸ್ ಬ್ಯಾಚಿನ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ರಾಕ್ ಡ್ರೆಸ್ ಮತ್ತು ಟೀ ಶರ್ಟ್ ಅನ್ನು ವಿತರಿಸಿದರು.

ನಗರದ ಪಂಚಗಿರಿ ಬೊಧನಾ ಪ್ರೌಢಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪತ್ರಿಕಾ ವಿತರಕರಿಗೆ ರಾಕ್ ಡ್ರೆಸ್ ಮತ್ತು ಟೀ ಶರ್ಟ್ ವಿತರಿಸಿ ಮಾತನಾಡಿದರು.

ಪತ್ರಿಕಾ ವಿತರಕರ ಕಾರ್ಯ ಯೋಧರ ಕಾರ್ಯವಿದ್ದಂತೆ . ಪ್ರತಿದಿನ ಬೆಳಿಗ್ಗೆ ನಾಲ್ಕು ರಿಂದ ಐದು ಗಂಟೆಗೆ ಎದ್ದು  ಮನೆ ಮನೆಗೆ ಹೋಗಿ ಪತ್ರಿಕೆಗಳನ್ನು ಹಂಚುತ್ತಿರುವ ಹುಡುಗರಿಗೆ ಟ್ರಾಕ್ ಡ್ರೆಸ್ ಮತ್ತು ಟೀ ಶರ್ಟ್  ವಿತರಣೆ ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ೨೦೨೧ ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದರೂ ಪ್ರಚಾರದಿಂದ ದೂರವಿದ್ದೆವು.ಪತ್ರಿಕೆಯನ್ನು ಹಂಚುತ್ತಿರುವ ಹುಡುಗರಿಗೆ ಇದೇ ಮೊದಲ ಬಾರಿಗೆ ಬಟ್ಟೆ ವಿತರಿಸಲು ಮುಂದಾಗಿದ್ದು ಬಹಳ ಒಳ್ಳೆಯ ಕೆಲಸವಾಗಿದೆ ಎಂದರು.

ಇಷ್ಟು ವರ್ಷಗಳಿಂದ ನಾವು ಅವಶ್ಯಕತೆ ಇರುವವರಿಗೆ ಔಷಧೋಪಚಾರ ದಿನಸಿ ಕಿಟ್ಟು ಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕ ತಂದೆ ತಾಯಿ ಇಲ್ಲದೆ ಇರುವ ಮಕ್ಕಳಿಗೆ ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವುದು ಮತ್ತು ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಮೂಲ ಉದ್ದೇಶವಾಗಿದೆ.

ಆ ನಿಟ್ಟಿನಲ್ಲಿ ಬಾಸ್ ಬ್ಯಾಚನ ಎಲ್ಲಾ ಸದಸ್ಯರು ಪ್ರತಿ ತಿಂಗಳು ೬೦೦ ಗಳಂತೆ ಪ್ರತಿಯೊಬ್ಬರು ಬ್ಯಾಂಕ್ ಖಾತೆಗೆ ಜಮಾನೆ ಮಾಡುತ್ತಾರೆ. ಪ್ರತಿ ವರ್ಷ ಶೇ.೨೦ರಷ್ಟು ಹೆಚ್ಚಿಸಲಾಗುತ್ತೆ ಎಲ್ಲಾ ವ್ಯವಹಾರಗಳು ಬ್ಯಾಂಕುಗಳ ಮೂಲಕವೇ ನಡೆಯುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ನಾವು ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಮಾಡುವ ಉದ್ದೇಶವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಹುಟ್ಟು ಸಾವು ಸಹಜ ಇದರ ಮಧ್ಯೆ ಸಮಾಜಕ್ಕೆ ಒಂದಿಷ್ಟು ಕೊಡುಗೆಯನ್ನು ಕೊಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು  ಕೆವಿ ನವೀನ್ ಕಿರಣ್ ಅವರು ತಿಳಿಸಿದರು. ಹಾಗೆ ಪ್ರತಿಯೊಬ್ಬರು ನನಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.  

ಈ ವೇಳೆ ಸಂಘಟನೆಯ ಬಿ ಮಹೇಶ್ , ಪ್ರವೀಣ್, ಆರ್, ವೆಂಕಟೇಶ್, ಸುಬ್ರಮಣ್ಯಂ, ನಾಯ್ಡು, ನಾಗಮೋಹನ್, ಮಹಾಂತೇಶ್, ಚಂದ್ರಕಾ0ತ್ ,ಹರೀಶ್, ಸುಬ್ಬು ಸ್ವಾಮಿ, ಶ್ರೀಮತಿ ಸುಜಾತ ನವೀನ್ ಕಿರಣ್ ಮತ್ತು ಶ್ರೀಮತಿ ದೀಪ್ತಿ ಪ್ರಿಯ, ಅಸ್ಲಾಂ ಪಾಷಾ , ಮಧು, ಸಿಬ್ಬು , ದಿವಂಗತರಾದ ಅಶೋಕ್ ( ಬಾಂಡ್) ಅವರ ಸಹೋದರಿ ಸೌಮ್ಯ ಈ ಗುಂಪಿನ ಸದಸ್ಯರು ಇದ್ದರು.