ದೆಹಲಿ: ರವಿ ಕಿಶನ್(Ravi Kishan) ಭೋಜ್ಪುರಿ ಚಿತ್ರರಂಗದ ಮೂಲಕ ಫೇಮಸ್ಸ್ ಆದ ನಟ, ಮಾತ್ರವಲ್ಲದೆ ಹಲವು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಪ್ರಖ್ಯಾತಿ ಗಳಿಸಿದ್ದಾರೆ. ರಾಜಕಾರಣಿಯೂ ಆಗಿರುವ ರವಿ ಕಿಶನ್ ಚಿತ್ರರಂಗದ ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಹಂಚಿಕೊಂಡಿದ್ದಾರೆ. ಕಾಸ್ಟಿಂಗ್ ಕೌಚ್(Casting couch) ಘಟನೆಗಳು ಇಂದು ಸರ್ವೇ ಸಾಮಾನ್ಯ ಎಂಬಂತೆ ತನ್ನ ಕದಂಬ ಬಾಹು ಚಾಚಿಕೊಂಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇದು ನಡೆಯುತ್ತಿರುತ್ತದೆ. ಚಿತ್ರರಂಗದಲ್ಲಿ ನನಗೂ ಆ ಅನುಭವ ಆಗಿತ್ತು. ಆದರೆ ನಾನು ಹೇಗೋ ಇದರಿಂದ ಪಾರಾಗಿದ್ದೇನೆ ಎಂದು ರವಿಕಿಶನ್ ಹೇಳಿದ್ದಾರೆ.
ಪಾಡ್ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಅವರು, ತಮ್ಮ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಬಹಿರಂಗ ಪಡಿಸಿದ್ದು “ಪ್ರತಿಯೊಂದು ವೃತ್ತಿಯಲ್ಲಿ, ಪ್ರತಿ ಉದ್ಯಮದಲ್ಲಿ, ಇಂತಹ ಘಟನೆಗಳು ನಡೆಯುತ್ತವೆ, ನೀವು ಸ್ಲಿಮ್ ಇದ್ದರೂ ಸುಂದರ, ಫಿಟ್ ಆಗಿದ್ದರೂ ಕಾಸ್ಟಿಂಗ್ ಕೌಚ್ ಸಾಮಾನ್ಯ ಒಂದು ವೇಳೆ ನಿಮ್ಮಲ್ಲಿ ಆರ್ಥಿಕ ಸಮಸ್ಯೆ ಇದ್ದರೂ ಇದು ನಡೆಯುತ್ತಿರುತ್ತದೆ. ಇದು ಎಲ್ಲ ನಟ ನಟಿಯರಿಗೂ ತಿಳಿದಿರುವ ಚಲನಚಿತ್ರ ವ್ಯವಹಾರದ ಒಂದು ಭಾಗ ಎಂದಿದ್ದಾರೆ.
ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡಿಸ್ ಸಿನಿಮಾ ಆಸ್ಕರ್ 2025ಕ್ಕೆ ಇದೀಗ ಅಧಿಕೃತವಾಗಿ ಆಯ್ಕೆ ಆಗಿದ್ದು ಕಿರಣ್ ರಾವ್ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಇವರು 160 ಪಾನ್ ತಿಂದಿದ್ದು ಶೂಟಿಂಗ್ ವೇಳೆಯೇ ಇವಿಷ್ಟೂ ಪಾನ್ ತಿಂದಿದ್ದೆ ಎಂದು ನಟ ರವಿ ಕಿಶನ್ ರಿವೀಲ್ ಮಾಡಿದ್ದಾರೆ. ನಾನು ಅದನ್ನು ಕೌಂಟ್ ಮಾಡಿದ್ದೆ. ಯಾಕೆಂದರೆ ಇದು ಸಿನಿಮಾಕ್ಕೆ ನಾನು ಮಾಡಿದ ತಯಾರಿ ಎಂದಿದ್ದಾರೆ.
ಆಸ್ಕರ್ ಗೆ ಆಯ್ಕೆ!
ಬಾಲಿವುಡ್ ಸಿನಿಮಾ ಲಾಪತಾ ಲೇಡಿಸ್ ಆಸ್ಕರ್ಗೆ ಆಯ್ಕೆಯಾಗಿದೆ. ಬಾಲಿವುಡ್ನ ಸ್ಟಾರ್ ನಟ ಅಮೀರ್ ಖಾನ್ ಅವರ ಮಾಜಿ ಪತ್ನಿ ಹಾಗೂ ಖ್ಯಾತ ನಿದೇಶಕಿ ಕಿರಣ್ ರಾವ್ ಅವರು ಲಾಪತಾ ಲೇಡಿಸ್ ಸಿನಿಮಾ ನಿರ್ದೇಶಿಸಿದ್ದು ಈ ಸಿನಿಮಾ ಹೆಚ್ಚು ಪ್ರಸಿದ್ದಿ ಪಡೆದಿತ್ತು. ಇದೀಗ ಈ ಸಿನಿಮಾ ಭಾರತದ ಅಧಿಕೃತ ಎಂಟ್ರಿಯಾಗಿ ಆಸ್ಕರ್ ಅಂಗಳ ಸೇರಿದೆ.
ಈ ಸುದ್ದಿಯನ್ನೂ ಓದಿ: BBK 11: ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರಹೋಗಲು ಏನು ಕಾರಣ?: ಇಲ್ಲಿದೆ ಅಸಲಿ ವಿಚಾರ