ಹಿಂದೆ ಸೈನ್ಯಕ್ಕೆ ಸೇರುವವರಿಗೆ ನಿವೃತ್ತಿಯಾದ ಬಳಿಕ ಸರಕಾರದ ವತಿಯಿಂದ ಉಚಿತವಾಗಿ ವ್ಯವಸಾಯ ಯೋಗ್ಯ ಭೂಮಿ ನೀಡುವ ಯೋಜನೆ ಜಾರಿಯಲ್ಲಿತ್ತು. ಕೆಲವು ದಶಕಗಳ ಹಿಂದಿನವರೆಗೂ ನಿವೃತ್ತ ಸೈನಿಕರಿಗೆ ಭೂ ಮಂಜೂ ರಾತಿ ಮಾಡಲಾಗುತ್ತಿತ್ತು. ಆದರೆ ಜನಸಂಖ್ಯೆ ಹೆಚ್ಚಳ ಮತ್ತು ಒತ್ತುವರಿ ಕಾರಣದಿಂದ ಈಗ ಸರಕಾರದ ಬಳಿ ಇರುವ ಭೂಮಿ ಅತ್ಯಲ್ಪ. ಇದೇ ಕಾರಣದಿಂದ ಕಳೆದ ಹಲವು ವರ್ಷಗಳಿಂದ ಭೂಮಿ, ನಿವೇಶನಕ್ಕೆ ಬೇಡಿಕೆ ಮುಂದಿಟ್ಟ ನಿವೃತ್ತ ಸೈನಿಕರಿಗೆ ಭೂ ಮಂಜೂರಾತಿ ಆಗಿರಲಿಲ್ಲ.
ಇದೀಗ ಇಂತಹ ಸೈನಿಕರಿಗೆ ಸಾಗುವಳಿ ಭೂಮಿಯ ಬದಲು ನಿವೇಶನ ನೀಡಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇದಲ್ಲದೆ ‘ಜವಾನ್ ಸಮ್ಮಾನ್’ ಹೆಸರಿನಲ್ಲಿ ಮಾಜಿ ಸೈನಿಕರಿಗೆ ಸರಕಾರದ ವೆಚ್ಚದಲ್ಲಿಯೇ ಬಡಾವಣೆ ಮಾಡಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.
ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಾದ ಸೈನಿಕರಿಗೆ ನಿವೇಶನ ನೀಡಲು ಹೊರಟಿರುವ ರಾಜ್ಯ ಸರಕಾರದ ಈ ನಡೆ ಸ್ವಾಗತಾರ್ಹ. “ರಾಜ್ಯದಲ್ಲಿರುವ ಮಾಜಿ ಸೈನಿಕರಿಗೆ ವ್ಯವಸಾಯದ ಉದ್ದೇಶಕ್ಕಾಗಿ ಭೂ ಮಂಜೂರಾತಿ ಮಾಡಲು ರಾಜ್ಯದಲ್ಲಿ ಸರಕಾರಿ ಭೂಮಿಯ ತೀವ್ರ ಕೊರತೆಯಿರುವುದರಿಂದ, ಅವರಿಗೆ ನಿವೇಶನ
ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಪ್ರಸ್ತುತ ಅಧಿವೇಶನ ಮುಗಿದ ಕೂಡಲೇ ‘ ಜವಾನ್ ಸಮ್ಮಾನ್’ ಹೆಸರಿನಲ್ಲಿ ಮಾಜಿ ಸೈನಿಕರಿಗೆ ಸರಕಾರಿ ವೆಚ್ಚದಲ್ಲಿಯೇ ಬಡಾವಣೆ ನಿರ್ಮಿಸಿ,
ನಿವೇಶನ ನೀಡುವ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸರಕಾರದ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗದೆ ಕೆಲವು ನಿವೃತ್ತ ಸೈನಿಕರು ಈ ಹಿಂದೆ ನ್ಯಾಯಾ ಲಯದ ಮೆಟ್ಟಿಲೇರಿದ್ದರು. ಹಲವರು ಜಿಲ್ಲಾಧಿಕಾರಿ ಕಚೇರಿಗೆ ಅಲೆದು ಸುಸ್ತಾಗಿದ್ದರು. ಮಾಜಿ ಸೈನಿಕರ ಈ ಬವಣೆ ಗಳಿಗೆ ಈ ಯೋಜನೆ ಮುಕ್ತಿ ದೊರಕಿಸುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಎಲ್ಲ ರೈತರಿಗೆ ಎಕರೆಗಟ್ಟಲೆ ಭೂಮಿ ನೀಡಲು ಸಾಧ್ಯವಿಲ್ಲ. ಆದರೆ ನಗರಕ್ಕೆ ಸಮೀಪ ಆಯಕಟ್ಟಿನ ಜಾಗದಲ್ಲಿ ನಿವೇಶನ ನೀಡುವ ಮೂಲಕ ಯೋಧರ ತ್ಯಾಗ,ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ಸಾಧ್ಯವಿದೆ.
ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ