ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಗಬ್ಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ (IND vs AUS) ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ವಿಶೇಷ ದಾಖಲೆ ಬರೆದಿದ್ದಾರೆ. ಆ ಮೂಲಕ 58 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಅರ್ಧಶತಕವನ್ನು ಸಿಡಿಸಿದ್ದಾರೆ.
ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ರವೀಂದ್ರ ಜಡೇಜಾಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಕಾಶವನ್ನು ನೀಡಲಾಯಿತು. ಆ ಮೂಲಕ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಕೈ ಬಿಡಲಾಗಿತ್ತು.ಅದರಂತೆ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ಗಮನ ಸೆಳೆದಿದ್ದಾರೆ. ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ ಬಳಿಕ ರವೀಂದ್ರ ಜಡೇಜಾ ಕ್ರೀಸ್ಗೆ ಬಂದಿದ್ದ ವೇಳೆ ಭಾರತ ತಂಡ 74ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಅರ್ಧಶತಕ ಬಾರಿಸಿದ ರವೀಂದ್ರ ಜಡೇಜಾ
ಭಾರತ ತಂಡ ಐದು ವಿಕೆಟ್ಗಳನ್ನು ಕಳೆದುಕೊಂಡಿದ್ದ ಬಳಿಕ ಕ್ರೀಸ್ಗೆ ಬಂದಿದ್ದ ರವೀಂದ್ರ ಜಡೇಜಾ ಬಹಳ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ರವೀಂದ್ರ ಜಡೇಜಾ, ಎದುರಿಸಿದ 123 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಏಳು ಬೌಂಡರಿಗಳೊಂದಿಗೆ 77 ರನ್ಗಳನ್ನು ಕಲೆ ಹಾಕಿದರು ಹಾಗೂ ಕೆಎಲ್ ರಾಹುಲ್ ಜೊತೆ ಮುರಿಯದ ಆರನೇ ವಿಕೆಟ್ಗೆ 67 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಅಂತಿಮವಾಗಿ ಅವರು, ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
A steady 50-run partnership for the 7th wicket between @imjadeja and Nitish Kumar Reddy!
— BCCI (@BCCI) December 17, 2024
Live – https://t.co/dcdiT9NAoa……… #AUSvIND pic.twitter.com/sWh4aiqe6c
56 ವರ್ಷಗಳ ಹಳೆಯ ದಾಖಲೆ ಮುರಿದ ಜಡೇಜಾ
ರವೀಂದ್ರ ಜಡೇಜಾ ಅವರು ತಮ್ಮ ಅರ್ಧಶತಕದ ಮೂಲಕ ದಿ ಗಬ್ಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ದಿ ಗಬ್ಬಾ ಕ್ರೀಡಾಂಗಣದಲ್ಲಿ ಏಳನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ ಮಾಜಿ ಭಾರತೀಯ ಆಟಗಾರ ಚಂದು ಬಾರ್ಡೆ ಅವರ ದಾಖಲೆಯನ್ನು ಮುರಿದಿದ್ದಾರೆ. ಅವರು 1968ರಲ್ಲಿ 7ನೇ ಕ್ರಮಾಂಕದಲ್ಲಿ 63 ರನ್ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಅವರು ಎಂಎಲ್ ಜಯಸಿಂಹ ಅವರ ಜೊತೆ 100 ರನ್ಗಳ ಜೊತೆಯಾಟವನ್ನು ಆಡಿದ್ದರು.
ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಜಡೇಜಾ
ಆಸ್ಟ್ರೇಲಿಯಾ ವಿರುದ್ಧ ಐದು ಇನಿಂಗ್ಸ್ಗಳಲ್ಲಿ ರವೀಂದ್ರ ಜಡೇಜಾ ಅವರು 56.75ರ ಸ್ಟ್ರೈಕ್ ರೇಟ್ನಲ್ಲಿ ರನ್ಗಳನ್ನು ಕಲೆ ಹಾಕಿದ್ದಾರೆ. ಆಸ್ಟ್ರೇಲಿಯಾದಲ್ಲಿ 400 ಅಥವಾ ಅದಕ್ಕಿಂತ ಜಾಸ್ತಿ ಎಸೆತಗಳನ್ನು ಎದುರಿಸಿರುವ ಬ್ಯಾಟ್ಸ್ಮನ್ಗಳ ಪೈಕಿ ಅತಿ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಕ್ರಿಕೆಟ್ ದೇವರು (53.20), ವಿರಾಟ್ ಕೊಹ್ಲಿ (50.96) ಹಾಗೂ ರೋಹಿತ್ ಶರ್ಮಾ (26.68) ಅವರು ರವೀಂದ್ರ ಜಡೇಜಾ ಅವರ ಹಿಂದೆ ಇದ್ದಾರೆ.
ಈ ಸುದ್ದಿಯನ್ನು ಓದಿ: KL Rahul: ಆರಂಭಿಕನಾಗಿ ವಿದೇಶಿ ನೆಲದಲ್ಲಿ ರಾಹುಲ್ ಟೆಸ್ಟ್ ಸಾಧನೆ ಹೇಗಿದೆ?