Saturday, 10th May 2025

Reliance Trends: ರಿಲಯನ್ಸ್ ಟ್ರೆಂಡ್ಸ್‌ನಿಂದ ವಿಶೇಷ ಆಫರ್‌; ಎಂಡ್ ಆಫ್ ಸೀಸನ್ ಎಕ್ಸ್‌ಕ್ಲೂಸಿವ್ ಡಿಸ್ಕೌಂಟ್‌!

Reliance Trends

ಬೆಂಗಳೂರು: ಭಾರತದ ಪ್ರಮುಖ ಫ್ಯಾಷನ್ ತಾಣವಾದ ರಿಲಯನ್ಸ್ ಟ್ರೆಂಡ್ಸ್‌ನಿಂದ (Reliance Trends) ಎಕ್ಸ್‌ಕ್ಲೂಸಿವ್ ಆದ ರಿಯಾಯಿತಿ ಆಫರ್ ಘೋಷಣೆ ಮಾಡಲಾಗಿದೆ. ಋತುವಿನ ಅಂತ್ಯಕ್ಕೆ ಇಂಥದ್ದೊಂದು ಆಫರ್ ನೀಡಲಾಗುತ್ತಿದೆ. ಈ ಸೀಸನ್ ಅಂತ್ಯದ ಮಾರಾಟವು ಇನ್ನೂ ರೋಮಾಂಚಕ ಹಾಗೂ ಗ್ರಾಹಕರಿಗೆ ಒಳ್ಳೆ ಪ್ರಯೋಜನ ಮತ್ತು ಅನುಕೂಲಕರವಾಗಲಿ ಎಂಬ ಕಾರಣಕ್ಕೆ ಟ್ರೆಂಡ್ಸ್‌ನಿಂದ ವಿಶೇಷ ಯೋಜನೆ ತಂದಿದೆ. ಇದರಲ್ಲಿ ಗ್ರಾಹಕರಿಗೆ ಶೇಕಡಾ 70ರ ತನಕ ರಿಯಾಯಿತಿ ನೀಡಲಾಗುತ್ತಿದೆ. ಈ ಯೋಜನೆಯು ಡಿಸೆಂಬರ್ 12ರಿಂದ ಆರಂಭವಾಗಿದೆ.

ಟ್ರೆಂಡ್ಸ್ ವಿಶೇಷತೆ ಏನೆಂದರೆ, ಭಾರತದಲ್ಲಿ ಎಲ್ಲರಿಗೂ ಫ್ಯಾಷನ್ ತಲುಪಿಸುವಂಥ ಕೆಲಸ ಮಾಡುತ್ತಿದೆ. ಅದಕ್ಕಾಗಿ ದೇಶದ ಮೂಲೆ ಮೂಲೆಗೆ, ಎಲ್ಲ ಗ್ರಾಹಕರಿಗೂ ತಲುಪಿಸುವ ಮತ್ತು ಕೈಗೆಟುಕುವಂತೆ ಮಾಡುತ್ತಿದೆ. ಅದು ಮೆಟ್ರೋ, ಮಿನಿ ಮೆಟ್ರೋದಿಂದ ಶ್ರೇಣಿ ಒಂದು, ಶ್ರೇಣಿ ಎರಡು ಪಟ್ಟಣಗಳು ಹಾಗೂ ಅದರ ಆಚೆಗೂ ರಿಲಯನ್ಸ್ ಟ್ರೆಂಡ್ಸ್ ವ್ಯಾಪಕವಾಗಿದೆ. ಇದರೊಂದಿಗೆ ಭಾರತದಲ್ಲಿ ಫ್ಯಾಷನ್ ಪ್ರಿಯರಿಗೆ ಖರೀದಿ ಮಾಡುವುದಕ್ಕೆ ನೆಚ್ಚಿನ ತಾಣವಾಗಿದೆ.

ಈ ಸುದ್ದಿಯನ್ನೂ ಓದಿ | Max Movie: ಕಿಚ್ಚ ಸುದೀಪ್ ಅಭಿನಯದ ʼಮ್ಯಾಕ್ಸ್ʼ ಚಿತ್ರದ ʼLions roarʼ ಹಾಡು ರಿಲೀಸ್

ಆಧುನಿಕ ಲುಕ್‌ಗೆ ಮತ್ತು ಒಳಾಂಗಣ- ಹೊರಾಂಗಣ ನೋಟಕ್ಕೆ ಟ್ರೆಂಡ್ಸ್ ಸ್ಟೋರ್‌ಗಳು ಬಹಳ ಅಚ್ಚುಮೆಚ್ಚಿನದ್ದಾಗಿದೆ. ದೇಶದ ಆಯಾ ಭಾಗದ ಖರೀದಿದಾರರು ಆಯ್ಕೆ ಮಾಡಿಕೊಳ್ಳುವಂಥ, ಮೆಚ್ಚುವಂಥ, ಸೂಕ್ತವಾಗುವಂಥ ದಿರಿಸುಗಳು ಹಾಗೂ ಪರಿಕರಗಳು, ಉತ್ತಮ ಗುಣಮಟ್ಟದ್ದು, ಕೈಗೆಟುಕುವಂಥ ಬೆಲೆಗೆ ಹಾಗೂ ಕೊಡುವ ಬೆಲೆಗೆ ಉತ್ತಮ ಮೌಲ್ಯ ನೀಡುವಂಥದ್ದಾಗಿರುತ್ತದೆ.

ಈ ಸುದ್ದಿಯನ್ನೂ ಓದಿ | Men’s Styling Tips: ಪ್ರತಿ ಪುರುಷರ ಆಕರ್ಷಕ ಲುಕ್‌ಗೆ ಸಾಥ್ ನೀಡುವ 5 ಸಿಂಪಲ್ ಅಂಶಗಳಿವು!

ಅನನ್ಯವಾಗಿ ವಿಶಿಷ್ಟ ಎನಿಸುವಂಥ, ಖರೀದಿಯ ಅದ್ಭುತ ಅನುಭವ ನೀಡುವಂಥದ್ದನ್ನು ಗ್ರಾಹಕರು ನಿರೀಕ್ಷೆ ಮಾಡಬಹುದು. ಮಹಿಳೆಯರು, ಪುರುಷರು ಹಾಗೂ ಮಕ್ಕಳ ಬಟ್ಟೆಗಳು, ಪರಿಕರಗಳನ್ನು ಕಡಿಮೆ ಬೆಲೆಯಲ್ಲಿ ಟ್ರೆಂಡ್ಸ್ ಸ್ಟೋರ್ಸ್‌ಗಳಿಂದ ಖರೀದಿ ಮಾಡಬಹುದು. ಎಂಡ್ ಆಫ್ ಸೀಸನ್ ಸೇಲ್ ಸಂದರ್ಭವನ್ನು ತಪ್ಪಿಸಿಕೊಳ್ಳದೆ, ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.