Sunday, 11th May 2025

Winter Torn Jacket Fashion: ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಟೊರ್ನ್ ಜಾಕೆಟ್ಸ್

Winter Torn Jacket Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಾನಾ ಬಗೆಯ ಡೆನಿಮ್ ಟೊರ್ನ್ ಜಾಕೆಟ್‌ಗಳು ಇದೀಗ ವಿಂಟರ್ ಸೀಸನ್ ಟ್ರೆಂಡಿ ಫ್ಯಾಷನ್ ಲಿಸ್ಟ್‌ಗೆ ಸೇರಿವೆ. ಅಂದಹಾಗೆ, ವಿಂಟರ್‌ನಲ್ಲಿ ಡೆನಿಮ್ ಟೊರ್ನ್ ಜಾಕೆಟ್‌ಗಳು (Winter Torn Jacket Fashion), ರಫ್ ಅಂಡ್ ಟಫ್ ಲುಕ್ ನೀಡುತ್ತವೆ. ಇತರೇ ಸಾಫ್ಟ್ ಮೆಟಿರೀಯಲ್‌ನಂತೆ ಸ್ಲೊಪಿಯಾಗಿ ಜಾರುವುದಿಲ್ಲ. ಮಿಡಿ, ಮಿನಿ, ಶಾರ್ಟ್, ಮೀಡಿಯಂ, ಲಾಂಗ್ ಸ್ಕರ್ಟ್ಸ್ ಹೀಗೆ ಎಲ್ಲವಕ್ಕೂ ಇವನ್ನು ಮಿಕ್ಸ್ ಮ್ಯಾಚ್ ಮಾಡಬಹುದು. ಸಿಂಪಲ್ ಟೀ ಶರ್ಟ್ ಮೇಲೆ ಧರಿಸಿದರೆ ಮಾಡರ್ನ್ ಲೇಯರ್ ಲುಕ್ ನೀಡುತ್ತವೆ. ಬಿಂದಾಸ್ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡುತ್ತವೆ. ಮೊದಲೆಲ್ಲಾ ಟೀನೇಜ್ ಯುವತಿಯರು ಮಾತ್ರ ಟೊರ್ನ್ ಜಾಕೆಟ್ಸ್ ಪ್ರಿಯರಾಗಿದ್ದರು. ಇದೀಗ ಟ್ರೆಂಡ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಎಲ್ಲಾ ವಯಸ್ಸಿನ ಮಾನಿನಿಯರು ಕೂಡ ಟೊರ್ನ್ ಜಾಕೆಟ್‌ಗಳ ಪ್ರಿಯರಾಗಿದ್ದಾರೆ. ಅದರಲ್ಲೂ ಇದೀಗ ಪ್ರಚಲಿತದಲ್ಲಿರುವ ಬಗೆಬಗೆಯ ಟೊರ್ನ್ ಜಾಕೆಟ್ ಮೋಹಕ್ಕೆ ಒಳಗಾಗಿದ್ದಾರೆ ಎನ್ನುತ್ತಾರೆ ಡಿಸೈನರ್ ಲವಿಶಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ 2 ಬಗೆಯ ಟೊರ್ನ್ ಜಾಕೆಟ್‌ಗಳು ಅತಿ ಹೆಚ್ಚು ಬೇಡಿಕೆಯಲ್ಲಿವೆ ಎನ್ನುತ್ತಾರೆ.

ಚಿತ್ರಗಳು: ಪಿಕ್ಸೆಲ್

ಲಾಂಗ್ ಟೊರ್ನ್ ಜಾಕೆಟ್ ಕಮಾಲ್

ಲಾಂಗ್ ಟೊರ್ನ್ ಜಾಕೆಟ್‌ ಅನ್ನು ಫ್ರಾಕ್ ಹಾಗೂ ಸ್ಟಿಲ್ಲೋಟ್ಸ್ ಮೇಲೆ ಧರಿಸುವ ಕಾನ್ಸೆಪ್ಟ್ ಇಂದು ಹೆಚ್ಚಾಗಿದೆ. ಇನ್ನು, ಎರಡು ಪಾಕೆಟ್ಸ್ ಹಾಗೂ ಕೊಂಚ ಪ್ಯಾಚ್ ವರ್ಕ್ ಇರುವಂತಹ ಡೆನಿಮ್ ಲಾಂಗ್ ಟೊರ್ನ್ ಜಾಕೆಟ್‌ಗಳು ಕೊಂಚ ಹೆವ್ವಿಯಾಗಿರುತ್ತವೆ. ಆದರೆ, ಇವು ಬೆಚ್ಚಗಿನ ಫೀಲ್ ಕೊಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ಕ್ರಾಪ್ ಟೊರ್ನ್ ಜಾಕೆಟ್ ಮಾಯೆ

ಧರಿಸಿದಾಗ ಟಮ್ಮಿ ಭಾಗದಿಂದ ಮೇಲ್ಭಾಗಕ್ಕೆ ಕೂರುವಂತಹ, ಮಾಡರ್ನ್ ಕ್ರಾಪ್ ಟೊರ್ನ್ ಜಾಕೆಟ್‌ಗಳು ಟೀನೇಜ್ ಹುಡುಗಿಯರ ಹಾಗೂ ಹಾಲಿವುಡ್ ಸೆಲೆಬ್ರೆಟಿಗಳ ಫೇವರೆಟ್ ಜಾಕೆಟ್‌ಗಳ ಲಿಸ್ಟ್‌ನಲ್ಲಿವೆ.
ಇನ್ನು ಕ್ರಾಪ್ ಜಾಕೆಟ್ ಧರಿಸುವಾಗ, ಇನ್ನರ್ ಟೀ ಶರ್ಟ್ ಹಾಗೂ ಪ್ಯಾಂಟ್ ಒಂದಕ್ಕೊಂದು ಮ್ಯಾಚ್ ಆಗಬೇಕು. ಇಲ್ಲವಾದಲ್ಲಿ ನೋಡಲು ಆಕರ್ಷಕವಾಗಿ ಕಾಣದು ಎಂಬುದು ಸ್ಟೈಲಿಸ್ಟ್‌ಗಳ ಸಲಹೆ. ಈ ಸೀಸನ್‌ನಲ್ಲಿ ಟೊರ್ನ್ ಡೆನಿಮ್ ಜಾಕೆಟ್‌ಗಳು ಹೈ ಸ್ಟ್ರೀಟ್ ಫ್ಯಾಷನ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ.

ಈ ಸುದ್ದಿಯನ್ನೂ ಓದಿ | Men’s Styling Tips: ಪ್ರತಿ ಪುರುಷರ ಆಕರ್ಷಕ ಲುಕ್‌ಗೆ ಸಾಥ್ ನೀಡುವ 5 ಸಿಂಪಲ್ ಅಂಶಗಳಿವು!

ಹೀಗಿರಲಿ ಟೊರ್ನ್ ಜಾಕೆಟ್ ಆಯ್ಕೆ

  • ಬಿಎಂಐ ಹಾಗೂ ಪರ್ಸನಾಲಿಟಿಗೆ ತಕ್ಕಂತೆ ಚೂಸ್ ಮಾಡುವುದು ಉತ್ತಮ.
  • ಬಟನ್ಸ್ ಇರುವ ಜಾಕೆಟ್‌ಗಳಾದಲ್ಲಿ ಕೊಂಚ ಲೂಸಾಗಿರುವುದು ಅಗತ್ಯ.
  • ಧರಿಸುವ ಪ್ಯಾಂಟ್ ಇಲ್ಲವೇ ಡ್ರೆಸ್‌ಗೆ ಸೂಟ್ ಆಗುವಂತೆ ಟ್ರಯಲ್ ಮಾಡಿ, ನೋಡಿ, ಧರಿಸಿ.
  • ಲಾಂಗ್ ಡೆನಿಮ್ ಜಾಕೆಟ್ ಉದ್ದಗಿರುವರಿಗೆ ಸೂಟ್ ಆಗುತ್ತವೆ.
  • ಶಾರ್ಟ್ ಸ್ಕರ್ಟ್ಸ್‌ಗೆ ಕ್ರಾಪ್ ಜಾಕೆಟ್ ಧರಿಸಬಹುದು.
  • ಆದಷ್ಟೂ ಇನ್ನರ್ ಟೀ ಶರ್ಟ್ ಅಥವಾ ಟಾಪ್‌ನ ನೆಕ್ಲೈನ್ ಜಾಕೆಟ್‌ಗೆ ಸೂಟ್ ಆಗುವಂತಿರಬೇಕು.

(ಲೇಖಕಿ ಫ್ಯಾಷನ್ ಪತ್ರಕರ್ತೆ)