Wednesday, 14th May 2025

70ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ ತಲೈವಾ

ಚೆನ್ನೈ : ತಮಿಳು ಚಿತ್ರರಂಗದ ಸೂಪರ್​ ಸ್ಟಾರ್ ರಜಿನಿಕಾಂತ್​ ಶನಿವಾರ 70ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಕಾಮನ್ ಡಿಪಿ ಮೂಲಕ ಅಭಿಮಾನಿಗಳು ಸಂಭ್ರಮದಿಂದ ಶುಭ ಹಾರೈಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ತಲೈವಾ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಸೆಲಬ್ರಿಟಿಗಳು ಹಾಗೂ ಅಭಿಮಾನಿಗಳು ಕಾಮನ್ ಡಿಪಿಯನ್ನು ತಮ್ಮ ಫೇಸ್​​ಬುಕ್, ವಾಟ್ಸಾಪ್​​​​​​​​​​​​​​​​​​​​​ ಸೇರಿ ಇತರ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್​​​ ಮಾಡುವ ಮೂಲಕ ರಜಿನಿಗೆ ಹಾರೈಸಿದ್ದಾರೆ.

ರಜಿನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಮುಂಬರಲಿರುವ ‘ಅಣ್ಣಾತೆ’ ಸಿನಿಮಾದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.

ರಜಿನಿಕಾಂತ್​​​​​12 ಡಿಸೆಂಬರ್​​​​​1950 ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲ ಹೆಸರು ಶಿವಾಜಿರಾವ್ ಗಾಯಕ್​ವಾಡ್. ಬೆಂಗಳೂರಿನ ಹನುಮಂತನಗರದಲ್ಲಿ ನೆಲೆಸಿದ್ದ ರಜಿನಿ ಕಾಲೇಜು ಶಿಕ್ಷಣ ಮುಗಿಸಿ ಕಂಡಕ್ಟರ್ ವೃತ್ತಿಗೆ ಸೇರಿದರು. ಬಾಲ್ಯದಿಂದಲೇ ಸಿನಿಮಾ ಹುಚ್ಚಿದ್ದ ರಜಿನಿ ಮದ್ರಾಸ್​​​​ಗೆ ತೆರಳಿ ಅಲ್ಲಿ ತರಬೇತಿ ಪಡೆದರು.

ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ರಜಿನಿಕಾಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. 1975 ರಲ್ಲಿ ಬಿಡುಗಡೆಯಾದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ರಜಿನಿಕಾಂತ್ ಕನ್ನಡ. ತಮಿಳು, ತೆಲುಗು, ಹಿಂದಿ ಸೇರಿ ನೂರಾರು ಜನಪ್ರಿಯ ಚಿತ್ರಗಳಲ್ಲಿ ನಟಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *