ಚಿಕ್ಕನಾಯಕನಹಳ್ಳಿ : ನ್ಯಾಯಾಲಯದ ಶಿರಸ್ತೇದಾರ್ ರವಿಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯಶಸ್ವಿನಿ ಎಜುಕೇಷನ್ ಸಂಸ್ಥೆ ನಡೆಸುತ್ತಿರುವ ಶ್ರೀ ಸಿದ್ದರಾಮೇಶ್ವರ ಕಿವುಡ ಮತ್ತು ಮೂಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ವಾಲ್ಮೀಕಿ ಸಮಾಜದ ಮುಖಂಡ ನಾಗರಾಜ್ ಸಿಹಿ ವಿತರಣೆ ಮಾಡಿದರು.
ನಾಗರಾಜ್ ಮಾತನಾಡಿ ಬಡವರ ಸೇವೆಯಲ್ಲಿ ನಿತ್ಯ ತೊಡಗಿಸಿಕೊಂಡಿರುವ ಶಿರಸ್ತೇದಾರ್ ರವಿಕುಮಾರ್ ಅವರು ಅನೇಕ ಬಡವರ ಮನದಲ್ಲಿ ನೆಲೆಸಿದ್ದಾರೆ. ಅನ್ನದಾನ ಸಹಿತ ಅವರ ಹುಟ್ಟುಹಬ್ಬಕ್ಕೆ ಆಡಂಬರ ತೊರದೆ ಸಮಾಜ ಮುಖಿ ಕೆಲಸ ಮಾಡುತ್ತಿದ್ದೇವೆ ಎಂದರು.
ರೈತ ಮುಖಂಡರುಗಳಾದ ಆನಂದ್, ಕುಮಾರ್, ಹಾಗಲವಾಡಿ ಶಂಕರ್ ಉಪಸ್ಥಿತರಿದ್ದರು.