Friday, 16th May 2025

Viral Video: ಬ್ರ್ಯಾಂಡೆಡ್‌ ಶೂಗಳನ್ನು ಕದ್ದು ಮಾರುತ್ತಿದ್ದ ಕಿಲಾಡಿ ಜೋಡಿ! ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಖತರ್ನಾಕ್ ದಂಪತಿ-ವಿಡಿಯೊ ನೋಡಿ

Viral Video

ಹೈದರಾಬಾದ್: ಅಕ್ಕ-ಪಕ್ಕದಮನೆಗಳಿಂದ ಚಪ್ಪಲಿ ಶೂಗಳನ್ನು ಕದಿಯುತ್ತಿದ್ದ ಕಿಲಾಡಿ ದಂಪತಿ ಖಾಕಿ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಈ ಇಬ್ಬರೂ ಹತ್ತಿರದ ಮನೆಗಳಿಂದ ಕದ್ದ ಡಜನ್‍ಗಟ್ಟಲೆ ಬೂಟುಗಳನ್ನು ಅನ್‌ಪ್ಯಾಕ್‌ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಶಂಕರ್ ಎಂಬ ಹೆಸರಿನ ವ್ಯಕ್ತಿ ಮನೆ ಹಾಗೂ ದೇವಾಲಯಗಳಿಗೆ ಹೋಗಿ ಚೆನ್ನಾಗಿ ಕಾಣುವ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಕದ್ದು ಉಪ್ಪಲ್‍ನಲ್ಲಿರುವ ತನ್ನ ನಿವಾಸದಲ್ಲಿ ಸಂಗ್ರಹಿಸುತ್ತಿದ್ದನಂತೆ. ನಂತರ, ದಂಪತಿ ಕದ್ದ ಬೂಟುಗಳಿಂದ ಹಣ ಸಂಪಾದಿಸಲು ಸ್ಥಳೀಯ ಮಾರುಕಟ್ಟೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಹೈದರಾಬಾದ್‍ನ ಗಂಡ-ಹೆಂಡತಿ ಇಬ್ಬರೂ ತಮ್ಮ ನೆರೆಹೊರೆಯ ಮನೆಯ ಶೂಗಳನ್ನು ಕದಿಯುವ ವಿಡಿಯೊವನ್ನು ಸ್ಥಳೀಯ ಪತ್ರಕರ್ತ ಸೂರ್ಯ ರೆಡ್ಡಿ ಇತ್ತೀಚೆಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೊ ವೈರಲ್(Viral Video) ಆಗಿದೆ.

ಅನುಮಾನಗೊಂಡ ವರದಿಗಾರರೊಬ್ಬರು ಪಾದರಕ್ಷೆ ಕಳ್ಳತನ ಮಾಡುತ್ತಿದ್ದ ದಂಪತಿಯ ಮನೆಗೆ ಭೇಟಿ ನೀಡಿದಾಗ, ಅವರು ತಮ್ಮ ಹಾಲ್‍ನಲ್ಲಿ ಹಲವಾರು ಬೂಟುಗಳನ್ನು ರಾಶಿಹಾಕಿಕೊಂಡಿರುವುದನ್ನು  ಗಮನಿಸಿದ ನಂತರ ಈ ವಿಲಕ್ಷಣ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಇದನ್ನು ವಿಡಿಯೊ ಮಾಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೈದರಾಬಾದ್ ದಂಪತಿಯ ಮನೆಯಿಂದ ರೆಕಾರ್ಡ್ ಮಾಡಲಾದ ವಿಡಿಯೊದಲ್ಲಿ ಅವರು  ಅನೇಕ ಜೋಡಿ ಬೂಟುಗಳನ್ನು ನೆಲದ ಮೇಲೆ ಹರಡಿಕೊಂಡಿದ್ದಾರೆ. ಈ ಶೂಗಳು ವಿಭಿನ್ನ ಗಾತ್ರಗಳು ಮತ್ತು ಬ್ರಾಂಡ್‍ಗಳಲ್ಲಿವೆ ಎಂದು ತಿಳಿದುಬಂದಿದೆ.

ಅವರ ಪಾದರಕ್ಷೆಗಳು ಪದೇ ಪದೆ ಕಾಣೆಯಾಗುತ್ತಿರುವುದನ್ನು ಗಮನಿಸಿದ ಯಾರೋ ಅದನ್ನು ತಮ್ಮ ಮನೆಗಳಿಂದ ಕದಿಯುತ್ತಿದ್ದಾರೆ ಎಂದು ಅನುಮಾನಗೊಂಡ ಸ್ಥಳೀಯರು ಶಂಕರ್ ಮನೆಗೆ ಕಾಲಿಟ್ಟಿದ್ದರಂತೆ. ಅವರ ಮನೆಗೆ ಭೇಟಿ ನೀಡಿದಾಗ, ಬೂಟುಗಳ ಬೃಹತ್ ಪ್ರದರ್ಶನವನ್ನು ನೋಡಿ ಅವರು ಶಾಕ್‌ ಆಗಿದ್ದಾರೆ ಮತ್ತು ಅವರ ಪತ್ನಿಯನ್ನು ಈ ಕೃತ್ಯದಲ್ಲಿ ರೆಡ್‍ಹ್ಯಾಂಡ್ ಆಗಿ ಹಿಡಿಯಲು ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.

ದಂಪತಿ ಈ ಪಾದರಕ್ಷೆಗಳನ್ನು ಮನೆ ಮತ್ತು ದೇವಾಲಯಗಳಿಂದ ಲಪಟಾಯಿಸುತ್ತಾರೆ ಎಂದು ವರದಿಯಾಗಿದ್ದರೂ, ಹೆಂಡತಿ ತನ್ನ ಗಂಡನ ಕೆಲಸಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾಳೆ ಮತ್ತು ವಸ್ತುಗಳನ್ನು ವಿಂಗಡಿಸಲು ಮತ್ತು ಹತ್ತಿರದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದಳು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: ‘ಅನಿಮಲ್’ ಸಿನಿಮಾದಿಂದ ಸ್ಫೂರ್ತಿ ಪಡೆದ ಜೋಡಿ ಮದುವೆ ಮಂಟಪದಲ್ಲಿ ಮಾಡಿದ್ದೇನು ನೋಡಿ

ನಿವಾಸಿಗಳು  ಶಂಕರ್ ಅವರ ಮನೆಗೆ ಪ್ರವೇಶಿಸಿದಾಗ ಮಹಿಳೆ ಶೂಗಳ ಚೀಲವನ್ನು ತೆರೆದು ನೆಲದ ಮೇಲೆ ರಾಶಿ ಹಾಕಿಕೊಂಡಿದ್ದಾಳಂತೆ. ಅವಳು ಕೂಡ ಈ ಅಪರಾಧದಲ್ಲಿ ಪಾಲುದಾರಳು ಎಂದು ಜನ ಅರಿತಿದ್ದಾರೆ. ಮಹಿಳೆ ತನ್ನ ಗಂಡನ ಪರವಾಗಿ ಮಾತನಾಡುವುದನ್ನು ಮತ್ತು ಅವನ ಕೃತ್ಯಗಳನ್ನು ಸಮರ್ಥಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.