Wednesday, 14th May 2025

Suchir Balaji Dead: AI ಸಂಶೋಧಕ ಸುಚಿರ್‌ ಬಾಲಾಜಿ ಫ್ರಾನ್ಸಿಸ್ಕೋದ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆ

ಸ್ಯಾನ್‌ ಫ್ರಾನ್ಸಿಸ್ಕೋ: ಓಪನ್‌ಎಐ(OpenAI) ಮಾಜಿ ಉದ್ಯೋಗಿ ಸುಚಿರ್‌ ಬಾಲಾಜಿ(Suchir Balaji) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ(Apartment) ಶವವಾಗಿ ಪತ್ತೆಯಾಗಿದ್ದಾರೆ ಎಂದು ತುಂಬಾ ತಡವಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕೃತಕ ಬುದ್ಧಿಮತ್ತೆ(Artificial Intelligence) ಸಂಶೋಧಕರಾಗಿದ್ದ ಭಾರತೀಯ ಮೂಲದ ಸುಚಿರ್ ಬಾಲಾಜಿ, ಕಂಪನಿಯನ್ನು ವಿರೋಧಿಸಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ 26 ವರ್ಷದ ಬಾಲಾಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ(Suchir Balaji Dead).

ಚಾಟ್‌ ಜಿಪಿಟಿಗೆ(Chat GPT) ಖ್ಯಾತಿ ಪಡೆದಿರುವ ಕೃತಕ ಬುದ್ಧಿಮತ್ತೆ (ಎಐ) ಕಂಪನಿಯ ಓಪನ್‌ಎಐನ ಮಾಜಿ ಉದ್ಯೋಗಿ ಸುಚಿರ್‌ ಬಾಲಾಜಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಕಂಪನಿಯಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧಕರಾಗಿದ್ದ ಭಾರತೀಯ ಮೂಲದ ಬಾಲಾಜಿ ಅವರ ಶವವು ಸ್ಯಾನ್‌ ಫ್ರಾನ್ಸಿಸ್ಕೋದ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದು,ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

ಸ್ಥಳೀಯ ಮಾಧ್ಯಮದ ವರದಿ ಪ್ರಕಾರ ಬಚನನ್‌ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನವೆಂಬರ್‌ 16ರಂದು ಸುಚಿರ್‌ ಬಾಲಾಜಿ ಶವ ಪತ್ತೆಯಾಗಿದೆ. 2020ರ ನವೆಂಬರ್‌ನಿಂದ 2024ರ ಆಗಸ್ಟ್‌ವರೆಗೆ ಇವರು ಓಪನ್‌ಎಐ ಕಂಪನಿಯಲ್ಲಿ ಕೆಲಸ ಮಾಡಿದ್ದರು.

ಏನಂದ್ರು ಎಲಾನ್ ಮಸ್ಕ್‌?

ಓಪನ್‌ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ಜೊತೆಗೆ ಬಹು ಕಾಲದಿಂದ ಭಿನ್ನಭಿಪ್ರಾಯ ಹೊಂದಿರುವ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಸುಚಿರ್‌ ಸಾವಿಗೆ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿದ್ದು ಟ್ವಿಟ್ಟರ್‌ನಲ್ಲಿ ‘ಹ್ಮ್(‌hmm)’ ಎಂದಷ್ಟೇ ಹೇಳಿದ್ದಾರೆ. ಎಲಾನ್‌ ಮಸ್ಕ್‌ ಹಾಗೂ ಸ್ಯಾಮ್ ಆಲ್ಟ್‌ಮನ್‌ 2015ರಲ್ಲಿ ಒಟ್ಟಾಗಿ ಓಪನ್‌ಎಐ ಕಂಪನಿಯನ್ನು ಆರಂಭಿಸಿದ್ದರು. ಆದರೆ ಮೂರು ವರ್ಷಗಳ ನಂತರ ಮಸ್ಕ್‌ ಓಪನ್‌ಎಐ ಕಂಪನಿಯಿಂದ ಹೊರ ಬಂದಿದ್ದರು. ಅಲ್ಲದೆ ಅದಕ್ಕೆ ಪ್ರತಿಸ್ಪರ್ಧಿ ಕಂಪನಿಯಾಗಿ ಎಕ್ಸ್‌ಎಐ ಅನ್ನು ಸ್ಥಾಪಿಸಿದ್ದರು

ಓಪನ್‌ ಎಐ ಕಂಪನಿಯನ್ನು ವಿರೋಧಿಸಿದ್ದ ಸುಚಿರ್‌ ಬಾಲಾಜಿ

ಓಪನ್ಎಐ ಕಾಪಿರೈಟ್‌ ಕಾನೂನು ಉಲ್ಲಂಘಿಸುತ್ತಿದೆ ಎಂದು ಸುಚಿರ್‌ ಬಾಲಾಜಿ ಅಕ್ಟೋಬರ್‌ ತಿಂಗಳಿನಲ್ಲಿ ದೂರಿದ್ದರು. ಈ ಮೂಲಕ ಭಾರೀ ಸುದ್ದಿಯಾಗಿದ್ದರು. ಅಲ್ಲದೆ, ‘ಇದೆಲ್ಲ ತಿಳಿದ ಮೇಲೆ ಕಂಪನಿ ತೊರೆಯದೆ ನಿಮಗೆ ಬೇರೆ ದಾರಿ ಎಲ್ಲ’ ಎಂದೂ ಹೇಳಿದ್ದರು. ಚಾಟ್‌ಜಿಪಿಟಿ ಅಂತರ್ಜಾಲವನ್ನು ಹಾಳುಗೆಡುವುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದರು.

ಎಐ ಮಾಡೆಲ್‌ಗಳನ್ನು ಸಿದ್ಧಪಡಿಸಲು ಡೇಟಾ ಕಾಪಿ ಮಾಡುವ ಓಪನ್‌ಎಐ ಪ್ರಕ್ರಿಯೆಯು ಸಂಭಾವ್ಯ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ. ಉತ್ಪಾದಿಸಿದ ಮಾಡೆಲ್‌ಗಳು ತಮ್ಮ ತರಬೇತಿಗೆ ಬಳಸಿದ ಡೇಟಾಗೆ ಹೋಲುವ ಔಟ್‌ಪುಟ್‌ಗಳನ್ನು ಉತ್ಪಾದಿಸುವುದು ಅಪರೂಪ. ತರಬೇತಿಯ ಸಮಯದಲ್ಲಿ ಕಾಪಿರೈಟ್‌ ಹೊಂದಿರುವ ವಸ್ತುಗಳನ್ನು ಪುನರಾವರ್ತಿಸುವ ಕ್ರಿಯೆಯನ್ನು ‘ನ್ಯಾಯಯುತ ಬಳಕೆಯ’ಯ ಅಡಿಯಲ್ಲಿ ರಕ್ಷಿಸದಿದ್ದರೆ ಇದು ಕಾನೂನುಗಳನ್ನು ಉಲ್ಲಂಘಿಸಬಹುದು ಎಂದಿದ್ದರು.

ಈ ಸುದ್ದಿಯನ್ನೂ ಓದಿ:Cabinet Expansion: ʼಮಹಾಯುತಿʼ ಸಚಿವ ಸಂಪುಟ ವಿಸ್ತರಣೆ; ನಾಳೆ ನೂತನ ಸಚಿವರ ಪ್ರಮಾಣ ವಚನ