ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲಿಬೆಲೆ ಗ್ರಾಮದಲ್ಲಿ ಘಟನೆ
ಚಿಂತಾಮಣಿ: ಕಾಲು ಜಾರಿ ರೈತನೋರ್ವ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಏನಿಗದಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಲಿಬೆಲೆ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಶುಭವನ್ನು ಕೃಷಿ ಹೊಂಡದಿAದ ಹೊರಕ್ಕೆ ತೆಗೆಯುವಲ್ಲಿ ಯಶಸ್ವಿ ಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಉಲಿಬೆಲೆ ಗ್ರಾಮದ ೪೫ ವರ್ಷದ ಈಶ್ವರಪ್ಪ ಬಿನ್ ವೆಂಕಟರಾಯಪ್ಪ ಎಂದು ಗುರುತಿಸಲಾಗಿದೆ.
ಗುರುವಾರ ಎಂದಿನAತೆ ಈಶ್ವರಪ್ಪ ತನ್ನ ತೋಟಕ್ಕೆ ಹೋದವರು ವಾಪಸ್ ಬರಲಿಲ್ಲ ರಾತ್ರಿ ಕುಟುಂಬದವರು ತೋಟದ ಬಳಿ ಹುಡುಕಾಡಿದರು ಈಶ್ವರಪ್ಪ ಪತ್ತೆಯಾಗಿಲ್ಲ.
ಇಂದು ಬೆಳಗ್ಗೆ ತೋಟದ ಬಳಿ ಇರುವ ಕೃಷಿ ಹೊಂಡದಲ್ಲಿ ಶವ ಕಂಡುಬAದಿದ್ದು ಕೂಡಲೇ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಂತರ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ಶಂಕೆ ವ್ಯಕ್ತಪಡಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಕರೆಸಿ ಶವವನ್ನು ಹೊರ ತೆಗೆಸಿದ್ದಾರೆ.
ಇನ್ನು ಘಟನೆ ಕುರಿತು ಕೆಂಚಾರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.