Saturday, 10th May 2025

Tumkur News: ಸಿದ್ಧಗಂಗಾ ಮಠದಿಂದ ದೇಣಿಗೆ ಸಂಗ್ರಹ, ಔಷಧ ವಿತರಣೆಗೆ ಯಾವುದೇ ವ್ಯಕ್ತಿ ನಿಯೋಜಿಸಿಲ್ಲ; ಎಸ್‌. ವಿಶ್ವನಾಥಯ್ಯ ಸ್ಪಷ್ಟನೆ

Tumkur News

ತುಮಕೂರು: ಕೆಲವು ಕಿಡಿಗೇಡಿಗಳು ತುಮಕೂರಿನ (Tumkur News) ಶ್ರೀ ಸಿದ್ಧಗಂಗಾ ಮಠದ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹ ಮಾಡುವುದು ಹಾಗೂ ಬಂಜೆತನಕ್ಕೆ ಔಷಧ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ಔಷಧ ವಿತರಣೆ ಮಾಡುವ ಸಲುವಾಗಿ ಅಥವಾ ದೇಣಿಗೆ ಸಂಗ್ರಹಿಸುವ ಸಲುವಾಗಿ ಮಠದಿಂದ ಯಾವುದೇ ವ್ಯಕ್ತಿಯನ್ನು ನಿಯೋಜನೆ ಮಾಡಿಲ್ಲ ಮತ್ತು ನೇಮಕ ಮಾಡಿಲ್ಲ ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್‌. ವಿಶ್ವನಾಥಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 378 ಹುದ್ದೆ; ಇಂದೇ ಅಪ್ಲೈ ಮಾಡಿ

ಕಿಡಿಗೇಡಿಗಳು ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಬಳಿ ಹೋಗಿ, ತಮ್ಮನ್ನು ದೇಣಿಗೆ ಸಂಗ್ರಹ ಮಾಡಲು ಹಾಗೂ ಬಂಜೆತನಕ್ಕೆ ಔಷಧ ವಿತರಣೆ ಮಾಡಲು ಮಠದಿಂದ ನಿಯೋಜನೆ ಮಾಡಲಾಗಿದೆ ಎಂದು ಸುಳ್ಳು ಹೇಳಿ ದೇಣಿಗೆ ಸಂಗ್ರಹ ಹಾಗೂ ಔಷಧ ವಿತರಣೆ ಮಾಡುತ್ತಿದ್ದಾರೆ. ಈ ವಂಚಕರ ಮಾತಿಗೆ ಮರುಳಾಗಿ ಸಾರ್ವಜನಿಕರು ಮೋಸ ಹೋಗಬಾರದು. ಹಿತೈಷಿಗಳು, ದೇಣಿಗೆ ಸಲ್ಲಿಸುವವರು ಮಠಕ್ಕೆ ನೇರವಾಗಿ ಅಥವಾ ಅಂಚೆ ಮುಖಾಂತರ ಖಾತೆಗೆ ನೇರವಾಗಿ ಸಲ್ಲಿಸಬಹುದು ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್‌.ವಿಶ್ವನಾಥಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.