ಮುಂಬೈ: ಭಾರತದ ಷೇರು ಮಾರುಕಟ್ಟೆಯಲ್ಲಿ (Stock Market) ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇತ್ತೀಚಿನ ಕುಸಿತದ ಬಳಿಕ ಮತ್ತೆ ಚೇತರಿಸುತ್ತಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರೂ ಮತ್ತೆ ಹೂಡಿಕೆ ಮಾಡುತ್ತಿದ್ದಾರೆ. ಹೀಗಿದ್ದರೂ, ಈಗಲೂ ಸೆನ್ಸೆಕ್ಸ್, 2024ರ ತನ್ನ ಸಾರ್ವಕಾಲಿಕ ಎತ್ತರಕ್ಕೆ ಹೋಲಿಸಿದರೆ, 5% ಕೆಳಮಟ್ಟದಲ್ಲಿದೆ. ಇದನ್ನು ಆಧರಿಸಿ ಜೆಎಂ ಫೈನಾನ್ಷಿಯಲ್ ಸಂಸ್ಥೆಯು 2025ರಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ನೀಡಬಲ್ಲ12 ಷೇರುಗಳನ್ನು ಪಟ್ಟಿ ಮಾಡಿದೆ. ಇವುಗಳು 50% ತನಕ ಏರಿಕೆಯಾಗುವ ನಿರೀಕ್ಷೆ ಇರುವುದರಿಂದ ಹೂಡಿಕೆದಾರರು ಪರಿಗಣಿಸಬಹುದು. ಪಟ್ಟಿಯ ವಿವರವನ್ನು ಈಗ ನೋಡೋಣ (JM Financial Picks Top Stocks).
ಎಕ್ಸಿಸ್ ಬ್ಯಾಂಕ್
ಮಾರುಕಟ್ಟೆಯಲ್ಲಿ ಈಗಿನ ದರ: 1,150 ರೂ.
ಟಾರ್ಗೆಟ್ ಪ್ರೈಸ್: 1,425 ರೂ.
ಏರಿಕೆ: 24%
ಜೆಎಂ ಫೈನಾನ್ಸಿಯಲ್ ಪ್ರಕಾರ ಎಕ್ಸಿಸ್ ಬ್ಯಾಂಕ್ ಬಿಗಿಯಾದ ಆರ್ಥಿಕ ಪರಿಸ್ಥಿತಿಯನ್ನೂ ಎದುರಿಸಿ ಬೆಳೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸಾಲ ವಿತರಣೆಗೆ ತಗಲುವ ವೆಚ್ಚ ಕೂಡ ನಿಯಂತ್ರಣದಲ್ಲಿದೆ. ಮ್ಯಾನೇಜಿಂಗ್ ಡೈರೆಕ್ಟರ್ ಅಮಿತಾಭ್ ಚೌಧುರಿ ಅವರ ಅವಧಿ ಮೂರು ವರ್ಷಗಳಿಗೆ ವಿಸ್ತರಣೆಯಾಗಿದೆ. ಐಸಿಐಸಿಐ ಬ್ಯಾಂಕಿನ ವಾಲ್ಯುಯೇಶನ್ ಪ್ರಕಾರ ಎಕ್ಸಿಸ್ ಬ್ಯಾಂಕ್ ಷೇರು ಈಗ 31% ಡಿಸ್ಕೌಂಟ್‌ನಲ್ಲಿ ದೊರೆಯುತ್ತಿದೆ. ಹೀಗಾಗಿ 24% ಲಾಭವನ್ನು ಹೂಡಿಕೆದಾರರಿಗೆ ನೀಡುವ ನಿರೀಕ್ಷೆ ಇದೆ.
ನಿಪ್ಪೋನ್ ಎಎಂಸಿ
ಮಾರುಕಟ್ಟೆಯಲ್ಲಿ ಈಗಿನ ದರ: 784 ರೂ.
ಟಾರ್ಗೆಟ್ ಪ್ರೈಸ್: 800 ರೂ.
ಏರಿಕೆ: 2%
ಮಾರುತಿ ಸುಜುಕಿ
ಮಾರುಕಟ್ಟೆಯಲ್ಲಿ ಈಗಿನ ದರ: 11,120 ರೂ.
ಟಾರ್ಗೆಟ್ ಪ್ರೈಸ್: 15,250 ರೂ.
ಏರಿಕೆ: 37%
ಮಾರುತಿ ಸುಜುಕಿ ಸತತವಾಗಿ ಎಸ್‌ಯುವಿಗಳನ್ನು ಬಿಡುಗಡೆಗೊಳಿಸುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ಮಾರುಕಟ್ಟೆಯಲ್ಲೂ ಸಾಕಷ್ಟು ಮುಂಚೂಣಿಯಲ್ಲಿದೆ. ಮಾರುತಿ ಸುಜುಕಿ ಷೇರಿನ ದರ 15,250 ರೂ.ಗೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸಂವರ್ಧನ ಮದರ್ಸನ್ ಇಂಟರ್‌ನ್ಯಾಶನಲ್
ಮಾರುಕಟ್ಟೆಯಲ್ಲಿ ಈಗಿನ ದರ: 167 ರೂ.
ಟಾರ್ಗೆಟ್ ಪ್ರೈಸ್: 210 ರೂ.
ಏರಿಕೆ: 26%
ನೋಯ್ಡಾ ಮೂಲದ ಸಂವರ್ಧನ ಮದರ್ಸನ್ ಇಂಟರ್‌ನ್ಯಾಶನಲ್ ಕಂಪನಿಯು ಕಾರುಗಳ ಬಿಡಿಭಾಗಗಳನ್ನು ಉತ್ಪಾದಿಸುತ್ತದೆ. ಬಹುರಾಷ್ಟ್ರೀಯ ಕಂಪನಿಯಾಗಿರುವ ಸಂವರ್ಧನ ಮದರ್ಸನ್ ಇಂಟರ್‌ನ್ಯಾಶನಲ್ ಸಂಸ್ಥೆಯ ಷೇರಿನ ದರ 167 ರೂ.ಗಳಿಂದ 210 ರೂ.ಗೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಅಹ್ಲುವಾಲಿಯಾ ಕಾಂಟ್ರ್ಯಾಕ್ಸ್ಟ್ ಲಿಮಿಟೆಡ್
ಮಾರುಕಟ್ಟೆಯಲ್ಲಿ ಈಗಿನ ದರ: 1,140 ರೂ.
ಟಾರ್ಗೆಟ್ ಪ್ರೈಸ್: 1,315 ರೂ.
ಏರಿಕೆ: 15%
ಕಳೆದ 5 ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅಹ್ಲುವಾಲಿಯಾ ಕಾಂಟ್ರ್ಯಾಕ್ಸ್ಟ್ ಕಂಪನಿಯ ಷೇರು ದರ 1,315 ರೂ.ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
KPIT ಟೆಕ್ನಾಲಜೀಸ್
ಮಾರುಕಟ್ಟೆಯಲ್ಲಿ ಈಗಿನ ದರ: 1,546 ರೂ.
ಟಾರ್ಗೆಟ್ ಪ್ರೈಸ್: 2,040 ರೂ.
ಏರಿಕೆ: 32%
KPIT ಟೆಕ್ನಾಲಜೀಸ್ ಕಂಪನಿಯು ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಆಟೊಮೋಟಿವ್ ಕಂಪನಿಗಳಿಗೆ ಎಂಜಿನಿಯರಿಂಗ್ ರಿಸರ್ಚ್ & ಡೆವಲಪ್‌ಮೆಂಟ್ ಸೇವೆಯನ್ನು ಒದಗಿಸುತ್ತದೆ. ಈ ಕಂಪನಿಯ ಷೇರಿನ ದರ 2,040 ರೂ.ಗೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಝೀ ಎಂಟರ್‌ಟೈನ್‌ಮೆಂಟ್
ಮಾರುಕಟ್ಟೆಯಲ್ಲಿ ಈಗಿನ ದರ: 136 ರೂ.
ಟಾರ್ಗೆಟ್ ಪ್ರೈಸ್: 2,00 ರೂ.
ಏರಿಕೆ: 47 %
ಝೀ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಅದಾಯ ಏರಿಕೆಯಾಗುವ ನಿರೀಕ್ಷೆಯನ್ನು ಮ್ಯಾನೇಜ್‌ಮೆಂಟ್ ಹೊಂದಿದೆ. ಕಂಪನಿಯ ಷೇರಿನ ದರ 136 ರೂ.ಗಳಿಂದ 200 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.
BHEL
ಮಾರುಕಟ್ಟೆಯಲ್ಲಿ ಈಗಿನ ದರ: 249 ರೂ.
ಟಾರ್ಗೆಟ್ ಪ್ರೈಸ್ : 371 ರೂ.
ಏರಿಕೆ: 50%
ಕೇಂದ್ರ ಸಾರ್ವಜನಿಕ ವಲಯದ ಎಲೆಕ್ಟ್ರಿಕಲ್ ಕಂಪನಿಯಾದ, ಬಿಎಚ್‌ಇಎಲ್ ಕಂಪನಿಯ ಷೇರಿನ ದರ 249 ರೂ.ಗಳಿಂದ 371 ರೂ.ಗೆ ಏರಿಕೆಯಾಗಬಹುದು ಎಂದು ವರದಿ ತಿಳಿಸಿದೆ. ಕಂಪನಿಯ ಆರ್ಡರ್ ಬುಕ್ ಬೆಳೆಯುತ್ತಿದೆ. ಹೀಗಾಗಿ ಆದಾಯವೂ ವೃದ್ಧಿಸುವ ನಿರೀಕ್ಷೆ ಇದೆ.
ಜೆಎಂ ಫೈನಾನ್ಷಿಯಲ್ ವರದಿಯ ಪ್ರಕಾರ, ಎಲೆಕ್ಟ್ರಿಕಲ್ ಎಕ್ವಿಪ್‌ಮೆಂಟ್ಸ್ ಉತ್ಪಾದಕ ಕಂಪನಿಯಾದ ಹ್ಯಾವೆಲ್ಸ್ ಷೇರಿನ ದರ ಈಗಿನ 1740 ರೂ.ಗಳಿಂದ 2031ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಅಂದರೆ 17% ಹೆಚ್ಚಳವಾಗಬಹುದು.
ತಂತ್ರಜ್ಞಾನ ವಲಯದ ಸಿಯೆಂಟ್ ಕಂಪನಿಯ ಷೇರಿನ ದರ 664 ರೂ.ಗಳಿಂದ 960 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.
ಹೆಲ್ತ್‌ಕೇರ್ ವಲಯದ ಮೆಟ್ರೊಪಾಲಿಸ್ ಸಂಸ್ಥೆಯ ಷೇರಿನ ದರ 2,216 ರೂ.ಗಳಿಂದ 2,500 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.
ಹೆಲ್ತ್ ಕೇರ್ ವಲಯದ ಗ್ಲೋಬಲ್ ಹೆಲ್ತ್ ಕಂಪನಿಯ ಷೇರಿನ ದರ 1,117 ರೂ.ಗಳಿಂದ 1,440 ರೂ.ಗೆ ಏರಿಕೆಯಾಗಬಹುದು. ಅಂದರೆ 29% ಏರಿಕೆಯಾಗಬಹುದು ಎಂದು ಜೆಎಂ ಫೈನಾನ್ಷಿಯಲ್ ವರದಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Major Changes: 2025ರಲ್ಲಿ ದುನಿಯಾ ಚೇಂಜ್! ಏನೆಲ್ಲ ಹೊಸ ಬದಲಾವಣೆ?