Thursday, 15th May 2025

ಹೈದರಾಬಾದ್-ಅಮೆರಿಕ ನಡುವೆ ಜ.15 ರಿಂದ ವಿಮಾನ ಯಾನ ಆರಂಭ

ಹೈದರಾಬಾದ್: ಹೈದರಾಬಾದ್ ಹಾಗೂ ಅಮೆರಿಕ ನಡುವೆ ಜನವರಿ 15ರಿಂದ ವಿಮಾನ ಸೇವೆ ಆರಂಭಗೊಳ್ಳಲಿದೆ.

ಏರ್‌ ಇಂಡಿಯಾ ವಿಮಾನವು ಹೈದರಾಬಾದ್ ಹಾಗೂ ಅಮೆರಿಕ ನಡುವೆ ಹಾರಾಟ ನಡೆಸಲಿದೆ. ಏರ್‌ ಇಂಡಿಯಾ ಬೆಂಗಳೂರು ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ನಡುವೆಯೂ ನೇರ ವಿಮಾನ ಸೇವೆ ನೀಡಲಿದೆ.

ಹೈದರಾಬಾದ್‌ನಿಂದ ಚಿಕಾಗೋಗೆ ವಿಮಾನ ಸಂಚರಿಸಲಿದೆ. ಹೈದರಾಬಾದ್‌ ಅಮೆರಿಕ ನಡುವೆ ವರ್ಷಕ್ಕೆ 7 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸಲಿದ್ದಾರೆ. ಹೈದರಾಬಾದ್‌ಗೆ ವಿಜಯವಾಡ, ವಿಶಾಖಪಟ್ಟಣಂ, ನಾಗ್ಪುರ, ರಾಜಮುಂಡ್ರಿ, ಭೋಪಾಲ್, ಹಾಗೂ ತಿರುಪತಿ ಹತ್ತಿದ ಸ್ಥಳಗಳಾಗಿದ್ದು, ಪ್ರತಿ ವರ್ಷ ಹೆಚ್ಚುವರಿಯಾಗಿ 220,000 ಮಂದಿ ಪ್ರಯಾಣಿಸುವ ಸಾಧ್ಯತೆ ಇದೆ.

ಬೆಂಗಳೂರು ಹಾಗೂ ಅಮೆರಿಕ ನಡುವೆ ಏರ್ ಇಂಡಿಯಾ ನೇರ ವಿಮಾನ ಸಂಪರ್ಕವನ್ನು ಕಲ್ಪಿಸಲಿದೆ. 2021ರ ಜನವರಿ 11ರಿಂದ ಈ ವಿಮಾನ ಸೇವೆ ಆರಂಭವಾಗಲಿದೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವೆ ಏರ್ ಇಂಡಿಯಾ ತಡೆ ರಹಿತ ನೇರ ವಿಮಾನ ಸೇವೆಯನ್ನು ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ.

ಡಿ.10ರಿಂದ ಮೈಸೂರು-ಮಂಗಳೂರು ವಿಮಾನ ಸೇವೆ ಸ್ಯಾನ್ ಫ್ರಾನ್ಸಿಸ್ಕೋ ರಾಜ್ಯದ ಸಿಲಿಕಾನ್ ವ್ಯಾಲಿ ಮತ್ತು ಸಾಫ್ಟ್‌ವೇರ್‌ ರಫ್ತಿನಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ಬೆಂಗಳೂರು ನಗರದ ನಡುವೆ ನೇರ ವಿಮಾನ ಸೇವೆ ಆರಂಭವಾಗಲಿದೆ.

ಸ್ಟಾರ್ಟ್‌ ಅಪ್ ಕ್ಷೇತ್ರದಲ್ಲಿಯೂ ಬೆಂಗಳೂರು ಬೆಳವಣಿಗೆ ಹೊಂದುತ್ತಿದ್ದು, ನೇರ ವಿಮಾನ ಸೇವೆಯಿಂದ ಕಂಪನಿಗಳು ನೇರವಾಗಿ ಸಿಲಿಕಾನ್ ಸಿಟಿ ಜೊತೆ ಸಂಪರ್ಕ ಸಾಧಿಸಲು ಸಹಾಯಕವಾಗಲಿದೆ.

Leave a Reply

Your email address will not be published. Required fields are marked *