ಬೆಂಗಳೂರು: ರಿಲಯನ್ಸ್ ಜಿಯೋ ಕಂಪನಿಯು (Reliance Jio) ಹೊಸ ವರ್ಷವನ್ನು ಸ್ವಾಗತಿಸಲು ತನ್ನ ಗ್ರಾಹಕರಿಗೆ ‘ನ್ಯೂ ಇಯರ್ ವೆಲ್ಕಮ್ ಪ್ಲಾನ್ -2025’ ಬಿಡುಗಡೆ ಮಾಡಿದೆ. ಈ ಯೋಜನೆಯ ಬೆಲೆ ₹ 2025 ನಿಗದಿಪಡಿಸಲಾಗಿದೆ. ದೀರ್ಘಾವಧಿಯ ಯೋಜನೆ ಇದಾಗಿದ್ದು, ಅನಿಯಮಿತ 5ಜಿ ಡೇಟಾ, ಉಚಿಯ ಎಸ್ಎಂಎಸ್ ಮತ್ತು 200 ದಿನಗಳ ಅನಿಯಮಿತ 5ಜಿ ಡೇಟಾ, ವಾಯ್ಸ್, ಎಸ್ಎಂಎಸ್ ಜತೆಗೆ ₹2,150ರ ಮೌಲ್ಯದ ಕೂಪನ್ ಸಹ ಸಿಗಲಿದೆ.
ಯಾರಿಗೆಲ್ಲ ಲಭ್ಯ?
ಈ ಯೋಜನೆಯು ಜಿಯೋದ ಹಾಲಿ ಮತ್ತು ಹೊಸ ಗ್ರಾಹಕರಿಗೂ ಲಭ್ಯ. 2024 ರ ಡಿಸೆಂಬರ್ 11ರಿಂದ 2025 ರ ಜನವರಿ 11 ರವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ. ಮೈ ಜಿಯೋ ಆ್ಯಪ್, ಜಿಯೋದ ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ರಿಟೇಲರ್ ಮೂಲಕ ರೀಚಾರ್ಜ್ ಮಾಡಬಹುದು.
ಈ ಸುದ್ದಿಯನ್ನೂ ಓದಿ | Job Fair: ಜ.19ರಂದು ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳ
ಯೋಜನೆಯ ವಿವರ ಹೀಗಿದೆ
ಅನಿಯಮಿತ 5ಜಿ ಡೇಟಾ:
- 500 ಜಿಬಿಯಷ್ಟು 4 ಜಿ ಡೇಟಾ (ದಿನಕ್ಕೆ 2.5 ಜಿಬಿಯಷ್ಟು)
- ಅನಿಯಮಿತ ಕರೆ ಮತ್ತು ಎಸ್ಎಂಎಸ್ ಸೇವೆ
- ₹2,150 ರ ಮೌಲ್ಯದ ಪಾರ್ಟ್ನರ್ ಕೂಪನ್
ಜಿಯೋದ ₹349 ರ ಪ್ಲಾನ್ 200 ದಿನಗಳಿಗೆ ₹2,493 ರಷ್ಟು ಆಗುತ್ತದೆ. ಇದಕ್ಕೆ ಹೋಲಿಸಿದರೆ ಈ ಹೊಸ ಪ್ಲಾನ್ನಲ್ಲಿ ₹468 ರಷ್ಟು ಉಳಿತಾಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.