ಭೋಜ್‌ಪುರಿ ಚಿತ್ರರಂಗದ ಸೂಪರ್ ಹಿಟ್ ಜೋಡಿ ನಿರಾಹುವಾ ಮತ್ತು ಅಮ್ರಪಾಲಿ ದುಬೆ ಅವರ ಜನಪ್ರಿಯತೆ ಎಷ್ಟಿದೆಯೆಂದರೆ ಅವರ ಹಾಡುಗಳು ಮತ್ತು ಚಲನಚಿತ್ರಗಳು ಬಿಡುಗಡೆಯಾದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತವೆ. ಅಷ್ಟೇ ಅಲ್ಲದೇ ಹಾಡುಗಳು ಬಿಡುಗಡೆಯಾಗಿ ಹಲವು ವರ್ಷಗಳು ಕಳೆದ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್ ಆಗುತ್ತಿರುತ್ತವೆ. ಅಂತಹದ್ದೇ ಮತ್ತೊಂದು ಹಾಡು ಇದೀಗ ಗಮನ ಸೆಳೆಯುತ್ತಿದೆ.
ದಿನೇಶ್ ಲಾಲ್ ಯಾದವ್ ನಿರಾಹುವಾ ಮತ್ತು ಅಮ್ರಪಾಲಿ ದುಬೆ ನಟಿಸಿದ ಸೂಪರ್ ಹಿಟ್ ರೊಮ್ಯಾಂಟಿಕ್ ಹಾಡು ‘ಜಡಾ ಲಗೆ ಬಡಾ ಕಾಡಾ’. ಈ ಹಾಡಿನಲ್ಲಿ, ಗಡ ಗಡ ನಡುಗಿಸುವ ಚಳಿಯಲ್ಲಿ ನಿರಾಹುವಾ ಅವರು ಆಮ್ರಪಾಲಿಯನ್ನು ನೆನಪಿಸಿಕೊಳ್ಳುತ್ತಾರೆ. ಈ ರೊಮ್ಯಾಂಟಿಕ್ ಹಾಡನ್ನು ಪ್ರೇಕ್ಷಕರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ.

ಈ ಹಾಡಿಗೆ ಓಂ ಝಾ ಸಂಗೀತ ಸಂಯೋಜಿಸಿದ್ದಾರೆ. ಇದು ತುಂಬಾ ಅದ್ಭುತವಾಗಿದೆ. ಅದೇ ಸಮಯದಲ್ಲಿ,’ಜಡಾ ಲಗೆ ಬಡಾ ಕಾಡಾ’ ಯೂಟ್ಯೂಬ್‍ನಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
“ನಮ್ಮ ಯುಪಿಯ ಸಿಂಹ ದಿನೇಶ್ ಲಾಲ್ ಜಿ ಅವರಿಗೆ ನಮಸ್ಕಾರ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಜೈ ಹೋ ಜುಬಿಲಿ ಸ್ಟಾರ್ ನಿರಾಹುವಾ” ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಅಭಿಮಾನಿ, “ವಾವ್, ಬ್ರದರ್, ತುಂಬಾ ಕೂಲ್” ಎಂದು ಹೇಳಿದ್ದಾರೆ.
ಅದ್ಭುತ ಜೋಡಿ
ನಿರಾಹುವಾ ಮತ್ತು ಅಮ್ರಪಾಲಿ ದುಬೆ ಜೋಡಿಯನ್ನು ಭೋಜ್‌ಪುರಿಯ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇವರಿಬ್ಬರ ಚಲನಚಿತ್ರಗಳು ಮತ್ತು ಹಾಡುಗಳು ಜನರನ್ನು ಮೋಡಿ ಮಾಡುತ್ತವೆ. ಇವರು ಪ್ರತಿ ಬಾರಿಯೂ ಸೂಪರ್ ಹಿಟ್ ಹಾಡು ಮತ್ತು ಸಿನಿಮಾಗಳನ್ನು ನೀಡುತ್ತಾರೆ.
ಈ ಸುದ್ದಿಯನ್ನೂ ಓದಿ: ಹಾಸ್ಟೆಲ್‌ನಲ್ಲೇ ಮಗುವನ್ನು ಹೆತ್ತು ಕಿಟಿಕಿಯಿಂದ ಹೊರಗೆಸೆದ ಬಾಲಕಿ
‘ಜಡಾ ಲಗೆ ಬಡಾ ಕಾಡಾ’ ಹಾಡಿನ ಜನಪ್ರಿಯತೆಗೆ ದೊಡ್ಡ ಕಾರಣವೆಂದರೆ ಹಾಡಿನ ಕಥೆ, ಸಂಗೀತ. ಮಾತ್ರವಲ್ಲ ಈ ಇಬ್ಬರು ತಾರೆಯರ ಅಭಿನಯವು ಜನರ ಹೃದಯವನ್ನು ಗೆದ್ದಿದೆ. ಅದಕ್ಕಾಗಿಯೇ ಈ ಹಾಡು ಇನ್ನೂ ಜನರ ಹಾಟ್ ಫೆವರೇಟ್ ಎನಿಸಿಕೊಂಡಿದೆ. ಈ ಚಳಿಯಲ್ಲಿ ನಿರಾಹುವಾ ಮತ್ತು ಅಮ್ರಪಾಲಿ ಅವರ ಪ್ರಣಯವನ್ನು ಆನಂದಿಸಲು ನೀವು ಬಯಸಿದರೆ, ಈ ಹಾಡನ್ನು ಒಮ್ಮೆ ನೋಡಿ.