Tuesday, 13th May 2025

2024 Flashback: 2024ರಲ್ಲಿ ಭಾರತೀಯರು ಅತಿಹೆಚ್ಚು Google Search ಮಾಡಿದ ವಿಷಯಗಳೇನು? ಇಲ್ಲಿದೆ ಮಾಹಿತಿ

ನವದೆಹಲಿ: ಇನ್ನೇನು ಕೇವಲ ಒಂದು ದಿನ ಅಷ್ಟೇ ಬಾಕಿ ನೋಡಿ 2024 ರ ವರ್ಷಕ್ಕೆ ಗುಡ್‌ಬೈ ಹೇಳಿ, ಮುಂದಿನ 2025 ರ ವರ್ಷಕ್ಕೆ ಕಾಲಿಡುತ್ತೇವೆ. ಇಂತಹ ಸಂದರ್ಭದಲ್ಲಿ ಈ ವರ್ಷ ಏನೆಲ್ಲಾ ಟ್ರೆಂಡಿಂಗ್‌ನಲ್ಲಿದ್ದವು (Trending) ಅಂತ ನಾವೆಲ್ಲಾ ಯೋಚನೆ ಮಾಡಿಯೇ ಇರುತ್ತೇವೆ(2024 Flashback). ಈ ವರ್ಷ ಜನರು ಯಾವ ಯಾವ ವಿಷಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳಲು ಇಷ್ಟಪಟ್ಟಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಗೂಗಲ್ (Google) ಸರ್ಚ್ ಇಂಜಿನ್ ವಾರ್ಷಿಕವಾಗಿ ತನ್ನ ವಿಶೇಷ “ಇಯರ್ ಇನ್ ಸರ್ಚ್” ವರದಿಯಲ್ಲಿ ವಿವಿಧ ಥೀಮ್‌ಗಳಲ್ಲಿ ಹೆಚ್ಚು ಹುಡುಕಲಾದ ವಿಷಯಗಳ ಪಟ್ಟಿಯನ್ನು ಸಂಗ್ರಹಿಸುತ್ತದೆ.

ಇತ್ತೀಚೆಗೆ ಬಿಡುಗಡೆಯಾದ 2024 ರ ವರದಿಯು ವರ್ಷವಿಡೀ ಭಾರತದಲ್ಲಿನ ಜನರು ಹುಡುಕಿದ (search) ಎಲ್ಲವನ್ನೂ ಹೈಲೈಟ್ ಮಾಡಿದೆ. ಗಮನಾರ್ಹವಾಗಿ, ದೇಶದಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ವಿಷಯಗಳಾವವು ಎಂಬ ಪಟ್ಟಿಯನ್ನು ಗೂಗಲ್ ಬುಧವಾರ ಬಿಡುಗಡೆ ಮಾಡಿದೆ. ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್(IPL), ಟಿ20 ವಿಶ್ವಕಪ್(“T20 World Cup) ಶಬ್ದಗಳನ್ನು ಜನ ಅತಿ ಹೆಚ್ಚಾಗಿ ಸರ್ಚ್(search) ಮಾಡಿದ್ದಾರೆ.

“ಇಂಡಿಯನ್ ಪೀಮಿಯರ್ ಲೀಗ್(IPL) ಈ ವರ್ಷದ ಅತ್ಯಂತ ಪ್ರಮುಖ ಸುದ್ದಿಯಾಗಿದೆ. ದೇಶ ವಿದೇಶಗಳಲ್ಲಿ ಜನ ಈ ಬಗ್ಗೆ ಬಹಳಷ್ಟು ಮಾಹಿತಿ ಜಾಲಾಡಿದ್ದಾರೆ” ಎಂದು ಗೂಗಲ್ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದೆ. ಇನ್ನುಟಿ20 ವಿಶ್ವಕಪ್ “T20 World Cup ಹಾಗೂ ರತನ ಟಾಟಾ(Ratan Tata) ಎಂಬ ಕೀ ವರ್ಡ್​ನಿಂದ ಆರಂಭವಾಗುವ ಸರ್ಚ್ ವಿಷಯಗಳು ಮುಂಚೂಣಿಯಲ್ಲಿದೆ.

ಹಾಗೇ ಭಾರತೀಯ ಜನತಾ ಪಾರ್ಟಿ (Bharatiya Janata Party), ಚುನಾವಣಾ ಫಲಿತಾಂಶಗಳು 2024 (Election Results 2024) ಮತ್ತು ಒಲಿಂಪಿಕ್ಸ್ 2024 (Olympics 2024) ಕುರಿತ ಪ್ರಶ್ನೆಗಳು ಟಾಪ್​ ಐದರಲ್ಲಿ ಸ್ಥಾನಗಳು ಪಡೆದು ಕೊಂಡಿದ್ದು, ಅತಿಯಾದ ಶಾಖ (excessive heat), ರತನ್ ಟಾಟಾ (Ratan Tata) , ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(Indian National Congress) ಪ್ರೊ ಕಬಡ್ಡಿ ಲೀಗ್( Pro Kabaddi ) ಮತ್ತು ಇಂಡಿಯನ್ ಸೂಪರ್ ಲೀಗ್(Indian Super League) ಭಾರತದಲ್ಲಿ ಈ ವರ್ಷದ ಟಾಪ್ 10 ಟ್ರೆಂಡ್‌ಗಳಲ್ಲಿ ಸ್ಥಾನ ಪಡೆದಿವೆ.

ಇಷ್ಟೇ ಅಲ್ಲದೇ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಪುತ್ರ ಅನಂತ್ (Anant Ambani) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಧಿಕಾ ಮರ್ಚೆಂಟ್ (Radhika Merchant) ಬಗ್ಗೆಯೂ ಅತೀ ಹೆಚ್ಚು ಜನರು ಗೂಗಲ್ ಮಾಡಿದ್ದು, ಅವರ ಹಿನ್ನಲೆ, ವಿದ್ಯಾರ್ಹತೆ, ಆಸ್ತಿ-ಪಾಸಿ ಇತ್ಯಾದಿ ವಿಷಗಳ ಕುರಿತು ಜನರು ಸರ್ಚ್ ಮಾಡಿದ್ದಾರೆ.

ಈ ವರ್ಷ Google ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ವಿಷಯಗಳು:

  1. ಇಂಡಿಯನ್ ಪ್ರೀಮಿಯರ್ ಲೀಗ್
  2. ಟಿ20 ವಿಶ್ವಕಪ್
  3. ಭಾರತೀಯ ಜನತಾ ಪಕ್ಷ
  4. ಚುನಾವಣಾ ಫಲಿತಾಂಶಗಳು 2024
  5. ಒಲಿಂಪಿಕ್ಸ್ 2024
  6. ವಿಪರೀತ ಶಾಖ
  7. ರತನ್ ಟಾಟಾ
  8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  9. ಪ್ರೊ ಕಬಡ್ಡಿ ಲೀಗ್
  10. ಇಂಡಿಯನ್ ಸೂಪರ್ ಲೀಗ್

ಈ ಸುದ್ದಿಯನ್ನೂ ಓದಿ: Video Viral: ಶವಪೆಟ್ಟಿಗೆಯೊಳಗಿದ್ದ ಮಹಿಳೆ ಒಮ್ಮೆಲೆ ಕಣ್ಣು ಬಿಟ್ಳು! ಬೆಚ್ಚಿಬಿದ್ದ ಜನ- ವಿಡಿಯೊ ವೈರಲ್