Monday, 19th May 2025

Mushtaq Khan: ವೆಲ್‌ಕಮ್‌, ಸ್ತ್ರೀ 2 ಖ್ಯಾತಿಯ ನಟ ಕಿಡ್ನಾಪ್‌…12 ಗಂಟೆ ಟಾರ್ಚರ್‌; 1ಕೋಟಿ ರೂ.ಗೆ ಬೇಡಿಕೆ

mushtaq khan

ಮುಂಬೈ: ಬಾಲಿವುಡ್‌ನ ಸೂಪರ್‌ ಹಿಟ್‌ ಸಿನಿಮಾಗಳಾದ ವೆಲ್‌ಕಮ್‌(Welcome) ಮತ್ತು ಸ್ತ್ರೀ 2(Stree2)ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮುಷ್ತಾಕ್‌ ಖಾನ್(Mushtaq Khan) ಅವರನ್ನು ಕಿಡಿಗೇಡಿಗಳು ಬಂಧಿಸಿ 12ಗಂಟೆಗಳಿಗೂ ಅಧಿಕಾರ ಕಾಲ ಚಿತ್ರಹಿಂಸೆ ನೀಡುರುವ ವರದಿಯಾಗಿದೆ. ಅಪಹರಣಕಾರರು ಮುಷ್ತಾಕ್‌ ಖಾನ್ ಅವರನ್ನು ಉಪಾಯವಾಗಿ ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಬಳಿಕ ಕಿಡ್ನಾಪ್‌ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ವಿವರ:

ಮುಷ್ತಾಕ್‌ ಖಾನ್ ಅವರನ್ನು ವಿಮಾನ ಟಿಕೆಟ್‌ಗಳೊಂದಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು ಮತ್ತು ಅವರ ಖಾತೆಗೆ ಮುಂಗಡ ಹಣವನ್ನೂ ಕಳುಹಿಸಲಾಗಿತ್ತು. ನಟ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದಾಗ, ಅವರನ್ನು ಪಿಕ್‌ ಮಾಡಲು ಬಂದಿದ್ದ ಕಾರು ಅವರನ್ನು ದೆಹಲಿಯ ಹೊರವಲಯಕ್ಕೆ, ಎಲ್ಲೋ ಬಿಜ್ನೋರ್ ಬಳಿಗೆ ಕರೆದೊಯ್ಯಿತು. ಅಪಹರಣಕಾರರು ಮುಷ್ತಾಕ್‌ಗೆ ಸುಮಾರು 12 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಒಂದು ಕೋಟಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ಅವರ ಬ್ಯುಸಿನೆಸ್‌ ಪಾರ್ಟ್‌ನರ್‌ ಶಿವಂ ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಪಹರಣಕಾರರು ಮುಶ್ತಾಖ್‌ ಖಾನ್‌ ಮತ್ತು ಅವರ ಮಗನ ಖಾತೆಯಿಂದ ₹ 2 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿದ್ದಾರೆ.

ಮುಷ್ತಾಕ್ ಖಾನ್ ಎಸ್ಕೇಪ್‌ ಆಗಿದ್ದು ಹೇಗೆ?

ಮುಷ್ತಾಕ್ ಅವರು ಮುಂಜಾನೆ ಅಜಾನ್ ಧ್ವನಿಯನ್ನು ಕೇಳಿದಾಗ, ಮಸೀದಿ ಹತ್ತಿರದಲ್ಲಿದೆ ಎಂದು ಅರಿತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಅವರು ಮನೆ ತಲುಪಲು ಜನರು ಮತ್ತು ಪೊಲೀಸರ ಸಹಾಯವನ್ನು ಕೋರಿದರು. ನಿನ್ನೆ, ಬಿಜ್ನೋರ್‌ಗೆ ಹೋಗಿ ಅಧಿಕೃತ ಎಫ್‌ಐಆರ್ ದಾಖಲಿಸಲಾಗಿದೆ. ನಮ್ಮ ಬಳಿ ವಿಮಾನದ ಪುರಾವೆ ಇದೆ. ಟಿಕೆಟ್, ಬ್ಯಾಂಕ್ ಖಾತೆಗಳು ಮತ್ತು ವಿಮಾನ ನಿಲ್ದಾಣದ ಬಳಿಯಿರುವ ಸಿಸಿಟಿವಿ ದೃಶ್ಯಗಳನ್ನು ಸಹ ಅವರು ಗುರುತಿಸುತ್ತಾರೆ, ಅವರನ್ನು ಇರಿಸಲಾಗಿರುವ ಮನೆಯನ್ನೂ ಕೂಡ ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸ ಶಿಕ್ಷೆ ವಿಧಿಸುವ ಭರವಸೆ ಇದೆ ಎಂದು ಶಿವಂ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಹಾಸ್ಯನಟ ಸುನಿಲ್‌ ಪಾಲ್‌ ಕೂಡ ಇದೇ ರೀತಿ ಕಿಡ್ನಾಪ್‌ ಆಗಿದ್ದರು. ಸುನಿಲ್ ಪಾಲ್ ಅವರು ಒಂದು ಕಾರ್ಯಕ್ರಮದ ನಿಮಿತ್ತ ಮುಂಬೈನಿಂದ ಹೊರ ಹೋಗುವುದಾಗಿ ತಮ್ಮ ಪತ್ನಿಗೆ ತಿಳಿಸಿದ್ದರು. ಕಾರ್ಯಕ್ರಮ ಮುಗಿದ ಕೂಡಲೇ ಮನೆಗೆ ವಾಪಸ್ ಬರುವುದಾಗಿ ತಿಳಿಸಿ ಹೊರಟಿದ್ದರು. ಆದರೆ ಸುನಿಲ್‌ ಪಾಲ್‌ ತಡ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಕಂಗಾಲಾದ ಅವರ ಪತ್ನಿ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದರು. ಸಂಪರ್ಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿ ಸಹಾಯ ಕೇಳಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ತಕ್ಷಣವೇ ತನಿಖೆ ಆರಂಭಿಸಿದ್ದರು. ಕೊನೆಗೂ ಪೊಲೀಸರು ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Sunil Pal: ನಿಗೂಢವಾಗಿ ನಾಪತ್ತೆಯಾಗಿದ್ದ ಕಾಮೇಡಿಯನ್‌ ಸುನಿಲ್‌ ಪಾಲ್ ಪತ್ತೆ; ಹಾಸ್ಯ ನಟ ಕಿಡ್ನ್ಯಾಪ್‌ ಆಗಿದ್ರಾ?