Saturday, 10th May 2025

BBK 11: ಬಿಗ್ ಬಾಸ್ ವೀಕ್ಷಕರಿಗೆ ಗುಡ್ ನ್ಯೂಸ್: ಸೀಸನ್ 11 ನಲ್ಲಿ ಇದೆ ಮತ್ತೊಂದು ಟ್ವಿಸ್ಟ್

BBK 11 extension

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಆರಂಭದಲ್ಲಿ ಶೋಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಇರಲಿಲ್ಲ. ಆದರೀಗ ಬಿಗ್ ಬಾಸ್​ಗೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ವೀಕೆಂಡ್​ನ ಟಿಆರ್​ಪಿ ಕೂಡ ಎರಡಂಕಿ ದಾಟಿದೆ. ಮಹತ್ವದ ಘಟ್ಟಕ್ಕೆ ತಲುಪಿರುವ ಬಿಗ್ ಬಾಸ್ ಅನ್ನು ಪ್ರತಿದಿನ ವೀಕ್ಷಣೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಕಡೆಯಿಂದ ವೀಕ್ಷರಿಗೆ ಗುಡ್ ನ್ಯೂಸ್ ಒಂದು ಬಂದಿದೆ.

ಬಿಗ್‌ ಬಾಸ್‌ 11ರ ಸೀಸನ್‌ ಶುರುವಾಗಿ 73 ದಿನಗಳು ಕಳೆದಿದೆ. ಪ್ರತಿ ಸೀಸನ್‌ನಂತೆ ಈ ಸೀಸನ್‌ ಕೂಡ ಒಂದಷ್ಟು ವಾದ – ವಾಗ್ವಾದದಿಂದಲೇ ಸದ್ದು ಮಾಡಿದೆ. ಆರಂಭಿಕ ವಾರಗಳಲ್ಲಿ ಜಗದೀಶ್‌- ರಂಜಿತ್‌ ಅವರ ನಡುವಿನ ಮಾತಿನ ಚಕಮಕಿ ಬಿಗ್‌ ಬಾಸ್‌ ಮನೆಯಿಂದ ದೊಡ್ಡ ವಿವಾದದ ಸುದ್ದಿಯಾಗಿಯೇ ಹೊರಹೊಮ್ಮಿತ್ತು.

ದೊಡ್ಮನೆಯಲ್ಲಿ ಜಗಳಗಳು ಕಾಮನ್. ಆದರೆ, ಈ ಸೀಸನ್​ನಲ್ಲಿ ಅದು ಕೊಂಚ ಅಧಿಕವಾಗಿದೆ. ಅಚ್ಚರಿ ಎಂದರೆ ಇದೇ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇದಕ್ಕೆ ತಕ್ಕಂತೆ ಬಿಗ್ ಬಾಸ್ ಕೂಡ ಪ್ರತಿದಿನ ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಿದ್ದಾರೆ. ನಾಮಿನೇಷನ್ ವಿಚಾರ, ಎಲಿಮಿನೇಷನ್​ನಲ್ಲಿ, ಟಾಸ್ಕ್​ನಲ್ಲಿ ಸರ್​ಪ್ರೈಸ್ ನೀಡುತ್ತಿದ್ದಾರೆ.

ಕಳೆದ ಬಾರಿ ಬಿಗ್ ಬಾಸ್ ಶೋವನ್ನ ಎರಡು ವಾರಗಳ ಕಾಲ ಜಾಸ್ತಿ ಮಾಡಿ ಮತ್ತಷ್ಟು ಮನರಂಜನೆಯನ್ನ ನೀಡಲಾಗಿತ್ತು. ಇದೀಗ ಸೀಸನ್ 11ರ ಶೋವನ್ನ ಕೂಡ ಇನ್ನೆರಡು ವಾರಗಳ ಕಾಲ ಮುಂದುವರೆಸುವುದಕ್ಕೆ ಭರ್ಜರಿ ಪ್ಲ್ಯಾನ್‌ ನಡೆಯುತ್ತಿದೆಯಂತೆ. ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಭರ್ಜರಿ ಟಿಆರ್‌ಪಿ ಬರುತ್ತಿದೆ. ವೀಕ್ಷಕರ ಮನ ಗೆಲ್ಲುವಲ್ಲಿ ಈ ಬಾರಿಯ ಸೀಸನ್‌ ಯಶಸ್ಸಾಗಿದೆ. ಹೀಗಾಗಿ ಆಯೋಜಕರು ವೀಕ್ಷಕರಿಗಾಗಿ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಇನ್ನೆರಡು ವಾರಕಾಲ ವಿಸ್ತರಣೆ ಮಾಡಲು ಪ್ಲ್ಯಾನ್‌ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ಸುದ್ದಿ ಕೇಳಿ ಬಿಗ್‌ ಬಾಸ್‌ ಪ್ರಿಯರು ಸೋಷಿಯಲ್‌ ಮೀಡಿಯಾ ಮೂಲಕ ಸಂತಸ ಹೊರ ಹಾಕುತ್ತಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಆಗಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

BBK 11: ಗೌತಮಿ vs ಮೋಕ್ಷಿತಾ: ಬಿಗ್ ಬಾಸ್ ಮನೆಯಲ್ಲಿ ನಿಲ್ಲದ ಸೇಡಿನ ಕಿಚ್ಚು