Saturday, 10th May 2025

Tumkur News: ಸಿಸಿ ರಸ್ತೆ ನಿರ್ಮಿಸಲು ಮನವಿ

ಚಿಕ್ಕನಾಯಕನಹಳ್ಳಿ: ಬೆಳಗುಲಿ ಗ್ರಾಮ ಪಂಚಾಯಿತಿಯ ಗೂಬೆಹಳ್ಳಿ ಗ್ರಾಮದ ಕುಮಾರಿಬಾಯಿ ಮನೆಯಿಂದ ನಳಿನಮ್ಮನವರ ಮನೆಯವರೆಗೆ ರಸ್ತೆಗಳು ಹದೆಗಟ್ಟಿದ್ದು ಸಿಸಿ ರಸ್ತೆ ನಿರ್ಮಿಸುವಂತೆ ಕಾಲೋನಿ ನಿವಾಸಿಗಳು ಶಾಸಕರನ್ನು ಒತ್ತಾಯಿಸಿದ್ದಾರೆ.

ಶಾಸಕರ ನಿಧಿಯಿಂದ ಅಥವಾ ಎಸ್‌ಇಪಿ ಟಿಎಸ್‌ಪಿ ಯೋಜನೆಯಲ್ಲಿ ಸಿಸಿ ರಸ್ತೆ ನಿರ್ಮಿಸಬೇಕೆಂದು ಶಾಸಕ ಸಿ.ಬಿ.ಸುರೇಶಬಾಬು ಅವರಿಗೆ ೨೦೨೩ ರ ಆಗಸ್ಟ್ ೧೭ ರಂದೇ ಮನವಿ ಸಲ್ಲಿಸಲಾಗಿದೆ. ಇಲ್ಲಿನ ನಿವಾಸಿಗಳು ಪರಿಶಿಷ್ಟ ಜಾತಿಯ ಲಂಬಾಣಿ, ಬೋವಿ ಸಮುದಾಯದವರಾಗಿದ್ದು ಬಡತನ ರೇಖೆಗಿಂತ ಕೆಳಗಿನವರಾಗಿದ್ದಾರೆ.

ರಸ್ತೆಗಳಿಲ್ಲದಿದ್ದರಿಂದ ಮಳೆ ನೀರು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ. ಆದ್ದರಿಂದ ಶಾಸಕರು ಅನುದಾನ ಒದಗಿಸಿ ಸಿಸಿ ರಸ್ತೆ ನಿರ್ಮಿಸುವಂತೆ ನಿವಾಸಿಯಾದ ದೇವರಾಜು ಶಾಸಕರನ್ನು ಒತ್ತಾಯಿಸಿದ್ದಾರೆ.