Wednesday, 14th May 2025

Viral Video: ಮೆಣಸಿನಕಾಯಿ ಲಿಪ್ ಪ್ಲಂಪರ್ ಸಖತ್‌ ವೈರಲ್‌! ಈಕೆಯ ಬ್ಯೂಟಿ ಟಿಪ್ಸ್‌ಗೆ ಬೆಚ್ಚಿಬಿದ್ದ ನೆಟ್ಟಿಗರು

Viral Video

ನವದೆಹಲಿ: ದಪ್ಪ ತುಟಿಯನ್ನು ಹೊಂದುಬೇಕು ಎಂದು ಇತ್ತೀಚಿನ  ದಿನಗಳಲ್ಲಿ ಕೆಲವರು ಮಹಿಳೆಯರು ಏನೇನೋ ಸರ್ಕಸ್‌ ಮಾಡುತ್ತಾರೆ. ತುಟಿಗಳ ಲುಕ್ ಹೆಚ್ಚಿಸಲು ಮತ್ತು ಅವುಗಳನ್ನು ದಪ್ಪವಾಗಿಸಲು ಸೆಲೂನ್‍ಗಳಲ್ಲಿ ಕೆಲವು ವಿಧಾನಗಳಿದ್ದರೂ, ಕೂಡ ಮೇಕಪ್ ಮತ್ತು ಬ್ಯೂಟಿ ಇನ್ಫ್ಲುಯೆನ್ಸರ್ ಶುಭಾಂಗಿ ಆನಂದ್ ಅವರು ನೈಸರ್ಗಿಕವಾಗಿ ತುಟಿಗಳನ್ನು ದಪ್ಪವಾಗಿಸಲು ದೇಸಿ ವಸ್ತುವೊಂದನ್ನು  ಬಳಸಿದ್ದಾರೆ. ಇದರ ವಿಡಿಯೊ ವೈರಲ್ (Viral Video)ಆಗಿದ್ದು, ನೆಟ್ಟಿಗರು ಕಣ್ಣು ಬಾಯಿ ಬಿಟ್ಟು ಆಶ್ಚರ್ಯವಾಗಿ ನೋಡಿದ್ದಾರೆ.

ಬ್ಯೂಟಿ ಇನ್ಫ್ಲುಯೆನ್ಸರ್ ಶುಭಾಂಗಿ ಆನಂದ್ ಅವರು ತಮ್ಮ ತುಟಿಗಳನ್ನು ದಪ್ಪಗೊಳಿಸಲು ಬಳಸಿದ ನೈಸರ್ಗಿಕ ವಸ್ತು ಯಾವುದೆಂದು ನೋಡಿದರೆ ನೀವು ಶಾಕ್ ಆಗುವುದಂತು ಖಂಡಿತ. ಯಾಕೆಂದರೆ ಅವರು ಅದಕ್ಕಾಗಿ ಮೆಣಸಿನಕಾಯಿಯ ತುಂಡನ್ನು ಬಳಸಿದ್ದಾರೆ. ಅವರು ಮೆಣಸಿನಕಾಯಿಯನ್ನು ಕತ್ತರಿಸಿ ನಂತರ ಅದನ್ನು ತುಟಿಗಳಿಗೆ ಹಚ್ಚಿದ್ದಾರೆ. ಮಾತ್ರವಲ್ಲ ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.  ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಶುಭಾಂಗಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಅವರು ಕತ್ತರಿಸಿದ ಮೆಣಸಿನಕಾಯಿಯನ್ನು “ನೈಸರ್ಗಿಕ ಲಿಪ್ ಪ್ಲಂಪರ್” ಆಗಿ ಬಳಸಿದ್ದಾರೆ. ಅವರು ಡಿಸೆಂಬರ್ 5 ರಂದು ರೀಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ  ಅಪ್‍ಲೋಡ್ ಮಾಡಿದ್ದಾರೆ. ಇದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ ಮತ್ತು ಇನ್ಸ್ಟಾಗ್ರಾಂನಲ್ಲಿ 22.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಇಂತಹ  ಖ್ಯಾತ ಬ್ಯೂಟಿ ಇನ್ಫ್ಲುಯೆನ್ಸರ್ ತನ್ನ ತುಟಿಗಳನ್ನು ದಪ್ಪಗೊಳಿಸಲು ನೈಸರ್ಗಿಕ ಪರ್ಯಾಯವನ್ನು ಬಳಸುವ ವಿಡಿಯೊವನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ದೇಸಿ ಬ್ಯೂಟಿ ಹ್ಯಾಕ್‍ನಿಂದ ತಾವು ಪ್ರಭಾವಿತರಾಗಿಲ್ಲ ಎಂದು ಕೆಲವರು ತಿಳಿಸಿದ್ದಾರೆ. “ಇದು ಎಲ್ಲದಕ್ಕಿಂತ ಕೆಟ್ಟದ್ದು ” ಎಂದು ಅನೇಕರು ಹೇಳಿದ್ದಾರೆ. ಈ ವಿಡಿಯೊ ನೋಡಿದ ಕೆಲವು ನೆಟ್ಟಿಗರು ಈ ತುಟಿ ದಪ್ಪಗೊಳಿಸುವ ತಂತ್ರವನ್ನು ಸ್ವತಃ ಪ್ರಯತ್ನಿಸುತ್ತೀರಾ ಎಂದು ಜನರನ್ನು ಪ್ರಶ್ನಿಸಿದ್ದಾರೆ ಎಂದು ಅನೇಕರು ಉತ್ತರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಸಿಕ್ಕಾಪಟ್ಟೆ ವೈರಲ್‌ ಆಯ್ತು ಚಾಕೋಲೆಟ್‌-ಆಲೂಗೆಡ್ಡೆ ರೆಸಿಪಿ; ನೆಟ್ಟಿಗರು ಹೇಳಿದ್ದೇನು?

ಇದಕ್ಕೆ ಒಬ್ಬರು “ಬಿಎಫ್ / ಪತಿ ನಿಮ್ಮ ತುಟಿಗಳಿಗೆ ಚುಂಬಿಸಿದರೆ ಏನಾಗುತ್ತದೆ???? ಮುಂದಿನ ಬಾರಿ ಅವನು ನಿಮ್ಮನ್ನು ಚುಂಬಿಸುವುದಿಲ್ಲ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಯಾರಿಗಾದರೂ ಕಿಸ್‌ ನೀಡಿದರೆ ಖತಮ್ ಟಾಟಾ ಬೈ ಬೈ ಬೈ (ಎಸ್ಐಸಿ)” ಎಂದು ಬರೆದಿದ್ದಾರೆ.