ಬೆಂಗಳೂರು: ಮನರಂಜನೆಗೆ ಮತ್ತೊಂದು ಹೆಸರೇ ಝೀ ಕನ್ನಡ (Zee Kannada). ಜನಪ್ರಿಯ ಧಾರಾವಾಹಿಗಳಿಂದ ಹಿಡಿದು ರಿಯಾಲಿಟಿ ಶೋಗಳಿಗೆ ಹೊಸತನದ ಮೆರುಗನ್ನು ನೀಡಿ ಎಲ್ಲ ವಯೋಮಾನದ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ರಿಯಾಲಿಟಿ ಶೋಗಳಲ್ಲಿ ಒಂದಾದ ಎಲ್ಲರ ಅಚ್ಚುಮೆಚ್ಚಿನ ʼಡಾನ್ಸ್ ಕರ್ನಾಟಕ ಡಾನ್ಸ್ʼ (Dance Karnataka Dance 2024) ಈಗ ಕೊನೆಯ ಹಂತಕ್ಕೆ ತಲುಪಿದೆ. ಇಂದು (ಡಿ. 8) ಡಿಕೆಡಿಯ ಫೈನಲ್ ನಡೆಯಲಿದ್ದು, ಚಾಂಪಿಯನ್ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.
ಇಡೀ ಸೀಸನ್ ಫುಲ್ ಮನರಂಜನೆ ನೀಡಿದ್ದು, ವಿಭಿನ್ನ ನೃತ್ಯ ಪ್ರಕಾರಗಳಿಂದ ಡಾನ್ಸ್ ಕರ್ನಾಟಕ ಡಾನ್ಸ್ ಈಗಾಗಲೇ ಜನರ ಮನ ಗೆದ್ದಿದೆ. ಸಾಹಸಮಯ, ಹಾಸ್ಯಮಯ ಸೇರಿ ಹಲವು ರೀತಿಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನ ತೋರಿಸಿದ್ದಾರೆ. ಈ ಬಾರಿಯ ಫಿನಾಲೆ ವೀಕ್ಷಕರನ್ನು ಮತ್ತಷ್ಟು ರೋಮಾಂಚನಗೊಳಿಸಲಿದೆ.

ಯಾಕೆಂದರೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಕ್ರೇಜಿ ಕ್ವೀನ್ ರಕ್ಷಿತಾ, ಡಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್, ವಿಜಯ ರಾಘವೆಂದ್ರ ಇವರಿಗೆ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ನಿರ್ವಹಿಸಲಿದ್ದಾರೆ.

ಫೈನಲಿಸ್ಟ್ ಯಾರೆಲ್ಲ?
ಶಶಾಂಕ್-ಕಾವ್ಯ, ಗಿಲ್ಲಿ ನಟ ನಟರಾಜ-ಹನೀಶ, ಸುಮುಖ್-ಸಿಹಿ, ಶಶಾಂಕ್-ಪ್ರಿಯಾ, ಉಜ್ವಲ್-ಗಗನ, ಜಾಹ್ನವಿ-ಕಂಠಿ, ಶ್ರೀವಲ್ಲಿ-ನಿತಿನ್, ಯಶಸ್ವಿನಿ-ಚೆರ್ರಿ ನಡುವೆ ಕೊನೆಯ ಹಂತದ ಹಣಾಹಣಿ ನಡೆಯಲಿದ್ದು, ಅಪ್ಪು ಟ್ರೋಫಿ ಯಾರ ಪಾಲಾಗಲಿದೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗಲಿದೆ.
ಯಾವಾಗ ಪ್ರಸಾರ?
ಝೀ ಕನ್ನಡ ವಾಹಿನಿಯಲ್ಲಿ ಇಂದು ಸಂಜೆ 6 ಗಂಟೆಯಿಂದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋದ ಫೈನಲ್ ಪ್ರಸಾರವಾಗಲಿದೆ.

ಈ ಸುದ್ದಿಯನ್ನೂ ಓದಿ: BBK 11: ತ್ರಿವಿಕ್ರಮ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲು ಏನು ಕಾರಣ?, ಗೌತಮಿ ಜೊತೆ ಮಾತಾಡಿದ್ದು ಏನು?