ಗ್ಯಾಂಗ್ಟಾಕ್: ಸಿಕ್ಕಿಂ ವಿಶ್ವವಿದ್ಯಾಲಯವು (Sikkim University) ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆಯನ್ನು (Menstrual Leave) ಘೋಷಿಸಿದೆ. ಈ ಕುರಿತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (Sikkim University Registrar) ಲಕ್ಷ್ಮಣ್ ಶರ್ಮಾ ಅವರು ಡಿಸೆಂಬರ್ 4ರಂದು ಅಧಿಸೂಚನೆ ಹೊರಡಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘದ (SUSA) ಪ್ರಾತಿನಿಧ್ಯದ ವಹಿಸಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಲಕ್ಷ್ಮಣ್ ಶರ್ಮಾ ಅವರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆಗೆ ಅನುಮತಿ ನೀಡಿದೆ ಎಂದು ಅಧಿಸೂಚನೆಯ ಮೂಲಕ ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಹೊರತುಪಡಿಸಿ ಸಿಕ್ಕಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಿಗೆ ತಿಂಗಳಲ್ಲಿ ಒಂದು ದಿನದ ಮುಟ್ಟಿನ ರಜೆಯನ್ನು ಅನುಮತಿಸಲು ಉಪಕುಲಪತಿಗಳು ಸೂಚಿಸಿದ್ದಾರೆ ಎಂದು ಲಕ್ಷ್ಮಣ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: Viral Video: ನ್ಯೂಸ್ ಪೇಪರ್ ಉಟ್ಟುಕೊಂಡು ನ್ಯೂಸಾದ ಬೆಡಗಿ; ವೈರಲ್ ವಿಡಿಯೊ ನೀವೂ ನೋಡಿ
ಮುಟ್ಟಿನ ರಜೆಯನ್ನು ಪಡೆದಿರುವುದನ್ನು ಪರೀಕ್ಷಾ ಉದ್ದೇಶಗಳಿಗಾಗಿ ಒಂದು ಸೆಮಿಸ್ಟರ್ನಲ್ಲಿ ನಡೆಯುವ ತರಗತಿಗಳ ಕಡ್ಡಾಯವಾಗಿ ಶೇಕಡಾ 75 ರಷ್ಟು ಹಾಜರಾತಿ ಮಾನದಂಡಗಳೊಂದಿಗೆ ಸರಿಹೊಂದಿಸಲಾಗುತ್ತದೆ ಎಂದು ಅವರು ಹೇಳಿದರು.