ಹೈದರಾಬಾದ್: ದಕ್ಷಿಣ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ(Naga Chaitanya) ಹಾಗೂ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ(Sobhita Dhulipala) ದಾಂಪತ್ಯ ಜೀವನ ಆರಂಭಿಸಿದ್ದಾರೆ. ಬುಧವಾರ ತಡ ರಾತ್ರಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಅನ್ನಪೂರ್ಣ ಸ್ಟುಡಿಯೋದಲ್ಲಿ ಜೋಡಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ಹಸೆಮಣೆ ಏರಿದೆ. ಈ ಸಮಾರಂಭದಲ್ಲಿ ಕುಟುಂಬದವರು, ಚಿತ್ರರಂಗದ ಗಣ್ಯರು, ಆಪ್ತರು, ಬಂಧುಗಳು ಪಾಲ್ಗೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಕೂಡಾ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಯನ್ನು ಆಶೀರ್ವದಿಸಿದ್ದಾರೆ.
ಸದ್ಯ ಈ ಮದುವೆ ಕಾರ್ಯಕ್ರಮದ ಫೋಟೊ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನವದಂಪತಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ನೆಟಿಜನ್ಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ನಾಗ ಚೈತನ್ಯ ಅವರು ನವಾರಂಭದ ಖುಷಿಯಲ್ಲಿದ್ದಾರೆ.
ಈ ಮಧ್ಯೆ ನಾಗಚೈತನ್ಯ ವಿಡಿಯೊ (Viral Video)ವೊಂದು ಸೋಷಿಯಲ್ ಮೀಡಿಯಾ (Social Media)ದಲ್ಲಿ ವೈರಲ್ ಆಗಿದ್ದು, ತಮಗೆ ಎರಡು ಮಕ್ಕಳು ಬೇಕು ಎಂಬ ಆಸೆಯನ್ನು ಚಾಯ್ ಹೊರಹಾಕಿದ್ದಾರೆ. ರಾಣಾ ದಗ್ಗುಬಾಟಿ(Rana Daggubati) ಚಾಟ್ ಶೋನ ಮುಂಬರುವ ಎಪಿಸೋಡ್ನ ಗೆಸ್ಟ್ ಆಗಿ ಅವರು ರಾಣಾ ಅವರ ಸೋದರ ಸಂಬಂಧಿಯೂ ಆಗಿರುವ ನಾಗ ಚೈತನ್ಯ ಆಗಮಿಸಿದ್ದು, ಈ ಶೋನಲ್ಲಿ ತಮ್ಮ ವೈವಾಹಿಕ ಜೀವನದ ಕನಸಿನ ಕುರಿತು ಮಾತನಾಡಿದ್ದಾರೆ.
ತನ್ನ ಶೋಗೆ ಸಂಬಂಧಪಟ್ಟಂತೆ ಹೊಸ ಟೀಸರ್ ಅನ್ನು ರಾಣಾ ದಗ್ಗುಬಾಟಿ ತಮ್ಮ Instagram ಫೀಡ್ನಲ್ಲಿ ಹಂಚಿಕೊಂಡಿದ್ದು, ಕೆಲವು ನಿಮಿಷಗಳ ಟೀಸರ್ನಲ್ಲಿ, ನಾಗ ಚೈತನ್ಯ ಅವರು ತಮ್ಮ ಫ್ಯಾಮಿಲಿ ಪ್ಲಾನಿಂಗ್ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುವ ಆಸೆಯನ್ನು ಹೊರಹಾಕಿದ್ದಾರೆ.
ಶೋನ ವೋಸ್ಟ್ ಆಗಿರುವ ರಾಣಾ ದಗ್ಗುಬಾಟಿ, ಚಾಯ್ಗೆ ನಿಮ್ಮ ಕುಟುಂಬ ಹೇಗಿರಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದು, ಇದಕ್ಕೆ ಉತ್ತರಿಸಿದ ನಾಗ ಚೈತನ್ಯ, ಸಂತೋಷದಿಂದ ಮದುವೆಯಾಗಿ ಒಂದೆರಡು ಮಕ್ಕಳನ್ನು ಪಡೆಯಬೇಕು ಎಂದು ಹೇಳುವ ಮೂಲಕ ತಮ್ಮ ಮನದಾಸೆಯನ್ನು ಹೊರಹಾಕಿದ್ದಾರೆ. ರಾಣಾ ದಗ್ಗುಬಾಟಿ, ವೆಂಕಿ ಮಾಮನಂತೆ ನಾಲ್ಕು ಅಥವಾ ಎರಡೇನಾ ಎಂದಾಗ ಎರಡು ಸಾಕು ಎಂದಿದ್ದಾರೆ ನಾಗ ಚೈತನ್ಯ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಶೋನ ಟೀಸರ್ ಭಾರೀ ಸದ್ದು ಮಾಡುತ್ತಿದ್ದು, ವೀಕ್ಷಕರು ಈ ಎಪಿಸೋಡ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಈ ಹಿಂದೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ನಾಗ ಚೈತನ್ಯ 2017ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರು. ಬಹಳ ವರ್ಷಗಳ ಪ್ರೀತಿ ಅಭಿಮಾನಿಗಳ ಮನಗೆದ್ದಿತ್ತು. ಆದರೆ 2021ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಈ ಜೋಡಿ ವಿಚ್ಛೇದನ ಪಡೆಯಿತು. ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು ಸದ್ಯ ತಮ್ಮ ಆರೋಗ್ಯ ಮತ್ತು ವೃತ್ತಿಜೀನದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
ಈ ಸುದ್ದಿಯನ್ನು ಓದಿ: Shiva Rajkumar: ತಿರುಪತಿ ತಿಮ್ಮಪ್ಪನಿಗೆ ಮುಡಿ ಸಮರ್ಪಿಸಿದ ಶಿವಣ್ಣ- ಗೀತಾ