Monday, 12th May 2025

Viral Video: ಹೆಂಡತಿಯನ್ನು ಅದಲು ಬದಲು ಮಾಡಿಕೊಂಡು ಹೋಟೆಲ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಭೂಪರು! ವಿಡಿಯೊ ನೋಡಿ

Viral Video

ಗಂಡನಿಲ್ಲದ ವೇಳೆ ಪ್ರಿಯಕರನ ಜೊತೆ ಸಲ್ಲಾಪವಾಡುವ ಪತ್ನಿ, ಪತ್ನಿಯ ಅನುಪಸ್ಥಿತಿಯಲ್ಲಿ ಇನ್ನೊಂದು ಹುಡುಗಿಯ ಸಹವಾಸ ಮಾಡುವ ಪತಿ. ಹೀಗೆ ದಿನಕ್ಕೆ ಒಂದಾದರೂ ಈ ರೀತಿಯ ಪ್ರಕರಣಗಳನ್ನು ನಾವು ನೋಡುತ್ತೇವೆ ಅಥವಾ ಕೇಳಿರುತ್ತೇವೆ. ಆದರೆ ಈಗ ಸೋಶಿಯಲ್‌ ಮೀಡಿಯಾದಲ್ಲಿ ಹೆಂಡತಿಯನ್ನೇ ಅದಲು ಬದಲು ಮಾಡಿಕೊಂಡು ಹೋಟೆಲ್‌ಗೆ ಹೋಗಿ ಪೇಚಿಗೆ ಸಿಲುಕಿಕೊಂಡ ದಂಪತಿಯ ಪ್ರಕರಣ ವೈರಲ್‌(Viral Video) ಆಗಿದೆ.

ಈ ವಿಡಿಯೊದಲ್ಲಿ ದಂಪತಿ ಹೋಟೆಲ್‌ಗೆ ಚೆಕ್ ಇನ್ ಮಾಡಿ ಪಾದರಕ್ಷೆಗಳನ್ನು ಹೊರಗೆ ಇರಿಸಿ ತಮ್ಮ ಕೋಣೆಗೆ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಮತ್ತೊಂದು ದಂಪತಿ ಕಾರಿಡಾರ್‌ನ ಪಕ್ಕದಲ್ಲಿನ ಕೋಣೆಗೆ ಬಂದಿದ್ದಾರೆ. ಆಗ ಆ ವ್ಯಕ್ತಿಗೆ ಇನ್ನೊಂದು ರೂಂನ ಹೊರಗೆ ಇರುವ ಚಪ್ಪಲಿ ನೋಡಿ ಏನೋ ಅನುಮಾನ ಕಾಡಿತ್ತು.

ಕೊನೆಗೆ ಅನುಮಾನವನ್ನು ಪರಿಹರಿಸಿಕೊಳ್ಳಲು ಬಾಗಿಲು ತಟ್ಟಿದಾಗ ಮೊದಲನೇ ಕೋಣೆಯಿಂದ ಪುರುಷನೊಬ್ಬ ಹೊರಗೆ ಬಂದಿದ್ದಾನೆ. ಹೀಗೆ ಹೊರಗೆ ಬಂದವನನ್ನು ನೋಡಿ ಎರಡನೇ ಕೋಣೆಯಲ್ಲಿರುವ ಮಹಿಳೆ ಓಡಿಹೋಗುತ್ತಾಳೆ. ಇದಕ್ಕೆ ಕಾರಣ ಹೊರಗೆ ಬಂದವನು ಆಕೆಯ ಗಂಡನಂತೆ!

ಹೆಂಡತಿಯನ್ನು ನೋಡಿ ಅಘಾತಕ್ಕೊಳಗಾದ ಮೊದಲ ಕೋಣೆಯ ವ್ಯಕ್ತಿ ಕುಸಿದು ಕೆಳಕ್ಕೆ ಬಿದ್ದಿದ್ದಾನೆ. ನಂತರ ಸ್ವಲ್ಪ ಧೈರ್ಯನ್ನು ತೆಗೆದುಕೊಂಡು ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಎರಡನೇ ಕೋಣೆಯ ವ್ಯಕ್ತಿಯ ಕಾಲರ್‌ ಹಿಡಿದು ಜಗಳವಾಡಿದ್ದಾನೆ. ಆ ವ್ಯಕ್ತಿಯು ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಛಾವಣಿ ಮೇಲೆ 3 ನಾಯಿಗಳನ್ನು ಕೂರಿಸಿ ಕಾರು ಚಲಾಯಿಸಿದ ಭೂಪ; ಕೇಳಿದ್ದಕ್ಕೆ ಹೀಗಾ ಮಾಡೋದು?!

ಅಷ್ಟರಲ್ಲಿ ಎರಡನೇ ಕೋಣೆಯ ವ್ಯಕ್ತಿಯ ಹೆಂಡತಿಯು ಮೊದಲ ವ್ಯಕ್ತಿಯ ಕೋಣೆಯಿಂದ ಹೊರಗೆ ಬಂದಿದ್ದಾಳೆ. ತನ್ನ ಗಂಡನನ್ನು ನೋಡಿ ಶಾಕ್‌ ಆಗಿ ತಕ್ಷಣ ಬಾಗಿಲು ಮುಚ್ಚಿಕೊಂಡಿದ್ದಾಳೆ. ಇದರಿಂದ ಪುರುಷರಿಬ್ಬರ ಜಗಳ ಇನ್ನಷ್ಟೂ ಹೆಚ್ಚಾಗಿತ್ತು. ಆದರೆ ಈ ಬಾರಿ ಮೊದಲ ಕೋಣೆಯ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ಈ ಅನಿರೀಕ್ಷಿತ ತಿರುವು ವೀಕ್ಷಕರನ್ನು ನಗೆ ಗಡಲಿನಲ್ಲಿ ತೇಲಿಸುತ್ತಿದೆ.

ವೈರಲ್ ಸೆನ್ಸೇಷನ್ ಹಿಂದಿನ ಸತ್ಯ

ಈ ವಿಡಿಯೊವನ್ನು ಮನರಂಜನೆಗಾಗಿ ಸ್ಕ್ರಿಪ್ಟ್ ಮಾಡಲಾಗಿದೆಯಂತೆ. ಈ ವಿಡಿಯೊವನ್ನು ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಎಂಜಾಯ್‌ ಮಾಡಿದ್ದಾರಂತೆ. ಹಾಗೇ ಸಿಕ್ಕಾಪಟ್ಟೆ ಜನರ ಇದಕ್ಕೆ ಕಾಮೆಂಟ್ಸ್‌ ಮಾಡಿದ್ದಾರೆ. ಈ ಅನೀರಿಕ್ಷಿತ ತಿರುವಿನ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.