ಅಡಿಲೇಡ್: ಆಸ್ಟ್ರೇಲಿಯಾ ವಿರುದ್ದ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದ (IND vs AUS) ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ 70 ರಿಂದ 80 ರನ್‌ಗಳು ಕಡಿಮೆಯಾಗಿವೆ ಎಂದು ಟೆಸ್ಟ್ ಸ್ಪಷಲಿಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಪಂದ್ಯದ ಮೊಟ್ಟ ಮೊದಲ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್‌ಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಎರಡನೇ ವಿಕೆಟ್‌ಗೆ ಜತೆಯಾದ ಕೆಎಲ್ ರಾಹುಲ್ ಹಾಗೂ ಶುಭಮನ್ ಗಿಲ್ ಜೋಡಿ 69 ರನ್‌ಗಳನ್ನು ಕಲೆ ಹಾಕಿತು.
ಒಂದು ಹಂತದಲ್ಲಿ ಭಾರತ ತಂಡ 69 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಹಾಗೂ 180 ರನ್ ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನು ಮೊದಲನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ ಒಂದು ವಿಕೆಟ್ ನಷ್ಟಕ್ಕೆ 86 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಇನ್ನೂ 94 ರನ್‌ಗಳ ಹಿನ್ನಡೆಯಲ್ಲಿದೆ.
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಚೇತೇಶ್ವರ್ ಪೂಜಾರ, ಅಡಿಲೇಡ್ ಟ್ರ್ಯಾಕ್‌ನಲ್ಲಿ ಭಾರತ ತಂಡ 250 ಅಥವಾ 275 ರನ್‌ಗಳನ್ನು ಕಲೆ ಹಾಕಿದೆ. ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ಪ್ರದರ್ಶನವನ್ನು ಗುಣಗಾನ ಮಾಡಿದ ಪೂಜಾರ, ಆಸೀಸ್ ಬೌಲರ್ ಪ್ರದರ್ಶನವನ್ನು ಅನುಸರಿಸುವಲ್ಲಿ ಭಾರತ ತಂಡದ ಬೌಲರ್‌ಗಳು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
“ಭಾರತ ತಂಡ ಇನ್ನಷ್ಟು ಉತ್ತಮವಾಗಿ ಆಡಬೇಕಾಗಿತ್ತೆಂದು ನಾನು ಭಾವಿಸುತ್ತೇನೆ. ಈ ಪಿಚ್‌ನಲ್ಲಿ ಭಾರತ ತಂಡ 250 ರಿಂದ 275 ರನ್‌ಗಳನು ಕಲೆ ಹಾಕಬೇಕಿತ್ತು. ಹಾಗಾಗಿ ಟೀಮ್ ಇಂಡಿಯಾಗೆ 70 ರಿಂದ 80 ರನ್‌ಗಳು ಕಡಿಮೆಯಾಗಿವೆ. ಇದರ ಶ್ರೇಯ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಸಲ್ಲಬೇಕು. ಏಕೆಂದರೆ ಅವರು ಬೌಲ್ ಮಾಡಿದ ಹಾದಿ ಆ ರೀತಿ ಇತ್ತು. ನಮ್ಮ ಬೌಲರ್‌ಗಳಿಂತಲೂ ಅವರ ಲೆನ್ತ್ ಉತ್ತಮವಾಗಿತ್ತು.
“ನಮ್ಮ ಬೌಲರ್‌ಗಳು ಎದುರಾಳಿ ತಂಡದ ಬೌಲರ್‌ಗಳು ಹಾಕಿದ ಲೆನ್ತ್ ಅನ್ನು ಪ್ರಯತ್ನಿಸುವಲ್ಲಿ ವಿಫಲರಾಗಿದ್ದಾರೆ. ಇದು ಅಷ್ಟೊಂದು ಮಾದರಿಯಾಗಿ ಇರಲಿಲ್ಲ. ಆರಂಭದಲ್ಲಿ ಪಿಚ್ ಅಷ್ಟೊಂದು ನೆರವು ನೀಡುತ್ತಿರಲಿಲ್ಲ. ಈ ವೇಳೆ ಅವರು ಎಲ್ಲಾ ಎಸೆತಗಳನ್ನು ಮಿಶ್ರಣ ಮಾಡಿದ್ದರು,” ಎಂದು ಚೇತೇಶವರ್ ಪೂಜಾರ ತಿಳಿಸಿದ್ದಾರೆ.
“ಆಸೀಸ್ ಬೌಲರ್‌ಗಳು ಬ್ಯಾಕ್ ಆಫ್ ದಿ ಲೆನ್ತ್ ಎಸೆತಗಳನ್ನು ಹಾಕಿದ್ದರು. ಅವರು 6 ರಿಂದ 8 ಮೀಡರ್ ಬೌಲ್ ಮಾಡಲು ಪ್ರಾರಂಭಿಸಿದರು ಈ ಕಾರಣದಿಂದಲೇ ಮಧ್ಯಮ ಓವರ್‌ಗಳಲ್ಲಿ ನಾವು ಹಲವು ವಿಕೆಟ್‌ಗಳನ್ನು ಕಳೆದುಕೊಂಡೆವು. ಎರಡು ಬ್ಯಾಕ್ ಆಫ್ ಎಸೆತಗಳಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಔಟ್ ಆದರು. ಪಿಚ್ ನಾಲ್ಕನೇ ಸ್ಟಂಪ್ ಮೇಲೆ ಇತ್ತು ಹಾಗೂ ಇದು ಈ ಪಿಚ್‌ಗೆ ಸೂಕ್ತವಾಗಿತ್ತು,” ಎಂದು ಬಲಗೈ ಬ್ಯಾಟ್ಸ್‌ಮನ್ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಮಾರ್ನಸ್ ಲಾಬುಶೇನ್ ಕಡೆಗೆ ಚೆಂಡನ್ನು ಎಸೆದ ಮೊಹಮ್ಮದ್ ಸಿರಾಜ್! ವಿಡಿಯೊ