ಬೆಂಗಳೂರು: ಬೆಂಗಳೂರು ನಗರದ 66/11 ಕೆ.ವಿ. ಎನ್.ಜಿ.ಇ.ಎಫ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಡಿ.7 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ | 45 Movie: ಅರ್ಜುನ್ ಜನ್ಯ ನಿರ್ದೇಶನದ ʼ45ʼ ಚಿತ್ರಕ್ಕೆ ಹಾಲಿವುಡ್ ಹೆಸರಾಂತ ತಂತ್ರಜ್ಞರಿಂದ ಗ್ರಾಫಿಕ್ಸ್!
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಎಸ್‌ಎಂವಿಬಿ ರೈಲು ನಿಲ್ದಾಣ, ಇಂದಿರಾನಗರ 1ನೇ ಹಂತ, ಎಚ್‌ಎಎಲ್ 2ನೇ ಹಂತ, ಹಲಸೂರು, ಹಳೆ ಮದ್ರಾಸ್ ರಸ್ತೆ, ಬೆನ್ನಿಗಾನಹಳ್ಳಿ, ಎ. ನಾರಾಯಣಪುರ, ಬಿ. ನಾರಾಯಣಪುರ, ಕಗ್ಗದಾಸಪುರ, ಆಕಾಶ ನಗರ, ಪೈ ಲೇಔಟ್, ಬೈರಸಂದ್ರ, ಸಿ.ವಿ. ರಾಮನಗರ, ಸದಾನಂದ ನಗರ, ಕಸ್ತೂರಿ ನಗರ, ಭುವನೇಶ್ವರಿ ನಗರ, ಹೊಯ್ಸಳ ನಗರ, ಮುನೇಶ್ವರ ನಗರ, ಬಿಡಿಎ ಲೇಔಟ್, ಮುನಿನಂಜಪ್ಪ ಲೇಔಟ್, ದಯಾನಂದ ಲೇಔಟ್, ಕೆಜಿ ಪುರ, ಅಬ್ಬಯ್ಯ ರೆಡ್ಡಿ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್, ನಾಗವಾರಪಾಳ್ಯ, ಕೆ.ಆರ್. ರಸ್ತೆ, ಕೇಂಬ್ರಿಡ್ಜ್ ಲೇಔಟ್, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಹಲಸೂರು ರಸ್ತೆ, ಸಿ.ಎಂ.ಎಚ್ ರಸ್ತೆ, ಇಂದಿರಾನಗರ 2ನೇ ಹಂತ, ಇಂದಿರಾನಗರ 1ನೇ ಹಂತ, ಕೃಷ್ಣ ದೇವಸ್ಥಾನ ರಸ್ತೆ, ಡಿಫೆನ್ಸ್ ಕಾಲೋನಿ, 515 ಕಾಲೋನಿ, ನ್ಯೂ ಬೈಯಪ್ಪನಹಳ್ಳಿ, ಮೈಚಪಾಳ್ಯ, ಕದಿರೆ ರಸ್ತೆ ಇಂದಿರಾನಗರ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಕೃಷ್ಣ ದೇವಸ್ಥಾನ ರಸ್ತೆ, ಇಂದಿರಾನಗರ ಕ್ಲಬ್, ಕೆಇಬಿ ಕ್ವಾರ್ಟರ್ಸ್, ದೂಪನಹಳ್ಳಿ, ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, 12ನೇ ಮುಖ್ಯ, 11ನೇ ಮುಖ್ಯ, ಕೆಪಿಟಿಸಿಎಲ್ ಕ್ವಾರ್ಟರ್ಸ್, ಇಎಸ್ಐ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.