Thursday, 15th May 2025

Rajya Sabha: ಕಾಂಗ್ರೆಸ್‌ ಸಂಸದನ ಸೀಟ್‌ನಡಿ ಕಂತೆ ಕಂತೆ ಹಣ ಪತ್ತೆ; ಸದನದಲ್ಲಿ ತಾರಕಕ್ಕೇರಿದ ಕೋಲಾಹಲ

ನವದೆಹಲಿ: ತೆಲಂಗಾಣದಿಂದ(Telangana) ಚುನಾಯಿತರಾಗಿರುವ ಕಾಂಗ್ರೆಸ್(Congress) ಸಂಸದ ಅಭಿಷೇಕ್ ಮನು ಸಿಂಘ್ವಿ(Abhishek Singhvi) ಅವರಿಗೆ ನಿಗದಿಪಡಿಸಲಾದ ಸೀಟ್ ಸಂಖ್ಯೆ 222 ಅಡಿಯಲ್ಲಿ 500 ರೂ. ಮುಖಬೆಲೆಯ ನೋಟುಗಳ ಕಂತೆ ಪತ್ತೆಯಾದ ಆಶ್ಚರ್ಯಕರ ಘಟನೆ ಇಂದು ಸಂಸತ್‌ನಲ್ಲಿ ನಡೆದಿದೆ.

ತೆಲಂಗಾಣದ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ರಾಜ್ಯಸಭೆಯ ಆಸನದಲ್ಲಿ 500 ನೋಟುಗಳ ಬಂಡಲ್ ಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಸಭೆಯಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ. ಇದು ಬಿಜೆಪಿಯ ಪಿತೂರಿ ಎಂದು ಪ್ರತಿಪಕ್ಷಗಳು ದೂರಿವೆ.

ಇನ್ನು ಸಭಾಪತಿ ಜಗದೀಪ್ ಧನಕರ್ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿ ಕಾಂಗ್ರೆಸ್ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದರು. ತನಿಖೆಗೂ ಮುನ್ನ ಹೆಸರು ಹೇಳಬಾರದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅಭಿಷೇಕ್ ಮನು ಸಿಂಘ್ವಿ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ರಾಜ್ಯಸಭೆಗೆ ಹೋದಾಗಲೆಲ್ಲ 500 ರುಪಾಯಿ ನೋಟು ಹಿಡಿದು ಬರುತ್ತೇನೆ ಎಂದ ಅವರು, ಈ ಬಗ್ಗೆ ಕೇಳಿದ್ದು ಇದೇ ಮೊದಲು, ಮಧ್ಯಾಹ್ನ 12.57ಕ್ಕೆ ಸದನ ತಲುಪಿ 1 ಗಂಟೆಗೆ ಸದನದಿಂದ ಎದ್ದು ಹೋಗಿದ್ದೆ ಎಂದರು. ಸದನವನ್ನು ಮುಂದೂಡಿದ ಬಳಿಕ ದಿನನಿತ್ಯದ ತಪಾಸಣೆ ಸಮಯದಲ್ಲಿ ಭದ್ರತಾ ಅಧಿಕಾರಿಗಳಿಗೆ 500 ರೂ. ಮುಖಬೆಲೆಯ ನೋಟುಗಳ ಕಂತೆ ಸಿಕ್ಕಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಜೆ.ಪಿ.ನಡ್ಡಾ, ಈ ಘಟನೆ ಅತ್ಯಂತ ಗಂಭೀರವಾದದ್ದು ಎಂದು ಹೇಳಿದ್ದಾರೆ.

ಈ ಘಟನೆಯಿಂದಾಗಿ ಸದನದ ಘನತೆಗೆ ಧಕ್ಕೆಯಾಗಿದ್ದು, ಯಾವುದೇ ವಿಚಾರದಲ್ಲಿ ಸಿಟ್ಟು ತೋರಿಸುವುದು ಮತ್ತು ವಿನಾಕಾರಣದ ಕೆಸರೆರಚಾಟ ಸರಿಯಲ್ಲ. ಈ ವಿಷಯವನ್ನು ಇತ್ಯರ್ಥ ಪಡಿಸಲಾಗುವುದು ಎಂದಿದ್ದಾರೆ. ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜೆಪಿ ನಡ್ಡಾ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದರು.

11 ದಿನಗಳ ಚಳಿಗಾಲದ ಅಧಿವೇಶನಕ್ಕೆ 19.3 ಕೋಟಿ ರೂ. ವೆಚ್ಚ

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 9ರಿಂದ 19ರವರೆಗೆ ನಡೆಯುವ 13ನೇ ಚಳಿಗಾಲದ ಅಧಿವೇಶನಕ್ಕೆ 19.3 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವನ್ನು ಅಂದಾಜಿಸಲಾಗಿದೆ. ಪ್ರತಿ ವರ್ಷ ವೆಚ್ಚದಲ್ಲಿ ಶೇ. 10ರಷ್ಟು ಹೆಚ್ಚಳ ಆಗುವುದು ಸಹಜ. ಆದರೆ, ಈ ಬಾರಿ ಅದನ್ನೂ ಕಡಿಮೆ ಮಾಡಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.

ಅಧಿವೇಶನದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ (2023) 17 ಕೋಟಿ ರೂ. ಅಂದಾಜಿಸಲಾಗಿತ್ತು. ಕೊನೆಗೆ 23 ಕೋಟಿ ರೂ. ವೆಚ್ಚವಾಗಿತ್ತು. 2022ರಲ್ಲಿ 17.50 ಕೋಟಿ ರೂ. ವೆಚ್ಚವಾಗಿತ್ತು. 2012ರಲ್ಲಿ ನಡೆದ ಮೊದಲ ಅಧಿವೇಶನಕ್ಕೆ 7.39 ಕೋಟಿ ರೂ. ವೆಚ್ಚವಾಗಿತ್ತು. ಪ್ರತಿವರ್ಷ ನಿರೀಕ್ಷೆಗೂ ಮೀರಿ ವೆಚ್ಚ ಹೆಚ್ಚುತ್ತಿದೆ.

ಈ ಬಾರಿ ಜಿಲ್ಲಾಡಳಿತ 13.8 ಕೋಟಿ ರೂ. ಮತ್ತು ಪೊಲೀಸ್ ಇಲಾಖೆ 5.5 ಕೋಟಿ ರೂ. ವೆಚ್ಚ ಮಾಡಲು ಸಿದ್ಧವಾಗಿವೆ. ಇದರೊಂದಿಗೆ ಲೋಕೋಪಯೋಗಿ, ಸಾರಿಗೆ, ಪೊಲೀಸ್‌, ಹೆಸ್ಕಾಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳೂ ತಮ್ಮ ಇಲಾಖೆಯ ಅನುದಾನ ಬಳಸಿಕೊಳ್ಳುತ್ತವೆ. ಅಧಿವೇಶನ ಮುಗಿದ ಬಳಿಕ ಅದರ ಲೆಕ್ಕ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ವೆಚ್ಚ ವಸತಿ ಹಾಗೂ ಊಟಕ್ಕೆ ಆಗುತ್ತದೆ. ಅದರಲ್ಲೇ ಉಳಿತಾಯ ಮಾಡಲು ಅಧಿಕಾರಿಗಳು ಯೋಚಿಸಿದ್ದಾರೆ. ಕಳೆದ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಊಟಕ್ಕೆ ಪ್ರತಿದಿನ 5 ಲಕ್ಷ ರೂ. ಖರ್ಚಾಗಿದೆ ಎಂಬ ಮಾಹಿತಿಯಿದೆ.

ಈ ಸುದ್ದಿಯನ್ನೂ ಓದಿ:CM Siddaramaiah: ಬಿಜೆಪಿಯವರು ಸಮಾಜದಲ್ಲಿ ಶಾಂತಿ, ಸೋದರತ್ವ ನೆಲೆಸಬೇಕೆಂದು ಎಂದೂ ಬಯಸುವವರಲ್ಲ; ಸಿದ್ದರಾಮಯ್ಯ ಟೀಕೆ