Thursday, 15th May 2025

ವಾಯು ಮಾಲಿನ್ಯ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಐಷಾರಾಮಿ ಹೋಟೆಲ್‍; ಇಲ್ಲಿ ಸಿಗುವ ಸರ್ವಿಸ್‌ ಕೇಳಿದ್ರೆ ಶಾಕ್‌ ಆಗ್ತೀರಾ!

Viral News

ಹೊಸದಿಲ್ಲಿ: ದೆಹಲಿಯಲ್ಲಿ ವಾಯು ಮಾಲಿನ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇಲ್ಲಿನ ಜನರು ವಾಯು ಮಾಲಿನ್ಯದಿಂದ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದನ್ನೇ ದೆಹಲಿಯ ಐಷರಾಮಿ ಹೋಟೆಲ್‍ಗಳು ಬಂಡವಾಳವಾಗಿ ಮಾಡಿಕೊಂಡಿವೆ. ಯಾಕೆಂದರೆ ದೆಹಲಿಯ ಐಷಾರಾಮಿ ಹೋಟೆಲ್‍ನ  ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್(Viral News) ಆಗಿದೆ.

ಟೆಕ್ ಮಿಲಿಯನೇರ್ ಬ್ರಿಯಾನ್ ಜಾನ್ಸನ್, ದಿ ಒಬೆರಾಯ್ ಹೋಟೆಲ್‍ಗೆ ಸಂಬಂಧಪಟ್ಟ ಫೋಟೊವನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ಆವರಣದಲ್ಲಿ “ಶುದ್ಧ ಗಾಳಿ ಸೇವೆಯನ್ನು” ನೀಡಲಾಗುತ್ತದೆ ಎಂಬ ಫೋಟೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ “ಶುದ್ಧ ಗಾಳಿಯನ್ನು ಮಾರಾಟ ಮಾಡುವ ಹೋಟೆಲ್” ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.

ನಗರದ ಹೊರಗೆ ಉಸಿರಾಡುವುದಕ್ಕಿಂತ ಉತ್ತಮ ಗುಣಮಟ್ಟದ ಗಾಳಿಯು ಗ್ರಾಹಕರಿಗೆ ಹೋಟೆಲ್ ಒದಗಿಸುತ್ತದೆ ಎಂದು ತಿಳಿಸುವ ಬ್ರಿಯಾನ್ ಅವರ ಎಕ್ಸ್ ಪೋಸ್ಟ್ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಅನೇಕರು ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದು ಜನಪ್ರಿಯ ಟಿವಿ ಸಿರೀಸ್ ‘ಬ್ಲ್ಯಾಕ್ ಮಿರರ್’ ಅನ್ನು ನೆನಪಿಸುತ್ತದೆ ಎಂದು ಹಲವರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. “ನಾವು ಈಗ ಬ್ಲ್ಯಾಕ್ ಮಿರರ್ ಎಪಿಸೋಡ್‍ ಅನ್ನು ಕಾಣುತ್ತಿದ್ದೇವೆ” ಎಂದು ಅವರು  ಬರೆದಿದ್ದಾರೆ.

ʼಬ್ಲ್ಯಾಕ್ ಮಿರರ್ʼ ಸಿರೀಸ್‌ನ ಎಪಿಸೋಡ್‍ನಲ್ಲಿ ಹೋಟೆಲ್‌ನಲ್ಲಿ ಶುದ್ಧ ಗಾಳಿಯನ್ನು ಪ್ರೀಮಿಯಂ ಸೇವೆಯಾಗಿ ನೀಡುವ ದೃಶ್ಯಗಳು ಸಂಚಲನವನ್ನು ಸೃಷ್ಟಿಸಿದ್ದವು. ಹವಾಮಾನ ಬದಲಾವಣೆಯನ್ನು ಪರಿಹರಿಸುವ ಕಾರ್ಯಕ್ರಮವಾದ ʼಬ್ಲ್ಯಾಕ್ ಮಿರರ್‌ʼನಲ್ಲಿ ದೆಹಲಿ ಕಾಣಿಸಿಕೊಂಡಿದೆ ಎಂದು ಎಕ್ಸ್ ಬಳಕೆದಾರರು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಸಂಸದ ಶಶಿ ತರೂರ್ ತೊಡೆಯೇರಿದ ಕೋತಿ ಮಾಡಿದ್ದೇನು?

ಒಬೆರಾಯ್ ಹೋಟೆಲ್‍ಗಳು ಶುದ್ಧ ಗಾಳಿ ಸೇವೆಯನ್ನು ನೀಡುವ ಬಗ್ಗೆ ಟೆಕ್ ಮಿಲಿಯನೇರ್ ಪೋಸ್ಟ್ ಮಾಡಿದ ನಂತರ, ಎಕ್ಸ್ ಬಳಕೆದಾರರು ನಗರದ ಶಾಪಿಂಗ್ ಮಾಲ್‍ಗಳು ಸಹ ಗ್ರಾಹಕರಿಗೆ ಅಂತಹ ಸೇವೆಯನ್ನು ಒದಗಿಸಿವೆ ಎಂದು ಸೂಚಿಸುವ ಹೆಚ್ಚಿನ ಫೋಟೊಗಳು  ಮತ್ತು ಸಂದೇಶಗಳನ್ನು ಹಂಚಿಕೊಂಡಿದ್ದಾರೆ.