Saturday, 10th May 2025

BBK 11: ಸುದೀಪ್ ಮಾತನ್ನೇ ಮೀರಿದ ಭವ್ಯಾ ಗೌಡ: ವೀಕೆಂಡ್​ನಲ್ಲಿ ಕಿಚ್ಚನ ಕ್ಲಾಸ್ ಖಚಿತ

Bhavya Gowda and Sudeep

ಹತ್ತನೇ ವಾರಕ್ಕೆ ತಲುಪಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಿ, ಎರಡು ಟಿವಿ ಚಾನೆಲ್​​ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಎಂಎಂ ಟಿವಿ ಮತ್ತು ಡಿಡಿ ಚಾನೆಲ್ ಎಂದು ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡು ಅವರಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಲಾಗಿತ್ತು.

ಒಂದು ತಂಡದಲ್ಲಿ ಧನರಾಜ್​​, ಹನುಮಂತ, ಶಿಶಿರ್​​, ರಜತ್​​, ಮೋಕ್ಷಿತಾ, ಚೈತ್ರಾ ಇದ್ದಾರೆ. ಮತ್ತೊಂದು ತಂಡದಲ್ಲಿ ಐಶ್ವರ್ಯಾ, ಸುರೇಶ್​, ತ್ರಿವಿಕ್ರಮ್​​, ಭವ್ಯ, ಗೌತಮಿ ಮಂಜಣ್ಣ ಇದ್ದಾರೆ. ನ್ಯೂಸ್​ ರೀಡಿಂಗ್​​ ಅಡುಗೆ ಮಾಡುವ ಟಾಸ್ಕ್, ಯೆಸ್ ಆರ್ ನೋ ಟಾಸ್ಕ್ ನೀಡಲಾಗಿತ್ತು. ಇದರ ಜೊತೆಗೆ ಎದುರಾಳಿ ವಾಹಿನಿಯಿಂದ ಈ ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಕಳಪೆ ಸದಸ್ಯನನ್ನು ಆರಿಸಬೇಕು ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು.

ಈ ಟಾಸ್ಕ್‌ನಲ್ಲಿ ಕಳಪೆ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಬಂದರೆ ಇವರ ಪರವಾಗಿ ವಾದ ಮಾಡಲು ಬಂದವರು ಮೋಕ್ಷಿತಾ ಪೈ. ಎದುರಾಳಿ ತಂಡದವರು ಪ್ರಶ್ನೆಗಳನ್ನು ಕೇಳಬೇಕಿತ್ತು. ಈ ವೇಳೆ ಭವ್ಯಾ ಗೌಡ ಪದೇ ಪದೇ ಚೈತ್ರಾ ಅವರು ಆಸ್ಪತ್ರೆಗೆ ಹೋಗಿ ಬಂದ ವಿಷಯವನ್ನೇ ಇಟ್ಟುಕೊಂಡು ಟಾರ್ಗೆಟ್ ಮಾಡಿದ್ದಾರೆ. ಈ ಮೂಲಕ ಸುದೀಪ್ ಮಾತನ್ನೇ ಮೀರಿದ್ದಾರೆ.

ಇತ್ತೀಚೆಗಷ್ಟೆ ಚೈತ್ರಾ ಕುಂದಾಪುರ ಆಸ್ಪತ್ರೆಗೆ ಹೋಗಿ ಬಂದು ಇತರೆ ಸ್ಪರ್ಧಿಗಳ ಜೊತೆ ಹೊರಗಡೆ ಯಾವ ರೀತಿಯಾದ ಅಭಿಪ್ರಾಯ ಇದೆ ಅಂತ ಹೇಳಿದ್ದರು. ಈ ವಿಚಾರವಾಗಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚೈತ್ರಾಗೆ ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಈ ಟಾಪಿಕ್‌ನ ಇಲ್ಲೇ ಬಿಡಬೇಕು ಎಂದು ಎಲ್ಲರಿಗೂ ಕಿಚ್ಚ ಸುದೀಪ್‌ ಸೂಚಿಸಿದ್ದರು. ಆದರೆ, ಇದೀಗ ಈ ವಿಚಾರವನ್ನು ಎತ್ತಿ ಸುದೀಪ್ ಮಾತನ್ನು ಕಡೆಗಣಿಸಿದ್ದಾರೆ.

ಭವ್ಯಾ ಈ ವಿಚಾರ ಎತ್ತಿ ಮಾತನಾಡುತ್ತಿದ್ದರೂ, ಅವರ ತಂಡದವರು ಸುಮ್ಮನೆ ಕೂತಿದ್ದು ಯಾಕೆ?, ಅಲ್ಲದೆ ಉಸ್ತುವಾರಿ ಸ್ಥಾನದಲ್ಲೇ ಇದ್ದವರು ಯಾಕೆ ನೆನಪಿಸಲಿಲ್ಲ ಕೊನೆ ಪಕ್ಷ ಎರಡೂ ತಂಡದವರಿಗೆ ಇದು ನೆನಪೇ ಆಗಿಲ್ಲವೇ ಎಂಬುದು ವೀಕ್ಷಕರ ಪ್ರಶ್ನೆ ಆಗಿದೆ.

BBK 11: ಚೈತ್ರಾಗೆ ದಿನದಿಂದ ದಿನಕ್ಕೆ ಹುಚ್ಚು ಜಾಸ್ತಿ ಆಗ್ತಿದೆ ಎಂದ ರಜತ್: ಬಿಗ್ ಬಾಸ್​ನಲ್ಲಿ ಮಿತಿ ಮೀರಿದ ಮಾತು