Saturday, 10th May 2025

BBK 11: ಚೈತ್ರಾಗೆ ದಿನದಿಂದ ದಿನಕ್ಕೆ ಹುಚ್ಚು ಜಾಸ್ತಿ ಆಗ್ತಿದೆ ಎಂದ ರಜತ್: ಬಿಗ್ ಬಾಸ್​ನಲ್ಲಿ ಮಿತಿ ಮೀರಿದ ಮಾತು

Chaithra Kundapura and Rajath (2)

ಬಿಗ್ ಬಾಸ್ (Bigg Boss) ಮನೆಗೆ ಕಾಲಿಟ್ಟ ನಂತರ ಒಮ್ಮೆಯಾದರು ಕ್ಯಾಪ್ಟನ್ ಪಟ್ಟ ಅಲಂಕರಿಸಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಕನಸು. ಹಾಗೆ ಒಂದು ವಾರದ ನಾಯಕನಾದರೆ ಆತನಿಗೆ ಕ್ಯಾಪ್ಟನ್ ರೂಮ್, ವಿಶೇಷ ಸೌಲಭ್ಯ ದೊರೆಯುತ್ತದೆ, ಇಮ್ಯುನಿಟಿ ಮತ್ತು ವಿಶೇಷ ಅಧಿಕಾರಗಳು ಸಿಗುತ್ತವೆ. ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದು ಅದರಿಂದ ಔಟಾದಾಗ ಆಗುವ ನೋವು ಅಷ್ಟಿಟ್ಟಲ್ಲ. ಅದರಂತೆ ಈ ವಾರ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಕ್ಯಾಪ್ಟನ್ ಆಗಲು ಹಣಾಹಣಿ ಜೋರಾಗಿದೆ ನಡೆದಿದ್ದು, ಜಗಳ ಕೂಡ ಆಗಿವೆ.

ಈ ವಾರ ಬಿಗ್ ಬಾಸ್ ಮನೆ ಎಂಎಂ ಟಿವಿ ಮತ್ತು ಡಿಡಿ ಚಾನೆಲ್ ಎಂದು ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಯಾಯಿತು. ​ಈ ಪೈಕಿ ಯಾರು ಹೆಚ್ಚು ಮನೋರಂಜನೆ ನೀಡುತ್ತಾರೆ ಆ ತಂಡ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತಾರೆ. ಎಂಎಂ ಟಿವಿಯಲ್ಲಿ ಧನರಾಜ್​​, ಹನುಮಂತ, ಶಿಶಿರ್​​, ರಜತ್​​, ಮೋಕ್ಷಿತಾ, ಚೈತ್ರಾ ಇದ್ದರೆ, ಡಿಡಿ ಟಿವಿಯಲ್ಲಿ ಐಶ್ವರ್ಯಾ, ಸುರೇಶ್​, ತ್ರಿವಿಕ್ರಮ್​​, ಭವ್ಯ, ಗೌತಮಿ ಮಂಜಣ್ಣ ಇದ್ದರು. ಈ ಟಾಸ್ಕ್​ನಲ್ಲಿ ಎಂಎಂ ಟಿವಿ (ಮಸ್ತ್ ಮಜಾ ಟಿವಿ) ಗೆಲುವು ಸಾಧಿಸಿದ್ದು, ತಂಡದ ಸದಸ್ಯರು ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಪಡೆದಿದ್ದಾರೆ.

ಕ್ಯಾಪ್ಟನ್ಸಿ ಓಟದಲ್ಲಿರುವ ಸ್ಪರ್ಧಿಗಳು ಮನೆಯ ಉಳಿದ ಸ್ಪರ್ಧಿಗಳನ್ನ ತಮ್ಮ ಸಹಾಯಕರಾಗಿ ಆಡುವಂತೆ ಮನವೊಲಿಸಿ ಅವರ ಪರವಾಗಿ ಆಡುವಂತಹ ಆಯ್ಕೆಯನ್ನು ನೀಡಲಾಗಿದೆ. ಟಾಸ್ಕ್‌ವೊಂದನ್ನು ನೀಡಿ ಅದರಲ್ಲಿ ಗೆದ್ದ ಸದಸ್ಯರು ಒಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಹಾಕುವ ಅಧಿಕಾರವನ್ನು ನೀಡಲಾಗಿದೆ. ಟಾಸ್ಕ್​ವೊಂದರಲ್ಲಿ ಗೆದ್ದ ರಜತ್‌ ಅವರು ಚೈತ್ರಾ ಕುಂದಾಪುರ ಅವರನ್ನು ಕ್ಯಾಪ್ಟನ್ಸಿ ಆಟದಿಂದ ಹೊರಗಿಟ್ಟಿದ್ದಾರೆ.

ಇದಕ್ಕೆ ಕೋಪಗೊಂಡ ಚೈತ್ರಾ, ಇದು ನಿಮ್ಮ ನಿರ್ಧಾರ ಅಲ್ಲ ಅಂತ ಗೊತ್ತಿದೆ. ಭುಜ ಬಲ ಇರೋನು ಮಾತ್ರ ಇಲ್ಲಿ ಇರಬೇಕಾಗಿಲ್ಲ. ನಿಮಗೆ ನನ್ನ ಭಯಯಿದೆ ಅಲ್ವಾ ಅದೇ ಖುಷಿ ನನಗೆ ಎಂದಿದ್ದಾರೆ. ಇದಕ್ಕೆ ರಜತ್‌ ಅವರಿಗೂ ಕೋಪ ನೆತ್ತಿಗೆ ಏರಿ, ಯಾವಾಗ ನೋಡಿದರೂ ಚೈತ್ರಾ ಅವರದ್ದು ಏನಾದರೂ ಒಂದು ಇದ್ದೇ ಇರತ್ತೆ. ದಿನೇ ದಿನೇ ಚೈತ್ರಾ ಅವರಿಗೆ ಹುಚ್ಚು ಜಾಸ್ತಿ ಆಗುತ್ತಿದೆ ಎಂದಿದ್ದಾರೆ. ಇದ್ದಕ್ಕೆ ತ್ರಿವಿಕ್ರಮ್‌‌‌ ಕೂಡ ಹೌದು ಎಂದಿದ್ದಾರೆ. ಚೈತ್ರಾ ಅವರ ಹುಚ್ಚು ನೋಡಿ ನನಗೆ ನಗು ಬರುತ್ತಿದೆ ಎಂದು ಹೇಳಿದ್ದಾರೆ.

BBK 11: ಗೌತಮಿ ಜೊತೆ ಆಡಿ ನಾನು ಕ್ಯಾಪ್ಟನ್ ಆಗಲ್ಲ: ಕ್ಯಾಪ್ಟನ್ಸಿ ರೇಸ್​ನಿಂದ ಮೋಕ್ಷಿತಾ ಔಟ್