Saturday, 17th May 2025

Viral News : ಬಾತ್‌ ಟವೆಲ್‌ ಸುತ್ತಿಕೊಂಡು ಮೆಟ್ರೋದಲ್ಲಿ ಓಡಾಡಿದ ಬೆಡಗಿಯರು, ವಿಡಿಯೋ ನೋಡಿ ನೆಟ್ಟಿಗರು ಫುಲ್‌ ಗರಂ

Viral News

ನವದೆಹಲಿ: ಜನ ತಾವು ಫೇಮಸ್‌ ಆಗ್ಬೇಕು ಅಂತಾ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಇತ್ತೀಚೆಗೆ ಯುವತಿಯೊಬ್ಬಳು ಟವೆಲ್‌ ಸುತ್ತಿಕೊಂಡು ಇಂಡಿಯಾ ಗೇಟ್‌ ಬಳಿ ಡಾನ್ಸ್‌ ಮಾಡಿದ್ದಳು. ಆ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿತ್ತು. ನೆಟ್ಟಿಗರು ಸಾಕಷ್ಟು ಟೀಕೆ ಮಾಡಿದ್ದರು. ಇದೀಗ ಮತ್ತೊಂದು ಅಂತಹುದೇ ಘಟನೆ ಬೆಳಕಿಗೆ ಬಂದಿದೆ. ರೀಲ್ಸ್‌ ಹುಚ್ಚಿಗೆ ಮೂವರು ಯುವತಿಯರು ಬರೀ ಬಾತ್ ಟವೆಲ್ ಸುತ್ತಿಕೊಂಡೇ ಮೆಟ್ರೋದಲ್ಲಿ (Metro) ಅಡ್ಡಾಡಿದ್ದಾರೆ. ಇವರ ಅವತಾರವನ್ನು ಕಂಡು ಅಲ್ಲಿದ್ದ ಜನ ಬೆರಗಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. (Viral News)

ಮೂವರು ಯುವತಿಯರು ರೀಲ್ಸ್‌ಗಾಗಿ ಬಾತ್‌ರೂಂ ಟವೆಲ್‌ ಧರಿಸಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕಣ್ಣಿಗೊಂದು ಗ್ಲಾಸ್‌, ತಲೆಗೊಂದು ಟವೆಲ್‌, ಮೈಗೊಂದು ಬಾತ್‌ ಟವೆಲ್‌, ಹೈ ಹೀಲ್ಸ್‌ ಧರಿಸಿ ಫ್ಯಾಷನ್‌ ಮಾಡೆಲ್‌ಗಳಂತೆ ಎಂಟ್ರಿ ಕೊಟ್ಟ ಮೂವರು ಯುವತಿಯರು ಸಖತ್‌ ಪೋಸ್‌ ಕೊಡುತ್ತಾ ಮೆಟ್ರೋದಲ್ಲಿ ಅಡ್ಡಾಡಿದ್ದಾರೆ.

ಈ ವಿಡಿಯೋವನ್ನು ಮಿಮಿಸ್ಕೇಟ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮೂವರು ಬೆಡಗಿಯರು ಸ್ನಾನದ ಟವೆಲ್‌ ಸುತ್ತಿಕೊಂಡು ಮಾಡೆಲ್‌ಗಳಂತೆ ಮೆಟ್ರೋ ನಿಲ್ದಾಣದ ತುಂಬೆಲ್ಲಾ ಓಡಾಡಿದ್ದಾರೆ. ನಂತರ ರೈಲಿನಲ್ಲಿ ಸಂಚರಿಸಿದ್ದಾರೆ. ಇವರ ಈ ಅವತಾರ ಕಂಡು ಹಲವಾರು ಜನ ಮೂಗುಮುರಿದರೆ ಇನ್ನೂ ಕೆಲವರು ಸೆಲ್ಫಿ ತೆಗೆದುಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ತರಹೇವಾರಿ ಕಮೆಂಟ್‌ಗಳು ಬಂದಿದ್ದು, ಒಬ್ಬ ಕಮೆಂಟ್‌ ಮಾಡಿ ʼಬಾತ್‌ರೂಮ್‌ನಿಂದ ಡೈರೆಕ್ಟ್‌ ಬೀದಿಗೆ ಬಂದಂತಿದೆʼ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಇನ್‌ಫ್ಲುಯೆನ್ಸರ್‌ಗಳೇ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ವರ್ತಿಸಿದರೆ ಹೇಗೆ?ʼ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಕೋಲ್ಕತ್ತಾ ಮೂಲದ ಮಾಡೆಲ್‌ ಸನ್ನತಿ ಮಿಶ್ರಾ ಎಂಬಾಕೆ ದೆಹಲಿಯ ಐಕಾನಿಕ್‌ ಇಂಡಿಯಾ ಗೇಟ್‌ ಬಳಿ ಬರೀ ಟವೆಲ್‌ ಸುತ್ತಿ ರೀಲ್ಸ್‌ ಮಾಡಿದ್ದಳು. ಆಕೆ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಂತರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಳು.

ಈ ಸುದ್ದಿಯನ್ನೂ ಓದಿ : Viral Video: ತುಂಡು ಟವಲ್‌ ಸುತ್ತಿಕೊಂಡು ನಡು ಬೀದಿಯಲ್ಲಿ ಕುಣಿದ ಮಾಡೆಲ್‌! ಆಕೆಯನ್ನು ತಕ್ಷಣ ಅರೆಸ್ಟ್‌ ಮಾಡಿ ಎಂದು ನೆಟ್ಟಿಗರು ಕಿಡಿ