ಮಾಸ್ಕೋ: ಮೇಕ್ ಇನ್ ಇಂಡಿಯಾ (Make in India) ಮೂಲಕ ಸಣ್ಣ ಮತ್ತು ದೊಡ್ಡ ಗಾತ್ರದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡುತ್ತಿದೆ ಎಂದು ಭಾರತ ಸರ್ಕಾರ ಮತ್ತು ನರೇಂದ್ರ ಮೋದಿ(Narendra Modi) ಅವರ ನಾಯಕತ್ವವನ್ನು ರಷ್ಯಾ(Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹಾಡಿ ಹೊಗಳಿದ್ದಾರೆ.
🚨 BIG BREAKING
— Megh Updates 🚨™ (@MeghUpdates) December 4, 2024
Russian President Putin praises PM Modi's 'Make in India' 🔥
Putin says, "INDIA FIRST policy has created 'stable conditions' in the country, & Russia is ready to place manufacturing sites in the country." 🎯 pic.twitter.com/N8aW7Raoq2
ಮಾಸ್ಕೋದಲ್ಲಿ (Moscow) ವಿಟಿಬಿ ಹೂಡಿಕೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಭಾರತದ `ಮೇಕ್ ಇನ್ ಇಂಡಿಯಾ’ ಯೋಜನೆ ಬಗ್ಗೆ ಪುಟಿನ್ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ʼಮೇಕ್ ಇನ್ ಇಂಡಿಯಾʼ ಯೋಜನೆಗಾಗಿ ರಷ್ಯಾ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧತೆಯನ್ನು ನಡೆಸಿದೆ. ಇದಕ್ಕೆಲ್ಲಾ ಭಾರತದ ನಾಯಕತ್ವವೇ ಕಾರಣ. ಹೀಗಾಗಿ, ಭಾರತವು ತನ್ನ ಹಿತಾಸಕ್ತಿಗಳ ಈಡೇರಿಕೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಜೊತೆಗೆ ಭಾರತದಲ್ಲಿನ ಹೂಡಿಕೆಗಳು ಲಾಭದಾಯಕವೆಂದು ನಾವು ನಂಬುತ್ತೇವೆ ಎಂದು ತಿಳಿಸಿದರು.
ಗ್ರಾಹಕ ಸರಕುಗಳು, ಐಟಿ, ಉನ್ನತ ತಂತ್ರಜ್ಞಾನ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ ಸಾಧನೆಯನ್ನು ಉಲ್ಲೇಖಿಸಿ, ಪಾಶ್ಚಾತ್ಯ ಬ್ರಾಂಡ್ಗಳನ್ನು ಬದಲಿಸುವ ಮೂಲಕ ಹೊಸ ರಷ್ಯಾದ ಬ್ರ್ಯಾಂಡ್ಗಳು ಯಶಸ್ಸು ಗಳಿಸಿದೆ. ಇದು ಆಮದು ಪರ್ಯಾಯ ಕಾರ್ಯಕ್ರಮದ ಭಾಗವಾಗಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. ಇನ್ನೂ ಕೃಷಿಯಲ್ಲಿ ತಯಾರಕರ ಮತ್ತು ಉತ್ಪಾದಕರ ಸಂಖ್ಯೆ ದಿನೇದಿನೇ ಬೆಳೆಯತ್ತಿದೆ. 1988ರಲ್ಲಿ, ಸೋವಿಯತ್ ಒಕ್ಕೂಟವು ಯುಎಸ್ಡಿ 35 ಶತಕೋಟಿಗೆ ಧಾನ್ಯವನ್ನು ಆಮದು ಮಾಡಿಕೊಂಡಿತ್ತು. ಕಳೆದ ವರ್ಷ, ಯುಎಸ್ಡಿ 66 ಶತಕೋಟಿಯಷ್ಟು ಧಾನ್ಯವನ್ನು ರಫ್ತು ಮಾಡಿದ್ದೇವೆ. ಇದು ನಮ್ಮ ರೈತರ ಸಾಮರ್ಥ್ಯವಾಗಿದೆ. ರಷ್ಯಾ ಒಕ್ಕೂಟದ ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳನ್ನು ವಿಸ್ತರಿಸುವ ಹೆಚ್ಚಿನ ಅವಶ್ಯಕತೆಯಿದೆ ಎಂದರು.
ಇದೇ ವೇಳೆ, ಉದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಲು ಬ್ರಿಕ್ಸ್ ರಾಷ್ಟ್ರಗಳ ಸಹಕಾರಕ್ಕಾಗಿ ಪುಟಿನ್ ಕರೆ ನೀಡಿದರು. ಮುಂದಿನ ವರ್ಷ ಬ್ರೆಜಿಲ್ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಸಹಯೋಗಕ್ಕಾಗಿ ಪ್ರಾಥಮಿಕ ಕ್ಷೇತ್ರಗಳನ್ನು ಮೌಲ್ಯಮಾಪನ ಮಾಡಲು ಸದಸ್ಯ ರಾಷ್ಟ್ರಗಳಲ್ಲಿ ಮನವಿ ಮಾಡಿದರು.
ಪ್ರಧಾನಿ ಮೋದಿಯನ್ನು ಹೊಗಳಿದ ಗಯಾನಾ ಅಧ್ಯಕ್ಷ
ಗಯಾನಾ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದರು. ಮೋದಿಯವರ ಪ್ರಭಾವಶಾಲಿ ನಾಯಕತ್ವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಇರ್ಫಾನ್ ಅಲಿ ಮೋದಿಯವರನ್ನು “ಎಲ್ಲ ನಾಯಕರಲ್ಲಿ ನೀವೊಬ್ಬ ಚಾಂಪಿಯನ್” ಎಂದು ಬಣ್ಣಿಸಿದ್ದರು.
ಜಾರ್ಜ್ಟೌನ್ನಲ್ಲಿ ನಡೆದಿದ್ದ ಸಭೆಯಲ್ಲಿ ಮಾತನಾಡಿದ್ದ ಮೊಹಮ್ಮದ್ ಇರ್ಫಾನ್ ಅಲಿ ಭಾರತದಲ್ಲಿನ ನರೇಂದ್ರ ಮೋದಿಯವರ ಆಡಳಿತ ಶೈಲಿಯನ್ನು ಹೊಗಳಿದ್ದರು. ಗಯಾನಾ ಮತ್ತು ಇತರ ರಾಷ್ಟ್ರಗಳಲ್ಲಿ ಅವರ ಪ್ರಭಾವವನ್ನು ಪ್ರಸ್ತಾಪಿಸಿದ್ದ ಅವರು ನೀವು ಇಲ್ಲಿ ಬಂದಿರುವುದು ನಮಗೆ ಹೆಮ್ಮೆ ಎಂದಿದ್ದರು. ನೀವು ನಾಯಕರಲ್ಲಿ ಚಾಂಪಿಯನ್ ಆಗಿದ್ದೀರಿ. ಭಾರತ ದೇಶವನ್ನು ನೀವು ನಂಬಲಾಗದಷ್ಟು ಮುನ್ನಡೆಸಿದ್ದೀರಿ. ನೀವು ಅಭಿವೃದ್ಧಿಶೀಲ ಜಗತ್ತಿಗೆ ಬೆಳಕನ್ನು ತೋರಿಸಿದ್ದೀರಿ. ನಿಮ್ಮನ್ನು ನೋಡಿ ಅನೇಕರು ತಮ್ಮ ದೇಶದಲ್ಲಿ ಅಭಿವೃದ್ಧಿ ಮಾಪನಗಳು ಮತ್ತು ಚೌಕಟ್ಟನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಗಯಾನಾ ಅಧ್ಯಕ್ಷ ಹೇಳಿದ್ದರು.
ಈ ಸುದ್ದಿಯನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಹತ್ಯೆಗೆ ಭಾರೀ ಸಂಚು? ಬೆದರಿಕೆ ಕರೆ ಮಾಡಿದ್ದ ಮಹಿಳೆ ಹೇಳಿದ್ದೇನು?