ಲಖನೌ: ಕೆಲವರು ಬೆಟ್ಟಿಂಗ್ ಕಟ್ಟಿ ಕುಸ್ತಿ ಆಡಿ ಹಣ ಗಳಿಸುತ್ತಾರೆ. ಆದರೆ ಈ ಕುಸ್ತಿ ಕೆಲವೊಮ್ಮೆ ಬಹಳ ಅಪಾಯಕಾರಿಯಾಗಿರುತ್ತವೆ. ಇದಕ್ಕೆ ಮುಖ್ಯ ಉದಾಹರಣೆ ಎಂದರೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದ ಈ ಕುಸ್ತಿ. ಇತ್ತೀಚೆಗೆ ಇಬ್ಬರು ಯುವಕರ ಕುಸ್ತಿ ಸ್ಪರ್ಧೆಯು ಅಪಾಯಕಾರಿ ತಿರುವು ಪಡೆದ ಆಘಾತಕಾರಿ ಕ್ಷಣದ ವಿಡಿಯೊಂದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೊರಾದಾಬಾದ್ನ ಮಜೋಲಾದ ಮಿಯಾನ್ ಕಾಲೋನಿಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. 10,000 ರೂ. ಮೊತ್ತದ ಬೆಟ್ಟಿಂಗ್ ಅನ್ನು ಒಳಗೊಂಡ ಈ ಆಟದ ಪರಿಣಾಮದಿಂದ ಸ್ಪರ್ಧಿಗಳಲ್ಲಿ ಒಬ್ಬರಾದ ಕಾಶಿಫ್ ಅವರ ಕೈಯ ಮೂಳೆ ಮುರಿದಿದೆ. ಈ ಪ್ರದೇಶದಲ್ಲಿ ಅಂತಹ ಶಕ್ತಿ ಪ್ರದರ್ಶನಗಳು ಹೆಚ್ಚು ನಡೆಯುತ್ತಿರುತ್ತದೆ ಎಂದು ವರದಿಯಾಗಿದೆ. ಅಲ್ಲಿ ಯುವಕರು ಆಗಾಗ್ಗೆ ಕೈ-ಕುಸ್ತಿ ಪಂದ್ಯಗಳಲ್ಲಿ ಸ್ಪರ್ಧಿಸುತ್ತಾರೆ ಮತ್ತು ಬೆಟ್ಟಿಂಗ್ಗಳನ್ನು ಅವ್ಯಾಹತವಾಗಿ ನಡೆಯುತ್ತದೆ ಎನ್ನಲಾಗಿದೆ.
Damn! his Hand got broken while Arm wrestling in Moradabad Up
— Ghar Ke Kalesh (@gharkekalesh) December 3, 2024
pic.twitter.com/IHiYb7UG6s
ಕಾಶಿಫ್ ಆರ್ಮ್-ಕುಸ್ತಿ ಪಂದ್ಯದಲ್ಲಿ ಸ್ಪರ್ಧಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದರಿಂದ ನಂತರ ಭಾಗಿಯಾಗಿರುವ ಎರಡೂ ತಂಡಗಳು ಅವರ ವೈದ್ಯಕೀಯ ವೆಚ್ಚಗಳನ್ನು ಭರಿಸಲು 60,000 ರೂ.ಗಳನ್ನು ನೀಡಿದೆ ಎನ್ನಲಾಗಿದೆ. ಹಾಗಾಗಿ ಕಾಶಿಫ್ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:’ಯೇ ರಾತೇ ಯೇ ಮೌಸಮ್’ ಹಾಡಿಗೆ ಬಾಲಕಿಯ ಕ್ಯೂಟ್ ಅಭಿನಯ; ಫಿದಾ ಆದ ನೆಟ್ಟಿಗರು: ವಿಡಿಯೊ ನೋಡಿ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. “ನೋಡಿದರೆ ತುಂಬಾ ನೋವಾಗಿರಬಹುದು ಅನಿಸುತ್ತದೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ಬ್ರೋ ಅಕ್ಷರಶಃ ‘ದಾಖಲೆಗಳನ್ನು ಮುರಿಯುವ’ ಮಾರ್ಗವನ್ನು ತೆಗೆದುಕೊಂಡರು” ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ವಿಡಿಯೊವನ್ನು ನೋಡಿದ ನಂತರ, ಇನ್ನೊಬ್ಬ ಬಳಕೆದಾರರು ತಮಗಾದ ಅಪಘಾತವನ್ನು ನೆನಪಿಸಿಕೊಂಡು, “ಕೆಲವು ವರ್ಷಗಳ ಹಿಂದೆ ನನಗೆ ಅದೇ ಆಯಿತು, ಆದರೆ ಅದು ಬೈಕ್ ಅಪಘಾತದಿಂದಾಗಿ” ಎಂದು ಅವರು ಹಂಚಿಕೊಂಡಿದ್ದಾರೆ. ಹಾಗೇ ಕೆಲವು ಬಳಕೆದಾರರು ಇದು ಕೇವಲ ಮೂಳೆ ಸಮಸ್ಯೆಯಾಗಿದೆ ಎಂದು ಊಹಿಸಿದ್ದಾರೆ ಮತ್ತು ಸರಿಯಾದ ಚಿಕಿತ್ಸೆಯೊಂದಿಗೆ ಆತ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.