Sunday, 18th May 2025

Harish Kera Column: ಅಮೆರಿಕದಿಂದ ಭಾರತಕ್ಕೆ ಬಂದ ಯಯಾತಿ

ಕಾಡುದಾರಿ

ಹರೀಶ್‌ ಕೇರ

ಮಹಾಭಾರತದ ಯಯಾತಿಯ ಕತೆ ನಿಮಗೆ ಗೊತ್ತಿರಬಹುದು. ಚಕ್ರವರ್ತಿ ಯಯಾತಿಗೆ ಅಕಾಲ ವೃದ್ಧಾಪ್ಯ ಅಡರುತ್ತದೆ. ಅವನಿಗೆ ಈ ಶಾಪ ನೀಡಿದ ಶುಕ್ರಾಚಾರ್ಯರೇ ‘ಈ ವೃದ್ಧಾಪ್ಯವನ್ನು ಯಾರ ಜತೆಗಾದರೂ ವಿನಿಮಯ ಮಾಡಿಕೋ’ ಎನ್ನುವ ಪರಿಹಾರವನ್ನೂ ಕೊಡುತ್ತಾರೆ. ಆದರೆ ಅವನ ಅಷ್ಟೂ ಮಕ್ಕಳಲ್ಲಿ ಪುರು ಒಬ್ಬನೇ ತನ್ನ ಯೌವನವನ್ನು ತಂದೆಯೊಂದಿಗೆ ವಿನಿಮಯ ಮಾಡಿಕೊಳ್ಳಲು ಒಪ್ಪುತ್ತಾನೆ. ಹೀಗೆ ಯಯಾತಿ ತನ್ನ ಯೌವನವನ್ನು ಮರಳಿ ಪಡೆಯುತ್ತಾನೆ. ಈ ಕತೆಯ ಅಂತ್ಯವನ್ನು ಈ ಅಂಕಣದ ಕೊನೆಯಲ್ಲಿ ಮತ್ತೆ ನೋಡೋಣ. ಯಯಾತಿಯನ್ನು ಮತ್ತೆ
ಅಮರಗೊಳಿಸಿದ ಗಿರೀಶ ಕಾರ್ನಾಡರ ನಾಟಕವೂ ನಿಮಗೆ ತಿಳಿದದ್ದೇ.

ಸದ್ಯ ಯಯಾತಿಯನ್ನು ನೆನೆಯಲು ಕಾರಣವಿದೆ. ಆಧುನಿಕ ಯಯಾತಿಯೊಬ್ಬ ಇಂದು (ಡಿ.5) ಬೆಂಗಳೂರಿಗೆ ಕಾಲಿಟ್ಟಿದ್ದಾನೆ. ಇವನ ಹೆಸರು ಬ್ರ್ಯಾನ್ ಜಾನ್ಸನ್ (ಆqsZ ಒಟeoಟ್ಞ)* ಅಮೆರಿಕ ಮೂಲದ ಶ್ರೀಮಂತ ಉದ್ಯಮಿ. ‘ಡೋಂಟ್ ಡೈ’ (ಈಟ್ಞ’ಠಿ ಈಜಿಛಿ) ಎಂಬುದು ಇವನು
ಆರಂಭಿಸಿರುವ ವಿಶಿಷ್ಟ ಅಭಿಯಾನದ ಹೆಸರು. ಹೆಸರೇ ಹೇಳುವಂತೆ ಇದು ಸುದೀರ್ಘ ಬದುಕುವ, ಸಾಧ್ಯವಾದರೆ ಅಮರವಾಗುವ ಇಚ್ಛೆಯನ್ನು ಈಡೇರಿಸಿಕೊಳ್ಳುವ ಗುರಿ ಹೊಂದಿರುವ ಸಂಸ್ಥೆ. ‘ಹುಟ್ಟಿದವನಿಗೆ ಸಾವು ತಪ್ಪದು’ ಎಂಬ ಸಾಮಾನ್ಯ ಜ್ಞಾನವನ್ನು ಪ್ರಶ್ನಿಸಿ, ಸಾವನ್ನು ಸುದೀರ್ಘ ಕಾಲ ಮುಂದೂಡಿ ಆರೋಗ್ಯಕರವಾಗಿ ಬದುಕಲು ಸಾಧ್ಯವಿದೆ ಎಂದೂ ಹೇಳುವ ಇವನ ಈ ಉಪಕ್ರಮ ತುಸುತುಸುವೇ ಜನರ ಗಮನ ಸೆಳೆಯುತ್ತಿದೆ. ಸದ್ಯ ಭಾರತ ಪ್ರವಾಸದಲ್ಲಿರುವ ಇವನ ಇವೆಂಟ್‌ಗಳಿಗೆ ಜನ ಸೇರುತ್ತಿದ್ದಾರೆ.

ಏನಿದು ಡೋಂಟ್ ಡೈ? ಜನಿಸಿದವನಿಗೆ ಸಾವು ಶತಸ್ಸಿದ್ಧ ಎಂಬುದು ಇವನಿಗೆ ಗೊತ್ತಿಲ್ಲವೆ? ಗೊತ್ತಿದೆ. ಬ್ರ್ಯಾನ್ ಪ್ರಕಾರ ‘ಸಾಯಬೇಡಿ’ ಎಂಬುದನ್ನು ಅಕ್ಷರಾರ್ಥದಲ್ಲಿ ತೆಗೆದುಕೊಳ್ಳಕೂಡದು. ಅಂದರೆ ಆತನ ಯೋಜನೆಯ ಗುರಿ ಮನುಷ್ಯನನ್ನು ಅಮರನಾಗಿಸುವುದಲ್ಲ. ಬದಲು ಸಾವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದೂಡುವುದು. ಕನಿಷ್ಠ ೧೫೦-೨೦೦ ವರ್ಷಗಳಾದರೂ ಬದುಕುವುದು ಅಥವಾ ಸುದೀರ್ಘ ಕಾಲ ಆರೋಗ್ಯಯುತವಾಗಿ ಬದುಕುವುದು. ಇದು ಸಾಧ್ಯ ಎಂಬುದು ಬ್ರ್ಯಾನ್‌ನ ಥಿಯರಿ. ಸದ್ಯ ಈತ ತನ್ನನ್ನು ಭೂಮಂಡಲದ ‘ಮೋ ಮೆಶರ್ಡ್ ಹ್ಯೂಮನ್’ ಎಂದು ಹೇಳಿಕೊಳ್ಳುತ್ತಾನೆ. ಅಂದರೆ ಅವನ ದೇಹದ ಆರೋಗ್ಯದ ಪ್ರತಿಯೊಂದು ಚಹರೆಯೂ, ಬದಲಾವಣೆಯೂ ದಾಖಲುಗೊಂಡಿದೆ, ಇನ್ನೂ ದಾಖಲಾಗುತ್ತಿರುತ್ತದೆ. ಆತ ತನ್ನನ್ನೇ ಈ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾನೆ.

ಸುಮ್ಮನೇ ಇವನನ್ನು ಯಯಾತಿ ಎಂದದ್ದಲ್ಲ. ನಿರೋಗಿಯಾಗುವ, ಯುವಕನಾಗಿಯೇ ಉಳಿಯುವ ಇವನ ಹುಚ್ಚು ಎಷ್ಟೆಂದರೆ, ತನ್ನ ಮಗನ ರಕ್ತವನ್ನೇ (ಪ್ಲಾಸ್ಮಾ) ತೆಗೆದು ತನಗೇ ಇಂಜೆಕ್ಟ್ ಮಾಡಿಕೊಂಡಿದ್ದಾನೆ! ಜೀನ್ ಥೆರಪಿ ಇಂಜೆಕ್ಷನ್ ತೆಗೆದುಕೊಳ್ಳುತ್ತಾನೆ. ಇವನಿಗೀಗ 47 ವರ್ಷ.
ಆದರೆ ತನ್ನ ಹೃದಯಕ್ಕೀಗ 32 ವರ್ಷ, ಚರ್ಮಕ್ಕೆ ಇಪ್ಪತ್ತೆಂಟೇ ವರ್ಷ ಎಂಬುದು ಅವನ ಕ್ಲೇಮು. ಒಂದು ಹಂತದ ನಂತರ ಇವನ ವಯಸ್ಸು ರಿವರ್ಸ್ ಗೇರ್ ಹಾಕಿದೆ. ಅದಕ್ಕೆ ಉದಾಹರಣೆ, ಬಿಳಿಯಾಗಿದ್ದ ಇವನ ತಲೆಕೂದಲು ಕಪ್ಪುಬಣ್ಣಕ್ಕೆ ಮರಳಿರುವುದು. ‘ಜಾನ್ಸನ್ ಬ್ಲೂಪ್ರಿಂಟ್’ ಎಂಬ
ಹೆಸರಿನ ದಿನಚರಿ ರೂಪಿಸಿಕೊಂಡಿzನೆ. ಪ್ರತಿದಿನ ಹೀಗೇ ಮಾಡಿದರೆ ನಿತ್ಯಯೌವನ, ನಿರೋಗ, ದೀರ್ಘಾಯಸ್ಸು ಖಚಿತ ಎಂಬುದು ಇವನ ಭರತವಾಕ್ಯ. ಆ ಬ್ಲೂಪ್ರಿಂಟ್ ಹೇಗಿದೆ? ಮುಂಜಾನೆ 5 ಗಂಟೆಗೆ ಅಲಾರಂ ಇಲ್ಲದೆ ಏಳುತ್ತಾನೆ.

ನಂತರ ಕಿವಿಯ ಒಳಭಾಗದ ತಾಪಮಾನ ಅಳೆಯುವ ಒಂದು ಥರ್ಮಲ್ ಸ್ಕಾ ನ್ ಚೆಕ್. ದೇಹದ ಸಿರ್ಕಾಡಿಯನ್ ಲಯವನ್ನು ನಿಗಾದಲ್ಲಿಡಲು ಒಂದು ಥರ್ಮಲ್ ಲ್ಯಾಂಪ್ ಬಳಕೆ. ದಿನದಲ್ಲಿ 3 ಬಾರಿ ಆಹಾರ, ಅದೂ ಬೆಳಗ್ಗೆ 6 ರಿಂದ ಮಧ್ಯಾಹ್ನ 11ರ ಒಳಗೆ. ನಂತರ ಏನೇನೂ ಇಲ್ಲ. ಅದೂ ಲೆಕ್ಕ ಮಾಡಿ 100 ಸಪ್ಲಿಮೆಂಟ್‌ಗಳನ್ನು ಒಳಗೊಂಡು 1977 ಕ್ಯಾಲೊರಿ ಮಾತ್ರ. ಪ್ರತಿದಿನ ದೇಹದ ತೂಕ, ಬಿಎಂಐ, -ಟ್, ಸ್ನಾಯುಸಾಂದ್ರತೆ, ನೀರಿನಂಶ, ಮೂಳೆ, ಹೃದಯಬಡಿತ, ರೂಮಿನ ಗಾಳಿಯ ಗುಣಮಟ್ಟ ಇತ್ಯಾದಿಗಳ ಅಳತೆ. ಚರ್ಮದ ಕಾಂಪ್ಲೆಕ್ಷನ್‌ಗಾಗಿ 5 ನಿಮಿಷದ
ಬ್ಲೂ ಲೈಟ್ ಥೆರಪಿ. 10 ನಿಮಿಷ ಧ್ಯಾನ. ಕಣ್ಣು ಒಣಗುವುದು ತಡೆಯಲು ಅಶ್ರುಗ್ರಂಥಿಗಳ ಚೋದನೆಗಾಗಿ ಒಂದು ಸಾಧನ. ತಲೆಕೂದಲು ಉದುರುವಿಕೆ ತಡೆಯಲು ರೆಡ್ ಲೈಟ್ ಕ್ಯಾಪ್ ಬಳಕೆ. 30-60 ನಿಮಿಷ ವ್ಯಾಯಾಮ. 30 ನಿಮಿಷಗಳ ಹೃದಯ ಬಡಿತ ಏರುಪೇರು ಥೆರಪಿ ಸೆಷನ್. ಇನ್ನೂ ಹಲವೊಮ್ಮೆ ವಿಶೇಷ, ಹೇಳಹೆಸರಿಲ್ಲದ ಥೆರಪಿ, ಪ್ರಯೋಗ, ಚೆಕಪ್‌ಗಳು. ರಾತ್ರಿ 8.30ಕ್ಕೆ ಸರಿಯಾಗಿ ತಾಪಮಾನ
ನಿಯಂತ್ರಿತವಾದ ಬೆಡ್ ಸೇರಿ ಮೂರೇ ನಿಮಿಷದಲ್ಲಿ ಗಾಢನಿದ್ರೆ.

ಇಷ್ಟೆಲ್ಲ ಮಾಡಿಕೊಳ್ಳುತ್ತಾ ಬದುಕಬೇಕೆ ಎಂದು ನಾವು ಕೇಳಬಹುದು. ಇದು ಬ್ರ್ಯಾನ್‌ನಂಥ ಕುಬೇರರಿಗೆ, ಹೆಲ್ತ್‌ ಫ್ರೀಕ್‌ಗಳಿಗೆ ಮಾತ್ರ ಸಾಧ್ಯ ಎಂಬುದರಲ್ಲಿ ಅನುಮಾನವಿಲ್ಲ. ತನ್ನ ಬದುಕೇ ಒಂದು ಪ್ರಯೋಗ ಎಂಬುದೇ ಅವನ ಮಾತು. ಇದಕ್ಕೆ ಅವನಲ್ಲಿ ತಾತ್ವಿಕ, ವೈಜ್ಞಾನಿಕ ಸಮರ್ಥನೆಗಳೂ ಇವೆ. ಇವನ ಪ್ರಯೋಗಗಳ ಆಶಯವನ್ನು ವಿಜ್ಞಾನಿಗಳಲ್ಲಿ ಹೆಚ್ಚಿನವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಮನುಷ್ಯ ಇಂಥದೊಂದು ಕನಸು ಕಾಣುವುದು ಸದ್ಯಭವಿಷ್ಯದಲ್ಲಿ ಅಸಾಧ್ಯ ಎಂಬುದವರ ನಿಲುವು. ಆದರೆ ಯೋಚಿಸಿ. ಈಗ ನಾವು ನೀವು ಕೃತಕ ಬುದ್ಧಿಮತ್ತೆಯ ಬಳಕೆ ಮಾಡುತ್ತಿದ್ದೇವೆ. 20 ವರ್ಷದ ಹಿಂದೆ ಇದರ ಬಗ್ಗೆ ನಮಗೆ ಗೊತ್ತಿತ್ತೆ? ಹೋಗಲಿ, ನಾವೀಗ ಪಡೆಯುತ್ತಿರುವ ಇಂಟರ್ನೆಟ್‌ನ ಅಗಾಧ ಪ್ರಯೋಜನಗಳನ್ನು 50 ವರ್ಷದ ಹಿಂದೆ ಊಹಿಸಿಕೊಳ್ಳಲಾದರೂ ಸಾಧ್ಯವಿತ್ತೆ? ಅದೂ ಹೋಗಲಿ, ಸಾವಿರ ಮೈಲು ದೂರದಲ್ಲಿದ್ದವರ ಜತೆಗೆ ನಾವು ಇಲ್ಲಿಂದಲೇ ಈ ಕ್ಷಣದಲ್ಲಿ ಮಾತನಾಡಬಹುದು ಎಂದು 170 ವರ್ಷದ ಹಿಂದೆ ಯಾರಾದರೂ ಊಹಿಸಿದ್ದರೆ? ಪ್ರತಿಯೊಂದು ವಿಶಿಷ್ಟ ಆವಿಷ್ಕಾರವೂ ಮೊದಲಿಗೆ ಈ ಸಮಾಜದ, ವಿಜ್ಞಾನಿಗಳ ತಿರಸ್ಕಾರವನ್ನೇ ಪಡೆಯುತ್ತದೆ. ಕ್ರೇಜಿ ಅನಿಸುವ ಯೋಚನೆಯೊಂದು ಯಾರೋ ಒಬ್ಬನಲ್ಲಿ ಮೊದಲಿಗೆ ಹುಟ್ಟಿಕೊಳ್ಳುತ್ತದೆ. ಅದು ನಿಧಾನವಾಗಿ ಮೂರ್ತರೂಪ ಪಡೆಯುತ್ತದೆ. ದೀರ್ಘಾಯುಷ್ಯ ಅಥವಾ ಅಮರತ್ವವೂ ಹೀಗೇ ಒಂದು ದಿನ ನಿಜವಾಗಬಾರದೇಕೆ? ಇದು ಬ್ರ್ಯಾನ್ ವಾದ.

ಇಷ್ಟೆಲ್ಲ ಮಾಡುವ ಜಾನ್ಸನ್ ವಿಜ್ಞಾನಿಯಲ್ಲ. ಅವನು ಎಂಬಿಎ ಮಾಡಿದ, ಇ-ಕಾಮರ್ಸ್ ಕಂಪನಿ ಸ್ಥಾಪಿಸಿ ಮಿಲಿಯನ್‌ಗಟ್ಟಲೆ ಹಣ ದುಡಿದ ಶ್ರೀಮಂತ. ಆದರೆ ತನ್ನ ಚಿಂತನೆಗೆ ಅನುಗುಣವಾಗಿ ದುಡಿಯಬಲ್ಲ ತಜ್ಞರನ್ನು ಕೆಲಸಕ್ಕಿಟ್ಟುಕೊಂಡಿದ್ದಾನೆ. ನಮ್ಮ ಕಾಲದ ವ್ಯಂಗ್ಯವೇ ಇದು.
ಒಂದು ಕಾಲದಲ್ಲಿ ನ್ಯೂಟನ್, ಐನ್‌ಸ್ಟೀನ್‌ರಂಥ ಸ್ವತಂತ್ರ ಚಿಂತನೆಯ ವಿಜ್ಞಾನಿಗಳು ಕ್ರಾಂತಿಕಾರಿ ಸಂಶೋಧನೆಗಳನ್ನು ಮಾಡಿದರು. ಇಂದು ಎಲಾನ್ ಮ, ಬ್ರ್ಯಾನ್ ಜಾನ್ಸನ್ ಥರದ ಬಿಲಿಯನೇರ್‌ಗಳು ಈ ಸಂಶೋಧನೆಗಳನ್ನು ರೂಪಿಸುತ್ತಾರೆ. ಜಾನ್ಸನ್ ಹೆಲ್ತ್‌ಕೇರ್‌ನಲ್ಲಿ ಸಾಕಷ್ಟು ಹಣ
ಹೂಡಿzನೆ. ಮಿದುಳಿನ ಚಟುವಟಿಕೆ ಅಳೆಯುವ ಗ್ಯಾಜೆಟ್ ಗಳು, ಆಲ್ಝೈಮರ್ ಮತ್ತು ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡುವ ಸಾಧನಗಳನ್ನೆಲ್ಲ ಅಭಿವೃದ್ಧಿಪಡಿಸಲು ಹೂಡಿಕೆ ಮಾಡಿದ್ದಾನೆ. 2030ರ ಹೊತ್ತಿಗೆ ಜಗತ್ತೆ ‘ಡೋಂಟ್ ಡೈ’ ಅನ್ನುತ್ತಿರುತ್ತದೆ ಅನ್ನುವುದು ಅವನ ಆತ್ಮವಿಶ್ವಾಸ. ಅಪಘಾತ ಏನೂ ಆಗದೆ ಇದ್ದರೆ, 200 ವರ್ಷ ಬದುಕುತ್ತೇನೆ ಎಂಬುದು ಅವನ ಭರವಸೆ.

ಅಂದ ಹಾಗೆ, ಅವನು ಮಗನ ಪ್ಲಾಸ್ಮಾ ತೆಗೆದು ತನ್ನ ಬಾಡಿಗೆ ತುಂಬಿಸಿಕೊಂಡಿದ್ದಾನೆ ಅಂದೆನ, ಇದು ವಯಸ್ಸಾಗುವ ಪ್ರಕ್ರಿಯೆಯನ್ನು ರಿವರ್ಸ್ ಮಾಡುತ್ತದೆ ಎಂದು ವಿಜ್ಞಾನಿಗಳೇನೂ ಭರವಸೆ ಕೊಟ್ಟಿಲ್ಲ.

ಇದು ಎಫ್‌ ಡಿಎಯಿಂದ (ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರ) ಅನುಮೋದನೆ ಪಡೆದ ವಿಧಾನವೂ ಅಲ್ಲ. ಆದರೂ ಕೆಲವು
ಶ್ರೀಮಂತರು ತಮ್ಮ ವಯಸ್ಸಾಗುವಿಕೆ ತಡೆಯಲು ಈ ವಿಧಾನದ ಮೊರೆಹೋಗುತ್ತಿದ್ದಾರೆ ಎಂಬುದು ಅದರ ಅರಿವಿಗೆ ಬಂದಿದೆ. ಇದರಿಂದ ವಯಸ್ಸಾಗುವಿಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ಸರಿ, ಈಗ ಬ್ರಾ ನ್ ಅಥವಾ ಅವನಂಥ ಒಂದಷ್ಟು ಮಂದಿ
ಏನೇನೋ ಮಾಡಿ ಇನ್ನೂರೋ ಮುನ್ನೂರೋ ವರ್ಷ ಬದುಕಿದರು ಎಂದಿಟ್ಟುಕೊಳ್ಳೋಣ. ಆಗ ಅವರು ಏನು ಮಾಡುತ್ತಿರಬಹುದು? ಮಹಾಭಾರತದಲ್ಲಿ 800 ವರ್ಷ ಬದುಕಿದರೆಂದು ಹೇಳಲಾದ ಭೀಷ್ಮಾಚಾರ್ಯರು ಏನು ಮಾಡುತ್ತಿದ್ದರು.

ತಮ್ಮ ನಂತರದ ತಲೆಮಾರುಗಳಿಗೆ ಕನೆಕ್ಟ್‌ ಆಗಲಿಕ್ಕೆ ಸಾಧ್ಯವಾಗದೆ ಹೇಗೋ ಬದುಕಿದ್ದರು. ಇದು ಎಲ್ಲ ತಲೆಮಾರುಗಳಿಗೆ ಕಟ್ಟಿಟ್ಟ ಗಂಟು. ತಮ್ಮ ಮೊಮ್ಮಕ್ಕಳು ಹೋರಾಡಿ ನಾಶವಾಗುವುದನ್ನು ನೋಡಿದರು. 200 ವರ್ಷ ಬದುಕುವವರು ತಮ್ಮ ಮಕ್ಕಳ-ಮೊಮ್ಮಕ್ಕಳ ಸಾವನ್ನೂ ನೋಡಬೇಕಾಗುತ್ತದೆ. ಕೊನೆಗಾಲದಲ್ಲಿ ಭೀಷ್ಮರು ಬಾಣಗಳ ಮಂಚದಲ್ಲಿ ನರಳುತ್ತ ಮಲಗಿದ್ದರು. ಲೋಕ ಅದರದೇ ತೊಳಲಾಟಗಳಲ್ಲಿ ವ್ಯಸ್ತವಾಗಿತ್ತು. ವರ್ತಮಾನದ ಜತೆಗೆ ಸ್ಪಂದಿಸಲು ಅವರು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾಗಿದ್ದವು.

ಹಾಗೆಂದು ನಿರೋಗಿಯಾಗಿ ಬದುಕಲು ಮಾಡುವ ಪ್ರಯತ್ನಗಳು ವ್ಯರ್ಥವೇನಲ್ಲ. ದುಶ್ಚಟಗಳಿಲ್ಲದಿರುವುದು, ಒತ್ತಡವಿಲ್ಲದ ನೆಮ್ಮದಿಯ ದುಡಿಮೆಗಳು, ಸರಿಯಾದ ಆಹಾರ, ನಿದ್ರೆ, ವ್ಯಾಯಾಮ ಇವು ಮನುಷ್ಯನನ್ನು ದೀರ್ಘಕಾಲ ಕಾಪಾಡುತ್ತವೆ. ನಮ್ಮ ಆಯುರ್ವೇದದ
ಕಾಣ್ಕೆಯೂ ಇದೇ. ಇದು ರೋಗದಿಂದ ಪಾರಾಗುವ ಮಾತಾಯಿತು. ಆದರೆ ಜೀನ್‌ಗಳ ಬಗ್ಗೆ ಯಾರೂ ಏನೂ ಹೇಳಲಾಗದು. ಕ್ಯಾನ್ಸರ್ ಜೀನ್‌ಗಳು ನಮ್ಮಲ್ಲಿಯೇ ಅಡಗಿರುತ್ತವೆ. ಇಂಥದ್ದರಿಂದ ಪಾರಾಗುವ ಬಗೆ ಇನ್ನೂ ಯಾರಿಗೂ ಗೊತ್ತಿಲ್ಲ.

ಬ್ರ್ಯಾನ್ ಜಾನ್ಸನ್, “ನನ್ನ ಆವಿಷ್ಕಾರಗಳಿಗೆ ಸ್ಪಂದಿಸಲು ಭಾರತ ಸೂಕ್ತ ನೆಲ. ಇಲ್ಲಿನ ಯೋಗಿಗಳು ಅಮರತ್ವದ ಬಗ್ಗೆ ಅಂದೇ ಚಿಂತನೆ ನಡೆಸಿದ್ದಾರೆ” ಎಂದು ಜಾಣತನದ ಮಾತಾಡಿದ್ದಾನೆ.

ಅದೇನೋ ನಿಜ. ಆದರೆ ಅವನಿಗೆ ಗೊತ್ತಿಲ್ಲದ ಇನ್ನೂ ಒಂದು ಸಂಗತಿ ಇದೆ. ಅದೇನೆಂದರೆ ಇಲ್ಲಿ ಜೀವದ ಚಕ್ರಗತಿಯ ಚಿಂತನೆಯೂ ಇದೆ. ಅಂದರೆ ಒಂದು ಜೀವ ಸತ್ತು ಮಣ್ಣು ಸೇರಿದರೆ ಮಾತ್ರ ಅದು ಹೊಸ ಜೀವವಾಗಲು ಸಾಧ್ಯ. ಇಲ್ಲಿ ಪಂಚಭೂತದ ಚಿಂತನೆಯೂ ಇದೆ. ದೇಹವಾಗಿ ರೂಪು ಪಡೆಯುವ ಪಂಚಭೂತಗಳು ಒಂದು ಹಂತದ ನಂತರ ವಿಚ್ಛೇದಗೊಂಡು ಮತ್ತೆ ಪಂಚಭೂತಗಳಲ್ಲಿ ಕರಗಬೇಕು. ವಿಶ್ವ ಹೊಸದಾಗುವುದು
ಹೀಗೆ.

ಈಗ ಯಯಾತಿಯ ಕತೆಗೆ ಮತ್ತೆ ಬರೋಣ. ಮಗನಿಂದ ಯೌವನವನ್ನು ಪಡೆದ ಯಯಾತಿಗೆ ಒಂದು ಹಂತದಲ್ಲಿ ಇದೆಲ್ಲ ಸಾಕೆನಿಸಿಬಿಡುತ್ತದೆ. ಆಗ ಮಗನಿಗೇ ಯೌವನವನ್ನು ಮರಳಿಸಿ ವೃದ್ಧಾಪ್ಯವನ್ನು ಮತ್ತೆ ಪಡೆದು ಕಾಡಿಗೆ ಹೋಗುತ್ತಾನೆ. ಬ್ರ್ಯಾನ್ ಜಾನ್ಸನ್‌ಗೆ ಅಂಥ ವೈರಾಗ್ಯ ಕಾಡದಿರಲಿ, ಅವನು ಜನರ ಆರೋಗ್ಯವರ್ಧನೆಯ ಕಡೆಗೆ ಹೆಚ್ಚಿನ ಗಮನಹರಿಸಲಿ ಅಂತ ಹಾರೈಸೋಣ.

ಇದನ್ನೂ ಓದಿ: harish kera