ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿವಿಧ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ರಾಜ್ಯದ 21 ಜಿಲ್ಲೆಗಳಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಬೆಂಬಲಿಗರು ಆಯ್ಕೆಯಾಗಿದ್ದು, ಈ ಮೂಲಕ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ.
21 ಜಿಲ್ಲೆಗಳ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಪ್ರಜಾಸತ್ತಾತ್ಮಕ ವೇದಿಕೆ, ರಾಜ್ಯ ಪದಾಧಿಕಾರಿಗಳ ಚುನಾವಣೆಯಲ್ಲಿ ಮುನ್ನುಗುತ್ತಿದೆ. ಈಗಾಗಲೇ ತಾಲೂಕು ಘಟಕ ಹಾಗೂ ವಿವಿಧ ಇಲಾಖೆಗಳ ರಾಜ್ಯ ಪರಿಷತ್ ಸದಸ್ಯ ಸ್ಥಾನಗಳನ್ನು ಬಾಚಿಕೊಂಡಿರುವ ಪ್ರಜಾಸತ್ತಾತ್ಮಕ ವೇದಿಕೆಗೆ ಬುಧವಾರ ನಡೆದ ಜಿಲ್ಲಾ ಘಟಕದ ಚುನಾವಣೆ ಮತ್ತಷ್ಟು ಬಲ ನೀಡಿದೆ. ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಷಡಾಕ್ಷರಿ ವಿರೋಧಿ ಅಲೆ ರಾಜ್ಯಾದ್ಯಂತ ಹೆಚ್ಚಿರುವುದಕ್ಕೆ ಬುಧವಾರ ನಡೆದ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆಗಳೇ ಸಾಕ್ಷಿಯಾಗಿವೆ ಎಂದು ಪ್ರಜಾಸತ್ತಾತ್ಮಕ ವೇದಿಕೆ ತಿಳಿಸಿದೆ.
ಆಯ್ಕೆಯಾದ ಜಿಲ್ಲಾ ಘಟಕದ ಮಾಹಿತಿ:
1.ಬಸವರಾಜ ಬಳೊಂಡಗಿ (ಕಲಬುರಗಿ ಜಿಲ್ಲೆ)
2.ಕೃಷ್ಣಾ (ರಾಯಚೂರ ಜಿಲ್ಲೆ)
3.ರಾಯಪ್ಪಗೌಡ ಹುಡೇದ (ಯಾದಗೀರ)
4.ಎಂ.ಸಿ. ಕುಂಬಾರ (ಚಿಕ್ಕೋಡಿ)
5.ಸಿದ್ಧನಗೌಡರ (ಧಾರವಾಡ)
6.ರವಿ ಗುರುಜಿತ್ಕ (ಗದಗ)
7.ನಾಗರಾಜ ಜುಮ್ಮನ್ನವರ (ಕೊಪ್ಪಳ)
8.ಆಸೀಫ್ (ಬಳ್ಳಾರಿ)
9.ಮಹಾಂತೇಶ ಮುತ್ತಜ್ಜಿ (ಚಿತ್ರದುರ್ಗ)
10.ನರಸಿಂಹರಾಜು (ತುಮಕೂರು)
11.ನಾರಾಯಣಸ್ವಾಮಿ (ಚಿಕ್ಕಬಳ್ಳಾಪುರ)
12.ಅಜಯ್ (ಕೋಲಾರ)
13.ಸತೀಶ (ರಾಮನಗರ),
14.ಕೃಷ್ಣೇಗೌಡರು (ಹಾಸನ)
15.ಅರುಣಕುಮಾರ (ಮೈಸೂರು)
16.ಅರುಣಕುಮಾರ (ಕೊಡಗು)
17.ರೇಣುಕಾದೇವಿ (ಚಾಮರಾಜನಗರ)
18.ನಾಗೇಶ (ಮಂಡ್ಯ)
19.ಗಂಗಾಧರ (ಬೆಂಗಳೂರು ಗ್ರಾಮಾಂತರ)
20.ಕಿರಣ ನಾಯಕ (ಶಿರಸಿ)
21.ಮಲ್ಲೇಶ ಕರಿಗಾರ (ಹಾವೇರಿ)
146 ತಾಲೂಕುಗಳು:
ಕಳೆದ ಕೆಲ ದಿನಗಳ ಹಿಂದೆ ನಡೆದ ತಾಲೂಕು ಘಟಕ ಹಾಗೂ ಯೋಜನಾ ಘಟಕಗಳ ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಬೆಂಬಲಿಗರು 146 ತಾಲೂಕುಗಳಲ್ಲಿ ಆಯ್ಕೆಯಾಗಿದ್ದು ವಿಶೇಷ.
ಜಯಭೇರಿ ಬಾರಿಸಿದವರಿಗೆ ಅಭಿನಂದನೆ:
ಚುನಾಯಣೆಯಲ್ಲಿ ಗೆದ್ದು ಆಯ್ಕೆಯಾದ ರಾಜ್ಯದ 21 ಜಿಲ್ಲೆಗಳ ಜಿಲ್ಲಾ ಘಟಕದ ಅಧ್ಯಕ್ಷರು, ಖಜಾಂಚಿಗಳು, ರಾಜ್ಯ ಪರಿಷತ್ ಸದಸ್ಯರು, ವಿವಿಧ ಪದಾಧಿಕಾರಿಗಳು ಹಾಗೂ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಬೆಂಬಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕೃಷ್ಣಮೂರ್ತಿ, ಖಜಾಂಚಿ ಸ್ಥಾನದ ಅಭ್ಯರ್ಥಿ ಶಿವರುದ್ರಯ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Pralhad Joshi: ‘ಪಿಎಂ ಸೂರ್ಯ ಘರ್ʼ ಯೋಜನೆ; ಶೂನ್ಯ ಬಂಡವಾಳದಲ್ಲಿ ಜನರೇ ವಿದ್ಯುತ್ ಉತ್ಪಾದಕರಾಗಬಹುದು!