ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಟಾಸ್ಕ್ಗಳ ಕಾವು ಏರುತ್ತಿದೆ. ಹತ್ತನೇ ವಾರ ತಲುಪಿರುವ ಬಿಬಿಕೆಯಲ್ಲಿ ಈವರೆಗೆ ಬೆಳೆಸಿಕೊಂಡು ಬಂದಿದ್ದ ಸಂಬಂಧಗಳು ಒಂದೊಂದಾಗು ದೂರವಾಗುತ್ತಿದ್ದು, ವೈಯಕ್ತಿಕ ಟಾಸ್ಕ್ನತ್ತ ಗಮನ ಹರಿಸುತ್ತಿದ್ದಾರೆ. ಇದರ ಜೊತೆಗೆ ಬೆನ್ನಹಿಂದೆ ಆಡಿದ ಒಂದೊಂದೆ ಮಾತುಗಳು ಕೂಡ ಎಲ್ಲರ ಸಮ್ಮುಖದಲ್ಲಿ ಮುನ್ನಲೆಗೆ ಬರುತ್ತಿದೆ. ಅದರಂತೆ ಇದೀಗ ಶಿಶಿರ್ ಅವರಿಗೆ ಚೈತ್ರಾ ಕುಂದಾಪುರ ಜೊಲ್ಲ ಎಂದು ಹೇಳಿದ್ದಾರೆ ಎಂಬ ಮಾತು ಹೊರಬಿದ್ದಿದೆ.
ಈ ಮಾತು ಬರಲು ಕಾರಣವಾಗಿದ್ದು ಬಿಗ್ ಬಾಸ್ ನೀಡಿದ ನಾಮಿನೇಷನ್ ಟಾಸ್ಕ್. ಇಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ನಾಮಿನೇಷನ್ಗೆ ಸಂಬಂಧಿಸಿದಂತೆ ವಿಶೇಷ ಟಾಸ್ಕ್ ನೀಡಿದ್ದಾರೆ. ಬೆನ್ನಿಗೆ ಒಂದು ಬೆಂಡಿನ ತುಂಡನ್ನು ಕಟ್ಟಿರುತ್ತಾರೆ. ಅದಕ್ಕೆ ಯಾರೆಲ್ಲಾ ನಾಮಿನೇಟ್ ಮಾಡಲು ಬಯಸುತ್ತಾರೋ ಅವರೆಲ್ಲರೂ ಚೂರಿ ಚುಚ್ಚಬೇಕಿರುತ್ತದೆ. ಅದಕ್ಕೆ ಸೂಕ್ತ ಕಾರಣಗಳನ್ನು ಕೂಡ ಅಲ್ಲೇ ಎಲ್ಲರ ಸಮ್ಮುಖದಲ್ಲಿ ನೀಡಬೇಕು. ಈ ಸಂದರ್ಭ ಚೈತ್ರಾ ಅವರು ತ್ರಿವಿಕ್ರಮ್ ಬೆನ್ನಿಗೆ ಚೂರಿ ಹಾಕಿ ನಾಮಿನೇಟ್ ಮಾಡಿದ್ದಾರೆ.
ತ್ರಿವಿಕ್ರಮ್ ಮ್ಯಾನಿಪುಲೇಟ್ ಮಾಡುತ್ತಾರೆ. ಮೋಕ್ಷಿತಾರನ್ನು ನೋಡಿದರೆ ಸೈಕೋ ಅಂತೀರಾ ಎಂದು ತ್ರಿವಿಕ್ರಮ್ ಬಗ್ಗೆ ಚೈತ್ರಾ ಹೇಳಿದ್ದಾರೆ. ಇದರಿಂದ ಕೆರಳಿದ ತ್ರಿವಿಕ್ರಮ್, ನಾಲಗೆಯಲ್ಲಿ ಶಕ್ತಿಯಿಲ್ಲ ನನಗೆ, ತೋಳಿನಲ್ಲಿ ಶಕ್ತಿ ಇರುವುದು. ನಾಲಗೆಯಲ್ಲಿ ಸಿಕ್ಸ್ ಪ್ಯಾಕ್ ಬೆಳೆಸಿಲ್ಲ ಗೊತ್ತಾಯಿತ್ತಾ ಎಂದು ಹೇಳಿದರು.
ಇಲ್ಲಿಗೆ ನಿಲ್ಲದ ತ್ರಿವಿಕ್ರಮ್ ಮಾತು, ಶಿಶಿರ್ ಅವರನ್ನು ಕರೆದು ಭಯ್ಯಾ ನಿಮ್ಮನ್ನ ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ ಅಂತ ಹೇಳಿದ್ದಾರೆ ಎಂದರು. ಇದನ್ನು ಕೇಳಿ ಶಿಶಿರ್ಗೆ ಶಾಕ್ ಆಗಿದೆ. ಆಗ ಚೈತ್ರಾ ಅವರು, ನಾನು ಆ ವರ್ಡ್ ನಾನು ಯೂಸ್ ಮಾಡಿಲ್ಲ. ಆ ರೀತಿ ನಾನು ಹೇಳಿದ್ದರೆ ನನ್ನ ನಾಲಗೆ ಬಿದ್ದೋಗ್ಲಿ ಎಂದಿದ್ದಾರೆ.
ಇರಿಯುತ್ತಿರೋದು ಎದುರಾಳಿಯ ಖತ್ತಿಯೋ? ತಮ್ಮವರ ಮಾತುಗಳೋ?
— Colors Kannada (@ColorsKannada) December 4, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/YRTfb498vT
ಈ ಮಾತುಕತೆಯಿಂದ ಶಿಶಿರ್ ಗರಂ ಆಗಿದ್ದಾರೆ. ಇರೀ ಒಂದು ನಿಮಿಷ ಎಲ್ಲ. ಈ ಬಗ್ಗೆ ಕ್ಲಾರಿಟಿ ಸಿಗುವವರೆಗೆ ನಾನು ಇಲ್ಲಿಂದ ಮೂವ್ ಆಗಲ್ಲ. ಮಾನ ಮರ್ಯಾದೆ ಮೂರು ಕಳೆದುಕೊಳ್ಳೋಕೆ ಬಂದಿಲ್ಲ ಇಲ್ಲಿ. ನಾಳೆಯಿಂದ ಇಲ್ಲಿ ಇರಲ್ಲ ನಾನು ಎಂದು ಶಿಶಿರ್ ರೇಗಾಡಿದ್ದಾರೆ. ಸದ್ಯ ಚೈತ್ರಾ ಅವರು ನಿಜವಾಗಿಯೂ ಶಿಶಿರ್ ಅವರ ಬಗ್ಗೆ ಆ ರೀತಿ ಹೇಳಿದ್ದಾರಾ ಎಂಬುದು ಪ್ರಶ್ನೆಯಾಗಿದೆ.
BBK 11: ‘ನಾನು ಕುಗ್ಗೋ ಮಗಳೇ ಅಲ್ಲ’: ಮಂಜು ಮೈಂಡ್ ಗೇಮ್ಗೆ ಟಕ್ಕರ್ ಕೊಟ್ಟ ಐಶ್ವರ್ಯಾ