Sunday, 18th May 2025

IND vs AUS: ಅಡಿಲೇಡ್‌ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾಗೆ ಆಘಾತ! ಜಾಶ್‌ ಹೇಝಲ್‌ವುಡ್‌ ಔಟ್‌!

IND vs AUS: Australia will miss Pink-ball specialist Josh Hazlewood in Adelaide Test: Nathan Lyon

ಅಡಿಲೇಡ್‌: ಭಾರತ ವಿರುದ್ಧ ಡಿಸೆಂಬರ್‌ 6 ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೆ (IND vs AUS) ಜಾಶ್‌ ಹೇಝಲ್‌ವುಡ್‌ ಅಲಭ್ಯರಾಗಿದ್ದಾರೆಂದು ಆಸ್ಟ್ರೇಲಿಯಾ ತಂಡದ ಹಿರಿಯ ಸ್ಪಿನ್ನರ್‌ ನೇಥನ್‌ ಲಯಾನ್‌ ಬಹಿರಂಗಪಡಿಸಿದ್ದಾರೆ. ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಗೆ ನಿರಂತರ ಕೊಡುಗೆ ನೀಡುತ್ತಿರುವ ಹೇಝಲ್‌ವುಡ್‌ ಅವರ ಅಲಭ್ಯತೆ ಆತಿಥೇಯ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದಿದೆ.

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಜಾಶ್‌ ಹೇಝಲ್‌ವುಡ್‌ ಐದು ವಿಕೆಟ್‌ಗಳನ್ನು ಪಡೆದಿದ್ದರು. ಇದರ ಹೊರತಾಗಿಯೂ ಆಸ್ಟ್ರೇಲಿಯಾ ತಂಡ 295 ರನ್‌ಗಳಿಂದ ಸೋಲು ಅನುಭವಿಸಿತ್ತು. ಇದೀಗ ಅವರು ಹಿರಿಯ ವೇಗಿ ಜಾಶ ಹೇಝಲ್‌ವುಡ್‌ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಅವರು ಕೆಳ ದರ್ಜೆಯ ಎಡಗಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಂಪೂರ್ಣ ಫಿಟ್‌ನೆಸ್‌ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅಡಿಲೇಡ್‌ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೇಥನ್‌ ಲಯಾನ್‌, “ಇದು ನಿಜಕ್ಕೂ ಬೇಸರ ತಂದಿದೆ. ಕಳೆದ 4-5 ದಿನಗಳ ಹಿಂದೆ ಜಾಶ್‌ ಹೇಝಲ್‌ವುಡ್‌ ಅವರು ತಮ್ಮ ಗಾಯದ ಬಗ್ಗೆ ನನಗೆ ಹೇಳಿದ್ದರು. ಹೌದು ಅವರು ಅತ್ಯಂತ ಗುಣಮಟ್ಟದ ಬೌಲರ್‌. ಅವರು ತಂಡದ ಎಲ್ಲಾ ಆಟಗಾರರ ಜೊತೆ ಇದ್ದಾರೆ ಹಾಗೂ ಸಂಪೂರ್ಣ ಫಿಟ್‌ನೆಸ್‌ ಸಾಧಿಸಲು ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಮಂಗಳವಾರ ರಾತ್ರಿ ಅವರು ಟ್ರೈನಿಂಗ್‌ಗೆ ಹಾಜರಾಗಿದ್ದರು ಹಾಗೂ 90 ನಿಮಿಷಗಳ ಕಾಲ ಪುನಶಚೇತನ ಕಾರ್ಯದಲ್ಲಿಯೂ ತೊಡಗಿದ್ದರು. ಅವರು ನಿಜಕ್ಕೂ ಟೀಮ್‌ ಮ್ಯಾನ್‌. ಪ್ರತಿಯೊಬ್ಬರೂ ಮುಂದೆ ಬಂದು ಆಡಬೇಕೆಂಬ ಭಾವನೆ ಅವರಲ್ಲಿದೆ. ಈ ವಾರ ಏನಾಗಲಿದೆ ಎಂದು ಕಾದು ನೋಡೋಣ,” ಎಂದು ತಿಳಿಸಿದ್ದಾರೆ.

ಜಾಶ್‌ ಹೇಝಲ್‌ವುಡ್‌ ಅಲಭ್ಯತೆಯಲ್ಲಿ ಆಸ್ಟ್ರೇಲಿಯಾಗೆ ಸವಾಲು

ಜಾಶ ಹೇಝಲ್‌ವುಡ್‌ ಅವರು ಆಸ್ಟ್ರೇಲಿಯಾ ತಂಡಕ್ಕೆ ಡೇ ನೈಟ್‌ ಟೆಸ್ಟ್‌ ಪಂದ್ಯಕ್ಕೆ ಕೀ ಬೌಲರ್‌ ಆಗಿದ್ದಾರೆ. ಇಲ್ಲಿಯತನಕ ಬಲಗೈ ವೇಗಿ ಆಸ್ಟ್ರೇಲಿಯಾ ಪರ ಎಂಟು ಹೊನಲು ಬೆಳಕಿನ ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ ಹಾಗೂ 18.86ರ ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ಎರಡು ಬಾರಿ 5 ವಿಕೆಟ್‌ ಸಾಧನೆ ಮಾಡಿದ್ದಾರೆ. ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ಸಾಧನೆ ಕೂಡ ಜಾಶ್‌ ಹೇಝಲ್‌ವುಡ್‌ ಅವರ ಹೆಸೆರಿನಲ್ಲಿದೆ. ಅವರು 2015ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಮಾರ್ಟಿನ್‌ ಗಪ್ಟಿಲ್‌ ಅವರ ವಿಕೆಟ್‌ ಪಡೆದಿದ್ದರು. ಇದೀಗ ಜಾಶ ಹೇಝಲ್‌ವುಡ್‌ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾಗೆ ಭಾರಿ ಹಿನ್ನಡೆಯನ್ನು ತಂದೊಡ್ಡಲಿದೆ.

ಜಾಶ್‌ ಹೇಝಲ್‌ವುಡ್‌ ಸ್ಥಾನಕ್ಕೆ ಸ್ಕಾಟ್‌ ಬೋಲೆಂಡ್‌?

ಜಾಶ ಹೇಝಲ್‌ವುಡ್‌ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ XIನಲ್ಲಿ ಮತ್ತೊರ್ರವ ವೇಗಿ ಸ್ಕಾಟ್‌ ಬೋಲೆಂಡ್‌ ಆಡುವ ಸಾಧ್ಯತೆ ಇದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಕಾಟ್‌ ಬೋಲೆಂಡ್‌ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. ಆದರೆ, ಜಾಶ್‌ ಹೇಝಲ್‌ವುಡ್‌ ಅವರು ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಶ ಆಸೀಸ್‌ ಪತ ನಿಯಮಿತವಾಗಿ ಆಡುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದ ಆಯ್ಕೆಯೇ ಜಟಿಲ