ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ(Naga Chaithanya) ಮತ್ತು ಶೋಭಿತಾ ಧೂಳಿಪಾಲ(Sobitha Dhulipala) ಜೋಡಿ ಇಂದು ಹಸೆಮಣೆ ಏರಿದ್ದಾರೆ. ಆ ಮೂಲಕ ಈ ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ನವಜೋಡಿ ಹಸೆಮಣೆ ಏರುತ್ತಿದ್ದಂತೆ ಇತ್ತ ಅವರಿಬ್ಬರ ಈ ಹಿಂದಿನ ಡೇಟಿಂಗ್(Dating) ಫೋಟೋಗಳು ವೈರಲ್ ಆಗಿವೆ.
ತೆಲುಗು ಟಾಕ್ ಶೋ(Telugu Talk Show) ನ ಮೂರನೇ ಸಂಚಿಕೆಯ ವಿಡಿಯೊ ಟೀಸರ್ವೊಂದು ಸದ್ಯ ಅಮೆಜಾನ್ ಪ್ರೈಮ್ನಲ್ಲಿ ಅಪ್ಲೋಡ್ ಆಗಿದ್ದು, ಶೋ ನಲ್ಲಿ ನಟ ನಾಗ ಚೈತನ್ಯ ತಮ್ಮ ವೈಯಕ್ತಿಕ ಜೀವನದ ಕೆಲವು ವಿವರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹೊಸ ಟೀಸರ್ ನಲ್ಲಿ ನಾಗ ಚೈತನ್ಯ ತಮ್ಮ ಪತ್ನಿ ಶೋಭಿತಾ ಧೂಳಿಪಾಲ ಅವರೊಂದಿಗೆ ತೆಗೆಸಿಕೊಂಡಿರುವ ಕೆಲವು ಅಪರೂಪದ ಫೋಟೊಗಳನ್ನು ನೋಡಬಹುದು.
#NagaChaitanya shares unseen dating era pics with #SobhitaDhulipala on #TheRanaDaggubatiShow! #NagaChaitanyaSobhitaDhulipalaWeddinghttps://t.co/FdXKxNOMC8
— @zoomtv (@ZoomTV) December 4, 2024
ನಟ ರಾಣಾ ದಗ್ಗುಬಾಟಿ ಟಾಕ್ ಶೋ ಅನ್ನು ನಡೆಸಿಕೊಟ್ಟಿದ್ದಾರೆ. ಶೋಭಿತಾ ಧೂಳಿಪಾಲ ಅವರೊಂದಿಗಿನ ಹೊಸ ಮದುವೆ ಮತ್ತು ಹಲವು ವೈಯಕ್ತಿಕ ವಿಷಯಗಳ ಬಗ್ಗೆ ರಾಣಾ ಅವರೊಂದಿಗೆ ನಾಗ ಚೈತನ್ಯ ಮಾತನಾಡಿದ್ದಾರೆ. ದಗ್ಗುಬಾಟಿ ನಾಗ ಚೈತನ್ಯ ಅವರ ಸೋದರ ಸಂಬಂಧಿಯಾಗಿರುವುದರಿಂದ ಅವರು ತಮ್ಮ ಸಹೋದರಿ ಮಾಳವಿಕಾ ದಗ್ಗುಬಾಟಿ ಮತ್ತು ಪತ್ನಿ ಮಿಹೀಕಾ ಬಜಾಜ್ ಅವರನ್ನೂ ಕಾರ್ಯಕ್ರಮಕ್ಕೆ ಕರೆಸಿದ್ದಾರೆ. ಕುಟುಂಬಸ್ಥರೆಲ್ಲರೂ ನಾಗ ಚೈತನ್ಯ ಅವರ ಕಾಲೆಳೆದು ಸಾಕಷ್ಟು ಸೀಕ್ರೇಟ್ ವಿಷಯಗಳನ್ನು ಬಾಯಿ ಬಿಡಿಸಿದ್ದಾರೆ.
ಈಗ ಅಮೆಜಾನ್ ಪ್ರೈಮ್ನಲ್ಲಿ ಟಾಕ್ ಶೋ ನ ಪ್ರೋಮೋ ಲಭ್ಯವಿದ್ದು,ಅದರಲ್ಲಿ ನಿಶ್ಚಿತಾರ್ಥಕ್ಕೂ ಮೊದಲು ನಾಗ ಚೈತನ್ಯ ಮತ್ತು ಶೋಭಿತಾ ಜೋಡಿ ವಿದೇಶಿ ಪ್ರವಾಸದಲ್ಲಿ ತೆಗೆಸಿಕೊಂಡಿದ್ದ ಕೆಲವು ಅಪರೂಪದ ಡೇಟಿಂಗ್ ಫೋಟೋಗಳಿವೆ. ಪ್ರೋಮೋ ನೋಡಿರುವ ನಾಗ ಚೈತನ್ಯ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೆಲವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಜೋಡಿಯ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಟಾಕ್ ಶೋ ಹೋಸ್ಟ್ ಮಾಡಿದ ರಾಣಾ ದಗ್ಗುಬಾಟಿ ಪ್ರೋಮೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “Chay and me.. aren’t we a match made in heaven? #TheRanaDaggubatiShowOnPrime, new episode every Saturday only on @primevideoin” ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ನಲ್ಲಿ ತಮ್ಮ ಕುಟುಂಬಸ್ಥರನ್ನು ರಾಣಾ ದಗ್ಗುಬಾಟಿ ಟ್ಯಾಗ್ ಮಾಡಿದ್ದಾರೆ.
ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಜೋಡಿಯ ವಿವಾಹ ಸಮಾರಂಭವು ವೈಭವದಿಂದ ಇಂದು ನಡೆದಿದೆ. ಮದುವೆಗೆ ಚಿರಂಜೀವಿ, ನಂದಮೂರಿ, ಅಲ್ಲು, ರಾಣಾ ದಗ್ಗುಬಾಟಿ ಕುಟುಂಬ ಸಮೇತ ಆಗಮಿಸಿದ್ದರು ಎನ್ನಲಾಗಿದೆ. ಪ್ರಭಾಸ್, ಮಹೇಶ್ ಬಾಬು, ತಾರಕ್ ಮತ್ತು ರಾಮ್ ಚರಣ್ ಕೂಡ ವಿವಾಹದಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿಯಿದೆ. ನಾಗ ಚೈತನ್ಯ ಮದುವೆಗೆ ನಾಗಾರ್ಜುನ ಅವರು 200 ಕೋಟಿ ಖರ್ಚು ಮಾಡಿದ್ದಾರೆ. ಅದಲ್ಲದೆ ನಾಗ ಚೈತನ್ಯ ಮದುವೆಯ ನಂತರ ವಾಸಿಸಲು ಐಷಾರಾಮಿ ಮನೆಯನ್ನು ಕೂಡ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.
2022 ರಿಂದ ನಾಗ ಚೈತನ್ಯ – ಶೋಭಿತಾ ಪ್ರೀತಿಸುತ್ತಿದ್ದರು. ಇದೇ ವರ್ಷದ ಆಗಸ್ಟ್ 8 ರಂದು ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: Naga Chaitanya wedding: ಅದ್ಧೂರಿಯಾಗಿ ನಡೆಯಿತು ನಾಗ ಚೈತನ್ಯ- ಶೋಭಿತಾ ಅರಿಶಿನ ಶಾಸ್ತ್ರ