ಚಿಕ್ಕಬಳ್ಳಾಪುರ : ಫೆಂಗಲ್ ಚಂಡಮಾರುತವು ಜಿಲ್ಲೆಯಲ್ಲಿ ಮುಂದಿನ ೨೪ಗಂಟೆಗಳ ಕಾಲ ತೀವ್ರವಾಗಿ ಅಪ್ಪಳಿಸಲಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರವೂ ಕೂಡ ಅಂಗನವಾಡಿ ಸಹಿತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರವೂ ಕೂಡ ರಜೆಯಿರುವುದಾಗಿ ಜ್ಞಾಪನಾ ಪತ್ರ ಬಿಡುಗಡೆಗೊಳಿಸಿರುವ ಜಿಲ್ಲಾಧಿಕಾರಿಗಳು ಸದರಿ ಚಂಡಮಾರುತವು ಅತಿಯಾದ ಮಳೆ, ಚಳಿ, ಹಾಗೂ ಗಾಳಿಯಿಂದ ಕೂಡಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲಾ ಕಾಲೇಜುಗಳಿಗೆ, ಅಂಗನವಾಡಿ ಮಕ್ಕಳಿಗೆ ಡಿಸೆಂಬರ್ ೩ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.ಸದರಿ ರಜಾ ದಿನವನ್ನು ಮುಂದಿನ ರಜಾ ದಿನಗಳಲ್ಲಿ ಸರಿದೂಗಿಸಿ ಪಾಠಬೋಧನೆ ಮಾಡಲು ಸೂಚಿಸಿದ್ದಾರೆ.