Saturday, 10th May 2025

BY Vijayendra: ಅಭಿಪ್ರಾಯ ಸಂಗ್ರಹದಂಥದ್ದು ಏನೂ ಇಲ್ಲ; ವಿಜಯೇಂದ್ರ ಸ್ಪಷ್ಟನೆ

BY Vijayendra

ಬೆಂಗಳೂರು: ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ, ಸಕ್ರಿಯ ಸದಸ್ಯತ್ವ ಅಭಿಯಾನ, ಬೂತ್ ಸಮಿತಿಗಳ ರಚನೆ, ಮಂಡಲ ಅಧ್ಯಕ್ಷರನ್ನು ನೇಮಿಸುವ ‘ಸಂಘಟನಾ ಪರ್ವʼ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಕರ್ನಾಟಕದ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ಬೆಂಗಳೂರಿಗೆ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿದ ಅವರು, ಜಗನ್ನಾಥ ಭವನದ ನಮ್ಮ ರಾಜ್ಯ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ‘ಸಂಘಟನಾ ಪರ್ವʼ ಸಂಬಂಧಿತ ಸಭೆಗಳು ನಡೆಯುತ್ತಿವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Air India Flight: ಅಂಡಮಾನ್- ನಿಕೋಬಾರ್‌ ಪ್ರವಾಸಕ್ಕೆ ಹೋಗುವವರಿಗೆ ಸಿಹಿ ಸುದ್ದಿ

ಇದರಲ್ಲಿ ರಾಜಕೀಯ ಏನೂ ಇಲ್ಲ

ಇದರಲ್ಲಿ ರಾಜಕೀಯ ಏನೂ ಇಲ್ಲ. ಖಂಡಿತವಾಗಿ ಅಭಿಪ್ರಾಯ ಸಂಗ್ರಹದಂಥದ್ದು ಏನೂ ಇಲ್ಲ. ಅಭಿಪ್ರಾಯ ಸಂಗ್ರಹ ಮಾಡುವುದಾದರೆ ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಬರುತ್ತಿದ್ದರು. ತರುಣ್ ಚುಗ್ ಅವರು ಸಂಘಟನೆಗೆ ಸೀಮಿತವಾಗಿ ಬಂದಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಇದು ಮನವಿ ಕೊಡಲು ವೇದಿಕೆ ಅಲ್ಲ. ಇದು ಸಂಘಟನೆಗೆ ಸಂಬಂಧಿತ ಸಭೆ. ಅಭಿಪ್ರಾಯ ಹೇಳುವ ಕಾರ್ಯಕ್ರಮ ಇದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.