ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಹತ್ತನೇ ವಾರಕ್ಕೆ ಕಾಲಿಟ್ಟಿರುವ ಬಿಬಿಕೆ 11 ನಲ್ಲಿ ಒಂಬತ್ತನೇ ವಾರ ಶೋಭಾ ಶೆಟ್ಟಿ ಮನೆಯಿಂದ ಹೊರಹೋಗಿದ್ದಾರೆ. ಎಲಿಮಿನೇಷನ್ನಿಂದ ಪಾರಾದರೂ ತನ್ನ ಸ್ವ-ಇಚ್ಚೆಯ ಮೇಲೆ ಶೋಭಾ ಅವರು ಬಿಗ್ ಬಾಸ್ ತೊರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಎರಡೇ ವಾರಕ್ಕೆ ಇವರು ಬಿಗ್ ಬಾಸ್ನಿಂದ ಆಚೆ ಬಂದಿರುವುದು ವೀಕ್ಷಕರಿಗೆ ಬೇಸರ ತರಿಸಿದೆ.
ಎಲಿಮಿನೇಟ್ ಆಗುವ ಸ್ಪರ್ಧಿಗಳ ಲಿಸ್ಟ್ನಲ್ಲಿದ್ದ ಶೋಭಾ ಅವರನ್ನು ಭಾನುವಾರ ಸುದೀಪ್ ಅವರು ಸೇವ್ ಮಾಡಿದ್ದರು. ಕೊನೆಯಲ್ಲಿ ಐಶ್ವರ್ಯಾ ಹಾಗೂ ಶಿಶಿರ್ ಡೇಂಜರ್ ಝೋನ್ನಲ್ಲಿದ್ದರು. ಆದರೆ, ಈ ಸಂದರ್ಭ ಶೋಭಾ ಅವರು ನಾನೇ ಹೊರಹೋಗುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಾ ಶೆಟ್ಟಿ ಮನೆಯಿಂದ ವಾಕ್ ಔಟ್ ಆಗಿದ್ದಾರೆ.
ಕನ್ನಡ ಬಿಗ್ ಬಾಸ್ಗೆ ಶಾಕಿಂಗ್ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಶೋಭಾ ಮೊದಲ ದಿನವೇ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಅದರಲ್ಲೂ ಬಿಗ್ ಬಾಸ್ ಕೊಟ್ಟ ಟಾಸ್ಕ್ ಆಡುವಾಗ ಕೊನೆಯ ಕ್ಷಣದಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಇದೇ ಟಾಸ್ಕ್ ಆಡುವಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದರು. ಅಲ್ಲಿಂದ ಕೊಂಚ ಡಲ್ ಆದ ಶೋಭಾ ಟಾಸ್ಕ್ನಲ್ಲಿ ಮತ್ತೆ ಕತ್ತು ನೋವು ಮಾಡಿಕೊಂಡಿದ್ದರು. ಇದಾದ ಬಳಿಕ ಅವರ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದವು.
ಸೂಪರ್ ಸಂಡೇ ವಿತ್ ಬಾದ್ ಷಾ ಸುದೀಪನ ಕಾರ್ಯಕ್ರಮದಲ್ಲಿ ಏಕಾಏಕಿ ಸರ್ ನನಗೆ ಇಲ್ಲಿ ಇರೋದಕ್ಕೆ ಆಗುತ್ತಿಲ್ಲ ಅಂತ ಕಣ್ಣೀರು ಹಾಕಿದ್ದಾರೆ. ಕಿಚ್ಚ ಸುದೀಪ್ ಅನೇಕ ಬಾರಿ ಅರ್ಥ ಮಾಡಿಸುವ ಪ್ರಯತ್ನ ಪಟ್ಟರೂ ಶೋಭಾ ಕನ್ವೆನ್ಸ್ ಆಗಲಿಲ್ಲ. ಅಂತಿಮವಾಗಿ ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿನಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಾ ಮನೆಯಿಂದ ಔಟ್ ಆಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಇವರು ಈ ನಿರ್ಧಾರಕ್ಕೆ ಬಂದಿದ್ದಾರೆ.
BBK 11: ಟಿವಿ ವಾಹಿನಿಯಾಗಿ ಪರಿವರ್ತನೆಯಾದ ಬಿಗ್ ಬಾಸ್ ಮನೆ: ಗೌತಮಿಯ ಪಾಸಿಟಿವ್ ಮುಖವಾಡ ಕಳಚಿದ ಚೈತ್ರಾ