Sunday, 11th May 2025

BBK 11: ಬಿಗ್ ಬಾಸ್​ನಿಂದ ಶೋಭಾ ಶೆಟ್ಟಿ ದಿಢೀರ್ ಹೊರಬರಲು ಏನು ಕಾರಣ?: ಇಲ್ಲಿದೆ ಅಸಲಿ ವಿಚಾರ

Shobha Shetty

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ತಿರುವು ಪಡೆದುಕೊಂಡಿದೆ. ಇದುವರೆಗೆ ಯಾವುದೇ ಸೀಸನ್​ನಲ್ಲಿ ನಡೆಯದ ಒಂದು ಘಟನೆ ಈ ಬಾರಿಯ ಶೋನಲ್ಲಿ ಘಟಿಸಿದೆ. ನಾಮಿನೇಟ್ ಆಗಿ ಬಳಿಕ ಸೇವ್ ಆದರೂ ಮನೆಯಿಂದ ಹೊರಹೋಗಲು ಶೋಭಾ ಶೆಟ್ಟಿ ನಿರ್ಧಾರ ಮಾಡಿಕೊಂಡಿದ್ದಾರೆ. ಸ್ವಇಚ್ಚೆಯಿಂದ ಬಿಗ್ ಬಾಸ್​ನಿಂದ ವಾಕ್-ಔಟ್ ಆಗಲು ಶೋಭಾ ನಿರ್ಧಾರ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಸೇವ್ ಎಂದು ಹೇಳಿದರು ಶೋಭಾ ಹೊರಬರಲು ಕಾರಣ ಏನಿರಬಹುದು?.

ಒಂಬತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ವೇಳೆ ಟಾಪ್​ ಬಾಟಮ್​ನಲ್ಲಿ ಶಿಶಿರ್ ಹಾಗೂ ಐಶ್ವರ್ಯ ಇದ್ದರು. ಆದರೆ ಕೊನೆಯ ಕ್ಷಣದಲ್ಲಿ ಕಿಚ್ಚ ಸುದೀಪ್​ ಅವರ ಮುಂದೆ ಶೋಭಾ ಶೆಟ್ಟಿ, ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗುತ್ತಿಲ್ಲ. ನನಗೆ ವೋಟ್​ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ನಾನಿಲ್ಲಿ ಕಂಟಿನ್ಯೂ ಮಾಡೋಕೆ ಆಗಲ್ಲ ಅಂತ ಅನ್ನಿಸ್ತಾ ಇದೆ ಸರ್. ವೀಕ್ಷಕರ ನಿರೀಕ್ಷೆಯನ್ನು ನಾನು ಮುಟ್ಟುವುದಕ್ಕೆ ಆಗೋದಿಲ್ಲ ಅಂತ ಅನ್ನಿಸ್ತಾ ಇದೆ. ಹೊರಗಡೆ ಹೋಗಿ ಹೇಗೆ ಫೇಸ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ ಎಂದಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್​ ಕೂಡ ನಿಮಗೆ ಆಗೋದಿಲ್ಲ ಅಂದ್ರೆ ವೋಟ್​ ಮಾಡಿದ ಜನರಿಗೆ ಮೋಸ ಮಾಡಬೇಡಿ ಅಂತ ಹೇಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಇಂದಿನ ಸಂಚಿಕೆಯಲ್ಲಿ ಶೋಭಾ ಮನೆಯಿಂದ ಹೊರಬರಲಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಕಾಲಿಟ್ಟ ಶೋಭಾಗೆ ಮೊದಲ ಎರಡು-ಮೂರು ದಿನ ಬಿಟ್ಟರೆ ಮತ್ತೆ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ದಿನ ಕಳೆದಂತೆ ಅವರು ಡಲ್ ಆದರು. ಹೆಚ್ಚು ಕಾಣಿಸಿಕೊಳ್ಳಲೇ ಇಲ್ಲ. ಶೋಭಾ ಅವರು, ನನಗೆ ಅನಾರೋಗ್ಯ ಸಮಸ್ಯೆ ಆಗಿದೆ. ನನ್ನ ಕಾಲು ಸಹಕರಿಸುತ್ತಿಲ್ಲ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಶೋಭಾ ಶೆಟ್ಟಿ ಅವರು ಮನೆ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಂಡಿರೋದು ಅನಾರೋಗ್ಯ ಕಾರಣದಿಂದಲೇ ಎಂದು ಹೇಳಲಾಗುತ್ತಿದೆ.

ಟಾಸ್ಕ್ ಆಡುವಾಗ ಬಿದ್ದು ಅವರ ಕಾಲಿಗೆ ಪೆಟ್ಟಾಗಿತ್ತು. ಬಳಿಕ ಕತ್ತು ನೋವು ಕೂಡ ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಅವರು ಹೊರಹೋಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಶೋಭಾ ಹೊರಹೋದ ಕಾರಣ ಡೇಂಜರ್ ಝೋನ್​ನಲ್ಲಿದ್ದ ಐಶ್ವರ್ಯಾ ಹಾಗೂ ಶಿಶಿರ್ ಸೇವ್ ಆಗಿದ್ದಾರೆ.

BBK 11: ಯಾವ ನನ್ ಮಗ..: ರಂಜಿತ್​ಗೆ ತನ್ನದೇ ಶೈಲಿಯಲ್ಲಿ ಮಾತಿನ ಚಾಟಿ ಬೀಸಿದ ಸುದೀಪ್