Wednesday, 14th May 2025

ಬ್ಯಾಂಕಾಕ್‌ನಲ್ಲಿ ಜತೆಯಾದ ನಾರಿಯರು

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಯ ಸಾಲು ಸಾಲು ಚಿತ್ರಗಳು ತೆರೆಗೆ ಬರುತ್ತಿವೆ. ಆ ಸಾಲಿಗೆ ‘ಹನಿಮೂನ್ ಇನ್ ಬ್ಯಾಂಕಾಕ್’ ಚಿತ್ರವೂ ಸೇರಿದೆ. ಚಿತ್ರದ ಟೈಟಲ್ ಕೇಳಿದಾಕ್ಷಣ ನಗು ಉಕ್ಕಿ ಬರುತ್ತದೆ.

ಅಂತೆಯೇ ಚಿತ್ರದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದರ ಜತೆಗೆ ಲವ್, ಸಸ್ಪೆನ್ಸ್‌, ಹಾರರ್ ಕೂಡ ಚಿತ್ರದಲ್ಲಿ ಮಿಳಿತ ವಾಗಿದೆ. ಆ ಇಬ್ಬರು ತರ್ಲೆೆ ಹುಡುಗರು ಮೋಜಿಗಾಗಿ ಬ್ಯಾಂಕಾಕ್‌ಗೆ ತೆರಳುತ್ತಾರೆ. ಬ್ಯಾಂಕಾಕ್ ಅಂದಾಕ್ಷಣ ಇವರ ಮನದಲ್ಲಿ ಮೊದಲೇ ಇದ್ದ ಹಲವು ಆಸೆಗಳು ಅಲ್ಲಿ ಗರಿಬಿಚ್ಚಿಕೊಳ್ಳುತ್ತವೆ. ಹುಡುಗಾಟಿಕೆಯ ಬುದ್ದಿ ನಾರಿಯರ ಹಿಂದೆ ಬೀಳುವಂತೆ ಮಾಡುತ್ತದೆ.

ಹುಡಗಿಯರ ಹಿಂದೆ ಹೋದ ಮೇಲೆ ಮಾಮೂಲಿ ಪಜೀತಿ ಇವರನ್ನು ಪರಿಪರಿಯಾಗಿ ಕಾಡುತ್ತದೆ. ಇದೆಲ್ಲವನ್ನೂ ಹಾಸ್ಯ ಮಿಶ್ರಿತ ವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕರು. ಕಥೆಗೆ ಒಂದಷ್ಟು ಟ್ವಿಸ್ಟ್‌ ಕೊಡಲು ಹಾರರ್ ಅಂಶಗಳು ತೆರೆದುಕೊಳ್ಳುತ್ತವೆ. ಬ್ಯಾಂಕಾಕ್ ‌ನಲ್ಲಿ ಅವರು ತಂಗಿದ್ದ ಮನೆಯಲ್ಲಿ ಭೂತದ ಕಾಟ ಶುರುವಾಗುತ್ತದೆ. ಹೆಣ್ಣಿನ ಆತ್ಮವೊಂದು, ಇವರನ್ನು ಬೆನ್ನು ಬಿಡದೆ ಕಾಡು ತ್ತದೆ. ಹಾಗೆ ಕಾಡುವ ಆತ್ಮವಾದರೂ ಯಾವುದು ಅದಕ್ಕೂ ಈ ಇಬ್ಬರು ಯುವಕರಿಗೂ ಏನು ಸಂಬಂಧ ಎಂಬುದು ಚಿತ್ರದಲ್ಲಿ ತೆರೆದುಕೊಳ್ಳಲಿದೆಯಂತೆ.

‘ರನ್ 2’ ಚಿತ್ರವನ್ನು ನಿರ್ದೇಶಿಸಿದ್ದ ಸಂಜಯ್, ‘ಹನಿಮೂನ್ ಇನ್ ಬ್ಯಾಂಕಾಕ್’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಾಯಕನಾಗಿ ವಿವೇಕ್ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಉದಯ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ನಟಿ ವಿಶಾಲಾ ಹಾಗೂ ಪ್ರೇಕ್ಷಾ ಗ್ಲಾಮರ್ ಲುಕ್‌ನಲ್ಲಿ ಮಿಂಚಿ ದರೆ, ಬಾಂಬೆ ಬೆಡಗಿ ಅನನ್ಯಾ ಹಾರರ್ ಲುಕ್‌ನಲ್ಲಿ ಹೆದರಿಸಲಿದ್ದಾರೆ. ಇವರ
ಜತೆಗೆ ವಿಜಯ್ ಚೆಂಡೂರ್ ಕೂಡ ಚಿತ್ರದ ತಾರಾಗಣದಲ್ಲಿದ್ದು, ಕಾಮಿಡಿ ಕಚಗುಳಿ ಇಡಲಿದ್ದಾರೆ.

ಬ್ಯಾಂಕಾಕ್, ಬೆಂಗಳೂರು ಮತ್ತು ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ‘ಹನಿಮೂನ್ ಇನ್ ಬ್ಯಾಂಕಾಕ್’ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *