Thursday, 15th May 2025

Indian Passengers Stranded: ನೋ ಫುಡ್‌… ನೋ ಹೆಲ್ಪ್‌… ಬರೋಬ್ಬರಿ 13 ಗಂಟೆ ಕುವೈತ್‌ನಲ್ಲಿ ಭಾರತೀಯ ಪ್ರಯಾಣಿಕರ ಪರದಾಟ

kuwait

ಕುವೈತ್‌: ಮುಂಬೈನಿಂದ ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ವಿಮಾನವೊಂದು ಕುವೈತ್‌ನಲ್ಲಿ ತುರ್ತು ಭೂಸ್ಪರ್ಶ(Kuwait Airport) ಮಾಡಿದ್ದು, ಅದರಲ್ಲಿದ್ದ ಅನೇಕ ಭಾರತೀಯ ಪ್ರಯಾಣಿಕರು(Indian Passengers Stranded) ಊಟ-ತಿಂಡಿ ಇಲ್ಲದೇ ಬರೋಬ್ಬರಿ 13ಗಂಟೆಗಳ ಕಾಲ ಸಿಲುಕಿಕೊಂಡ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಗಲ್ಫ್‌ ಏರ್‌ವೇಸ್‌ ನಡೆಗೆ ಖಂಡನೆ ವ್ಯಕ್ತವಾಗಿದೆ.

ಏನಿದು ಘಟನೆ?

ಭಾರತೀಯರು ಗಲ್ಫ್‌ ಏರ್‌ ಮೂಲಕ ಬಹ್ರೇನ್‌ಗೆ ತೆರಳಿ ಅಲ್ಲಿಂದ ಅದೇ ಸಂಸ್ಥೆಯ ವಿಮಾನದಲ್ಲಿ ಮ್ಯಾಂಚೆಸ್ಟರ್‌ಗೆ ಹೊರಟಿದ್ದರು. ಬಹ್ರೇನ್‌ನಿಂದ ಟೇಕಾಫ್ ಆದ 20 ನಿಮಿಷದಲ್ಲಿ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ವಿಮಾನವನ್ನು ಕುವೈತ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

‘ಆದರೆ ವಿಮಾನ ನಿಲ್ದಾಣದಲ್ಲಿ ಐರೋಪ್ಯ ಒಕ್ಕೂಟ, ಬ್ರಿಟನ್‌ ಮತ್ತು ಅಮೆರಿಕ ಪ್ರಜೆಗಳಿಗೆ ಮಾತ್ರ ವಸತಿ, ಊಟ ಕೊಟ್ಟು ಭಾರತೀಯರನ್ನು ಗಲ್ಫ್‌ ಏರ್‌ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣ ಕಡೆಗಣಿಸಿದೆ. ಏಕೆಂದರೆ ಭಾರತೀಯ ಪ್ರಯಾಣಿಕರು ಈ ಸವಲತ್ತಿಗೆ ನಿಯಮಾನುಸಾರ ಅರ್ಹರಲ್ಲ ಎಂದು ಗಲ್ಫ್‌ ಏರ್‌ ಹೇಳಿದೆ’ ಎಂದು ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರು ಎಕ್ಸ್‌ನಲ್ಲಿ ಗಲ್ಫ್‌ ಏರ್‌ ಮತ್ತು ಏರ್ಪೋರ್ಟ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಈ ವಿಷಯವನ್ನು ಗಲ್ಫ್‌ ಏರ್‌ ಮುಂದೆ ಪ್ರಸ್ತಾಪಿಸಿ, ಸಮಸ್ಯೆ ಬಗೆಹರಿಸುವಂತೆ ಭಾರತ ಸರ್ಕಾರ ಕೋರಿಕೆ ಸಲ್ಲಿಸಿತ್ತು. ಇದಾದ ಬಳಿಕ ಕೊನೆಗೂ ಎಲ್ಲಾ ಪ್ರಯಾಣಿಕರನ್ನು ಅವರು ತೆರಳಬೇಕಾಗಿದ್ದ ಸ್ಥಳಕ್ಕೆ ಕಳುಹಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Viral News: ಹಸೆಮನೆ ಏರಬೇಕಾದವ ಸೇರಿದ್ದು ಮಸನಕ್ಕೆ; ಸಾವಿಗೂ ಮುನ್ನ ಮದುವೆ ಸಂಭ್ರಮದಲ್ಲಿದ್ದ ವರನ ವಿಡಿಯೊ ಫುಲ್‌ ವೈರಲ್‌!