ಒಂಬತ್ತನೇ ವಾರದ ಕಿಚ್ಚನ ಎಪಿಸೋಡ್ ಮುಕ್ತಾಯಗೊಂಡಿದ್ದು ಅನೇಕ ವಿಚಾರಗಳ ಕುರಿತು ಚರ್ಚೆ ನಡೆದಿದೆ. ಕಳೆದ ವಾರ ಬಿಗ್ ಬಾಸ್ (Bigg Boss) ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿತ್ತು. ಮೊದಲ ಎರಡು ದಿನ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದರು. ಆದರೆ, ಬುಧವಾರ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟರು. ಮನೆಗೆ ಯುವರಾಣಿಯಾಗಿ ಮೋಕ್ಷಿತಾ ಪೈ ಬಂದು ಮನೆ ಎರಡು ಬಣವಾಯಿತು.
ಯುವರಾಣಿಯ ಆಗಮನದಿಂದ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಜೊತೆಗೆ ಅನೇಕ ಜಗಳಗಳು ಕೂಡ ನಡೆದವು. ರಜತ್ ಹಾಗೂ ಮಂಜು ಬಾಯಿಂದ ಕೆಲ ಪದಕ ಬಳಕೆ ಕೂಡ ಆಗಿತ್ತು. ಇದರ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್, ಮನೆಗೆ ಬಂದಾಗಿನಿಂದಲೂ ಮನೆಯ ಇತರೆ ಸದಸ್ಯರ್ಯಾರಿಗೂ ಬಿಗ್ ಬಾಸ್ ಆಟ ಆಡಲು ಬರುವುದೇ ಇಲ್ಲವೆಂದು ಹೇಳುತ್ತಲೇ ಬಂದಿದ್ದಾರೆ. ವೀಕೆಂಡ್ನಲ್ಲಿ ಸುದೀಪ್ ಮುಂದೆ, ಮಂಜು ಬಗ್ಗೆ ರಜತ್ ದೂರು ಹೇಳಿದಾಗ ಸುದೀಪ್ ಇವರಿಗೆ ಸರಿಯಾಗಿ ಚಾಟಿ ಬೀಸಿದ್ದಾರೆ.
ಭಾರಿ ಆತ್ಮವಿಶ್ವಾಸದಿಂದ ತಾನು ಮಾಡಿದ್ದು, ತಾನು ಆಡಿದ ಮಾತು ಸರಿ ಎಂದು ವಾದಿಸುತ್ತಿದ್ದ ರಜತ್ಗೆ ಟಾಂಗ್ ಕೊಟ್ಟ ಸುದೀಪ್, ನೀವ್ಯಾರು ಚೆನ್ನಾಗಿ ಆಡುತ್ತಿಲ್ಲ ಎಂದು ಬಿಗ್ ಬಾಸ್ ನನ್ನನ್ನು ಕಳಿಸಿದ್ದಾರೆ ಎಂದು ಮಾತಿಗೆ ಮುಂಚೆ ನೀವು ಹೇಳುತ್ತೀರಿ. ಬಿಗ್ ಬಾಸ್ ನಿಮಗೆ ಇದನ್ನು ಹೇಳಿದ್ದಾರಾ? ಯಾರೂ ಚೆನ್ನಾಗಿ ಆಡುತ್ತಿಲ್ಲ ಎಂದು ನಿಮ್ಮನ್ನು ಕಳಿಸಿರುವುದಾ? ಯಾವ ನನ್ ಮಗ ನಿಮ್ಮನ್ನು ಒಳಗೆ ಕಳಿಸಬೇಕಾದರೆ ಆ ಮಾತು ಹೇಳಿದ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಂಜಿತ್ ಕಡೆಯಿಂದ ಯಾವುದೇ ಉತ್ತರವಿರಲಿಲ್ಲ.
ಇದೇವೇಳೆ ಸಂಬಂಧದ ಬಗ್ಗೆ ಪಾಠ ಮಾಡಿದ ಸುದೀಪ್, ಇಲ್ಲಿ ಯಾರೂ ಸಂಬಂಧ ಬೆಳೆಸಲು ಬಂದಿಲ್ಲ. ಈ ರಾಜನ ಆಟ ಮೊದಲಿಗೆ ಚೆನ್ನಾಗಿಯೇ ಟೇಕ್ ಓವರ್ ಆಯ್ತು. ಬರ್ತಾ ಬರ್ತಾ ಏನಾಯ್ತು ಮಂಜು ಅವರೆ? ಇಲ್ಲಿ ಪಾತ್ರವನ್ನೂ, ಸಂಬಂಧವನ್ನೂ ನಿಭಾಯಿಸುವಾಗ, ಈ ರೀತಿ ಆಗತ್ತೆ. ಈ ಸಂಬಂಧಗಳನ್ನೆಲ್ಲ ಸೂಟ್ಕೇಸ್ಗೆ ಹಾಕಿ ತುಂಬಿ ಇಡಿ. ಸಂಬಂಧ ಹೊರಗಡೆ ಬೆಳೆಸಿ, ಸದ್ಯಕ್ಕೆ ಬಿಗ್ ಬಾಸ್ನಲ್ಲಿ ಆಟ ಆಡಿ. ವೀಕ್ಷಕರಿಗೆ ಸಂಬಂಧದ ಬಗ್ಗೆ ನೋಡಲು ಹೊರಗಡೆ ಧಾರಾವಾಹಿ ಇದೆ ಎಂದು ಖಡಕ್ ಆಗಿ ಹೇಳಿದ್ದಾರೆ.
BBK 11: ಬಿಗ್ ಬಾಸ್ನಲ್ಲಿ ಮೆಗಾ ಟ್ವಿಸ್ಟ್: ಇಂದು ಮನೆಯಿಂದ ಹೊರಬರಲಿದ್ದಾರೆ ಈ ಸ್ಪರ್ಧಿ