ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆಟಗಾರರ ಮೆಗಾ ಹರಾಜು ಇತ್ತೀಚೆಗೆ ನಡೆದಿತ್ತು. ಹರಾಜು ಬಳಿಕ ಎಲ್ಲಾ 10 ತಂಡಗಳ ಸಂಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಭಾರತ ತಂಡದ ಮಾಜಿ ಆರ್ಂಭಿಕ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಆರ್ಸಿಬಿಯ ತನ್ನ ನೆಚ್ಚಿನ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, ಮೆಗಾ ಹರಾಜಿನಲ್ಲಿ ಆರ್ಸಿಬಿ ಖರೀದಿ ಮಾಡಿರುವ ಆಟಗಾರರ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ ಹಾಗೂ ಮುಂದಿನ ಆವೃತ್ತಿಯಲ್ಲಿ ಆರ್ಸಿಬಿ ತಂಡ ಕಟ್ಟ ಬಹುದಾವ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಿದ್ದಾರೆ. ಪ್ಲೇಯಿಂಗ್ XI ಜೊಇತೆಗೆ ಇಂಪ್ಯಾಕ್ಟ್ ಆಟಗಾರರನ್ನು ಕೂಡ ಉತ್ತಪ್ಪ ಆರಿಸಿದ್ದಾರೆ.
IPL 2025: ಆರ್ಸಿಬಿಗೆ ಸೇರಿದ ಬೆನ್ನಲ್ಲೆ 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಲಿಯಾಮ್ ಲಿವಿಂಗ್ಸ್ಟೋನ್!
ವಿರಾಟ್ ಕೊಹ್ಲಿ-ಫಿಲ್ ಸಾಲ್ಟ್ ಓಪನರ್ಸ್
ತಾವು ಆಯ್ಕೆ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ XIನಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅವರನ್ನು ರಾಬಿನ್ ಉತ್ತಪ್ಪ ಆರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಇನಿಂಗ್ಸ್ ಆರಂಭಿಸಿದ್ದ ಫಾಫ್ ಡು ಪ್ಲೆಸಿಸ್ ಅವರ ಬದಲು ಈ ಬಾರಿ ಫಿಲ್ ಸಾಲ್ಟ್ ಆರ್ಸಿಬಿಗೆ ಬಂದಿದ್ದಾರೆ. ಇನ್ನೂ ಮೂರನೇ ಕ್ರಮಾಂಕಕ್ಕೆ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆರಿಸಿದ್ದಾರೆ.
ಮಧ್ಯಮ ಕ್ರಮಾಂಕ
ಇನ್ನು ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕಕ್ಕೂ ಕೂಡ ರಾಬಿನ್ ಉತ್ತಪ್ಪ ಬಲಿಷ್ಠ ಬ್ಯಾಟ್ಸ್ಮನ್ಗಳನ್ನು ಆರಿಸಿದ್ದಾರೆ. ಕಳೆದ ಸೀಸನ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ರಜತ್ ಪಾಟಿದಾರ್ ಅವರನ್ನು ಉತ್ತಪ್ಪ ನಾಲ್ಕನೇ ಕ್ರಮಾಂಕಕ್ಕೆ ಆರಿಸಿದ್ದಾರೆ. ಇನ್ನು ಐದು ಹಾಗೂ ಆರನೇ ಕ್ರಮಾಂಕಗಳಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಅಥವಾ ಜಿತೇಶ್ ಶರ್ಮಾ ಅವರಲ್ಲಿ ಯಾರನ್ನು ಬೇಕಾದರೂ ಆಡಿಸಬಹುದು ಎಂದು ಸಿಎಸ್ಕೆ ಮಾಜಿ ಬ್ಯಾಟ್ಸ್ಮನ್ ತಿಳಿಸಿದ್ದಾರೆ.
IPL Auction 2025: ಆರ್ಸಿಬಿ ಸೇರಿದ ಭುವನೇಶ್ವರ್, ಕೃಣಾಲ್
ಇನ್ನು ಏಳನೇ ಕ್ರಮಾಂಕದಲ್ಲಿ ಸ್ಪಿನ್ ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ. ವಿಶೇಷ ಸ್ಪಿನ್ನರ್ ಸ್ಥಾನದಲ್ಲಿ ಕೃಣಾಲ್ ಆಡಲಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗಕ್ಕೆ ಭುವನೇಶ್ವರ್ ಕುಮಾರ್, ಜಾಶ್ ಹೇಝಲ್ವುಡ್, ನುವಾನ್ ತುಷಾರ್ ಹಾಗೂ ಯಶ್ ದಯಾಳ್ ಅವರನ್ನು ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ್ದಾರೆ. ಇನ್ನು ಇಂಪ್ಯಾಕ್ಟ್ ಪ್ಲೆಯರ್ ಆಗಿ ಸ್ವಪ್ನಿಲ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ.
ಪ್ಲೇಯಿಂಗ್ XI ಬಗ್ಗೆ ಮಾತನಾಡುವಾಗ ರಾಬಿನ್ ಉತ್ತಪ್ಪ ವಿಶೇಷವಾಗಿ ಭುವನೇಶ್ವರ್ ಕುಮಾರ್ ಹಾಗೂ ನುವಾನ್ ತುಷಾರ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭುವನೇಶ್ವರ್ ಕುಮಾರ್ ತಂಡಕ್ಕೆ ಕೀ ಬೌಲರ್ ಹಾಗೂ ನುವಾನ್ ತುಷಾರ್ ಬೌಲಿಂಗ್ ಫಾರ್ಮ್ಗೆ ಬಂದರೆ ಅವರು ಭಯಾನಕವಾಗಿ ಕಾಣಲಿದ್ದಾರೆಂದು ರಾಬಿನ್ ಉತ್ತಪ್ಪ ಭವಿಷ್ಯ ನುಡಿದಿದ್ದಾರೆ.
Bengaluru Bulls: ಆರ್ಸಿಬಿಗೆ ತಿವಿದ ಬೆಂಗಳೂರು ಬುಲ್ಸ್
ರಾಬಿನ್ ಉತ್ತಪ್ಪ ಆಯ್ಕೆಯ ಆರ್ಸಿಬಿಯ ಪ್ಲೇಯಿಂಗ್ XI
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜಾಶ್ ಹೇಝಲ್ವುಡ್, ನುವಾನ್ ತುಷಾರ್
ಇಂಪ್ಯಾಕ್ಟ್ ಪ್ಲೇಯರ್: ಸ್ವಪ್ನಿಲ್ ಸಿಂಗ್