Monday, 19th May 2025

Gujarat: ಸೂರತ್‌ನಲ್ಲಿ ವಿಷಾನಿಲ ಸೇವಿಸಿ ಮೂವರು ಬಾಲಕಿಯರ ಸಾವು!

Gujarat: 3 Girls Playing Around Garbage Bonfire Die Of 'Gas Poisoning' In Surat

ಸೂರತ್‌: ವಿಷಾನಿಲ ಸೇವಿಸಿ ಮೂವರು ಬಾಲಕಿಯರು ಸಾವಿಗೀಡಾಗಿರುವ ಘಟನೆ ಗುಜರಾತ್‌ನಲ್ಲಿ (Gujarat) ಸಂಭವಿಸಿದೆ.ಇನ್ನುಳಿದ ಇಬ್ಬರು ಬಾಲಕಿಯರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೂರತ್‌ ಜಿಲ್ಲೆಯ ಪಾಲಿ ಗ್ರಾಮದ ತೆರೆದ ಮೈದಾನದಲ್ಲಿ ಕಸದ ರಾಶಿಯನ್ನು ಸುಡಲಾಗುತ್ತಿತ್ತು. ಈ ವೇಳೆ ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅವರು ವಿಷಾನಿಲವನ್ನು ಸೇವಿಸಿದ್ದಾರೆ ಹಾಗೂ ಸ್ವಲ್ಪ ಸಮಯದ ಬಳಿಕ ಅವರು ವಾಂತಿ ಮಾಡಲು ಆರಂಭಿಸಿದ್ದರು. ಈ ಐವರು ಬಾಲಕಿಯರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಮೊಹಾಂತಿ (12), ಅಮಿತಾ ಮೊಹಾಂತಿ (14) ಹಾಗೂ ಅನಿತಾ ಮೊಹಾಂತಿ (8) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳಿದಿದ್ದಾರೆ.

“ಬಾಲಕಿಯರು ಕಸ ಸುಡುತ್ತಿದ್ದ ವಿಷಾನಿಲವನ್ನು ಉಸಿರಾಡಿದ್ದಾರೆ ಹಾಗೂ ವಾಂತಿ ಮಾಡಲು ಪ್ರಾರಂಭಿಸಿದರು ಹಾಗೂ ಪ್ರಜ್ಞೆ ತಪ್ಪಿ ನೆಲಕ್ಕೆ ಉರುಳಿದರು. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಇವರ ಪೈಕಿ ಮೂವರು ಬಾಲಕಿಯರು ಮೃತಪಟ್ಟಿದ್ದಾರೆ,” ಎಂದು ಸಚಿನ್‌ ಜಿಐಡಿಸಿ- 1 ಪೊಲೀಸ್‌ ಇನ್‌ಸ್ಪೆಕ್ಟರ್‌ ಜೆ ಆರ್‌ ಚೌಧರಿ ಮಾಹಿತಿ ನೀಡಿದ್ದಾರೆ.

ಈ ಮೂವರು ಬಾಲಕಿಯರ ಸಾವಿಗೆ ಪ್ರಮುಖ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪರೀಕ್ಷೆಗೆ ತಯಾರಿ ಮಾಡಲಾಗುತ್ತಿದೆ. ಇವುಗಳ ವರದಿ ಬಂದ ಬಳಿಕ ಬಾಲಕಿಯರ ಸಾವಿಗೆ ಕಾರಣವೇನೆಂದು ತಿಳಿಯಲಿದೆ,” ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ದುರ್ಗಾ ಮಹಾಂತಿಯನ್ನು ಮೊದಲಿಗೆ ನವಸಾರಿಯಲ್ಲಿರುವ ಸಿವಿಲ್‌ ಆಸ್ಪತ್ರೆಗೆ ಕರೆದೋಯ್ಯಲಾಗಿತ್ತು ಆದರೆ, ಅಲ್ಲಿನ ಸಿಬ್ಬಂದಿ ಮಧ್ಯ ರಾತ್ರಿ ಒಂದು ಗಂಟೆಗೆ ಹೊರಡುವಂತೆ ತಿಳಿಸಿದ್ದರು. ನಂತರ ನಾವು ಮತ್ತೊಂದು ಆಸ್ಪತ್ರೆಗೆ ತೆರಳಿದ್ದೆವು ಆದರೆ, ಶನಿವಾರ ಮುಂಜಾನೆ 06: 30 ಸಮಯಕ್ಕೆ ಆಕೆ ಸಾವಿಗೀಡಾಗಿದ್ದಾಳೆ ಎಂದು ದುರ್ಗಾ ಅವರ ಚಿಕ್ಕಮ್ಮ ತಿಳಿಸಿದ್ದಾರೆ.

ಅಸ್ವಸ್ಥರಾದ ಮಕ್ಕಳಿಗೆ ಮೊದಲಿಗೆ ಔಷಧಿಯನ್ನು ನೀಡಲಾಗಿತ್ತು. ಆದರೆ, ಇಬರಲ್ಲಿ ಒಬ್ಬರು ಚೇತರಿಸಿಕೊಂಡರು. ಆದರೆ, ದುರ್ಗಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿತ್ತು ಎಂದು ಆಕೆಯ ತಂದೆ ರಾಮ್‌ ಪ್ರವೇಶ್‌ ಮಹಾಂತೊ ಹೇಳಿದ್ದಾರೆ. “ಇದು ಹೇಗೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ. ನಾನು ಕೆಲಸ ಮುಗಿಸಿಕೊಂಡು ಮನೆಗೆ ಬಂದ ಬಳಿಕ ಮಕ್ಕಳನ್ನು ನೋಡಿ, ಅವರನ್ನು ಆಸ್ಪತ್ರೆಗೆ ಕರೆದುಕೊಂದು ಹೋಗಿದ್ದೆ,” ಎಂದು ಹೇಳಿದ್ದಾರೆ.

ನಾವು ಮೊದಲಿಗೆ ನವಸಾರಿ ಆಸ್ಪತ್ರೆಗೆ ತೆರಳಿದ್ದೆವು ಆದರೆ, ಅಲ್ಲಿನ ಸಿಬ್ಬಂದಿ ನಮಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು. ಏಕೆಂದರೆ ಬಾಲಕಿಯರಿಗೆ ವಿವಿಧ ಪರೀಕ್ಷೆಗಳನ್ನು ನೀಡಬೇಕಿತ್ತು. ಆದರೆ, ಈ ಆಸ್ಪತ್ರೆಯ ಲ್ಯಾಬ್‌ ಅನ್ನು ಮುಚ್ಚಲಾಗಿತ್ತು. ಅಲ್ಲದೆ, ವಾರಾಂತ್ಯದ ದಿನಗಳಲ್ಲಿ ಲ್ಯಾಬ್‌ ಅನ್ನು ಮುಚ್ಚಲಾಗಿರುತ್ತದೆ ಹಾಗಾಗಿ ಲ್ಯಾಬ್‌ ಟೆಸ್ಟ್‌ ವರದಿಗೆ ಎರಡು-ಮೂರು ದಿನಗಳ ಕಾಯಬೇಕಾಗುತ್ತದೆ.

ವಿಷಕಾರಿ ಹೊಗೆಯನ್ನು ಸೇವಿಸಿ ಬಾಲಕಿಯರು ಅಸ್ವಸ್ಥಗೊಂಡಿರಬಹುದು ಹಾಗೂ ಇದರಲ್ಲಿ ಕೆಲ ಬಾಲಕಿಯರು ಐಸ್‌ ಕ್ರೀಮ್‌ ಸೇವಿಸಿದ್ದರು. ಹಾಗಾಗಿ ಇದು ಫುಡ್‌ ಪಾಯಿಸನ್‌ ಆಗಿರಬಹುದು ಎಂದು ಸೂರತ್ ಸಿವಿಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೇತನ್ ನಾಯಕ್ ತಿಳಿಸಿದ್ದಾರೆ.