Saturday, 10th May 2025

By Election: ಉಪಚುನಾವಣೆ ಫಲಿತಾಂಶ ಸಿದ್ಧರಾಮಯ್ಯ ಸರಕಾರಕ್ಕೆ ಜನತೆ ಸರ್ಟಿಫಿಕೇಟ್ ನೀಡಿದೆ

ಚಿಂಚೋಳಿ: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಜನತೆ ಕಾಂಗ್ರೇಸ್ ಪರ ಕೊಟ್ಟು ರಾಜ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ಬಡವರ ಪರ ಇರುವ ಸರಕಾರವಿದೆ ಎಂದು ಎದುರಾಳಿಗೆ ಜನತೆ ಸಂದೇಶ ಕೊಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿ, ಕಾಂಗ್ರೇಸ್ ಸರಕಾರದ ಜನಪರ ಗ್ಯಾರೆಂಟಿಗಳ ಮುಂದೆ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿ ಗಳಿಗೆ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡು ತಮ್ಮ ಪುತ್ರರಿಗೆ ಗೆಲ್ಲಿಸಲಿಕ್ಕೆ ಸಾಧ್ಯವಾಗಲಿಲ್ಲ ಎಂದು ಕುಟುಕಿದರು. ಕೆಪಿಸಿಸಿ ಅಧ್ಯಕ್ಷ ಗಾದಿಗೆ ನಾನು ಆಸಕ್ತನಲ್ಲ ಎಂದರು.